CJ Roy Car Collection: ಸಿಜೆ ರಾಯ್ ಕಾರ್ ಕಲೆಕ್ಷನ್ ಹಾಗೂ ಅವುಗಳ ಬೆಲೆ ಕೇಳಿದ್ರೆ ದಂಗಾಗೋದು ಗ್ಯಾರಂಟಿ
CJ Roy Car Collection: ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಸಿ.ಜೆ. ರಾಯ್ ಅವರು ಭಾರತದ ಅಗ್ರ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪ್ರಮುಖ ವ್ಯಕ್ತಿ. ಸಾಮಾನ್ಯ ಹಿನ್ನೆಲೆಯಿಂದ ಬಂದು ಉದ್ಯಮ ಜೀವನವನ್ನು ಆರಂಭಿಸಿದ ಅವರು, ಮೊದಲಿಗೆ ಮಾರುತಿ 800 ಕಾರಿನಿಂದಲೇ ತಮ್ಮ ಪ್ರಯಾಣ ಆರಂಭಿಸಿದ್ದರು. ಹಾಗಾದ್ರೆ ಇವರ ಬಳಿ ಯಾವೆಲ್ಲಾ ಕಾರುಗಳ ಕಲೆಕ್ಷನ್ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಿ.ಜೆ. ರಾಯ್ ಅವರ ಗ್ಯಾರೇಜ್‌ನಲ್ಲಿ ರೋಲ್ಸ್-ರಾಯ್ಸ್, ಬುಗ್ಗಾಟಿ, ಲ್ಯಾಂಬೋರ್ಗಿನಿ, ಫೆರಾರಿ ಸೇರಿದಂತೆ ವಿಶ್ವದ ಅತ್ಯಂತ ದುಬಾರಿ ಮತ್ತು ಅಪರೂಪದ ಲಕ್ಸುರಿ ಕಾರುಗಳಿವೆ. ಶ್ರಮ, ದೃಢಸಂಕಲ್ಪ ಮತ್ತು ದೂರದೃಷ್ಟಿಯ ಮೂಲಕ ಶೂನ್ಯದಿಂದ ದೊಡ್ಡ ಮಟ್ಟಕ್ಕೆ ಬೆಳೆದು ನಿಂತ ಅವರ ಯಶಸ್ಸಿನ ಕಥೆ, ಅನೇಕ ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿದೆ.

₹1.10 ಲಕ್ಷಕ್ಕೆ ಮಾರುತಿ 800 ಕಾರು ಖರೀದಿ: ಕಾನ್ಫಿಡೆಂಟ್ ರಿಯಲ್ ಎಸ್ಟೇಟ್ ಗ್ರೂಪ್‌ನ ಅಧ್ಯಕ್ಷ ಹಾಗೂ ಸ್ಥಾಪಕ ಡಾ. ಸಿ.ಜೆ. ರಾಯ್ ಅವರು ತಮ್ಮ ಉದ್ಯಮ ಚಾತುರ್ಯಕ್ಕೆ ಮಾತ್ರವಲ್ಲ, ಸಾಮಾನ್ಯ ಆರಂಭದಿಂದ ದುಬಾರಿ ಸೂಪರ್ ಕಾರ್‌ಗಳ ಕಲೆಕ್ಷನ್ ಕೂಡ ಮಾಡಿದವರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅವರ ಪಯಣವು 1994ರಲ್ಲಿ ಆರಂಭವಾಗಿದ್ದು, 25 ವರ್ಷದ ವಯಸ್ಸಿನಲ್ಲಿ ₹1.10 ಲಕ್ಷಕ್ಕೆ ಮಾರುತಿ 800 ಕಾರನ್ನು ಖರೀದಿಸಿದ್ದರು.
ಹಲವು ವರ್ಷಗಳ ಕಾಲ ಕೆಂಪು ಬಣ್ಣದ ಮಾರುತಿ 800 ಕಾರನ್ನು ಬಳಸಿದ ನಂತರದ ದಿನಗಳಲ್ಲಿ ಅದನ್ನು ಮಾರಾಟ ಮಾಡಿ ಇತರೆ ಕಾರುಗಳನ್ನು ಕೊಂಡುಕೊಳ್ಳುವತ್ತ ಗಮನಹರಿಸಿದರು. ಅದರಂತೆಯೇ ದುಬಾರಿ ಬೆಲೆಯ ಕಾರುಗಳನ್ನೇ ಖರೀದಿ ಮಾಡಿದರು. ಆದರೆ, ಸುಮಾರು 27 ವರ್ಷಗಳ ಬಳಿಕ, ನೆನಪಾಗಿದ್ದ ಅದೇ 800 ಕಾರನ್ನು ಪತ್ತೆಹಚ್ಚಿ ಹೆಚ್ಚಿನ ಬೆಲೆಗೆ ಖರೀದಿ ಮಾಡಿದರು.
ಹತ್ತು ಪಟ್ಟು ಹಣ ಕೊಟ್ಟು ಅದೇ ಕಾರು ಮರುಖರೀದಿ: ಮಾರಾಟ ಮಾಡಲಾಗಿದ್ದ ಅದೇ ಮಾರುತಿ 800 ಕಾರನ್ನು ಪತ್ತೆಹಚ್ಚಿ 10 ಲಕ್ಷ ರೂಪಾಯಿಗೆ ಕೊಂಡುಕೊಂಡರು. ಅದರ ಮೂಲ ಬೆಲೆಯ ಹತ್ತು ಪಟ್ಟು ಹೆಚ್ಚಿನ ಹಣ ನೀಡಿ ಮರುಖರೀದಿಸಿದರು. ಈ ಘಟನೆಯನ್ನು ಸಿ.ಜೆ. ರಾಯ್ ಅವರೇ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ತಮ್ಮ ಮೊದಲ ಕಾರಿನೊಂದಿಗೆ ಇರುವ ಭಾವನಾತ್ಮಕ ಬಾಂಧವ್ಯವನ್ನು ಎತ್ತಿ ತೋರಿಸುವ ಈ ಕಥೆ ಭಾರೀ ವೈರಲ್ ಆಗಿತ್ತು.
ರಾಯ್ ಹೇಳಿದ್ದೇನು?: ಕೆಂಪು ಬಣ್ಣದ ಈ ಮಾರುತಿ 800 ಡಾ. ಸಿ.ಜೆ. ರಾಯ್ ಅವರ ಮೊದಲ ಕಾರು. ಇತ್ತೀಚೆಗೆ ಈ ಕಾರನ್ನು ₹10 ಲಕ್ಷಕ್ಕೆ ಮರುಖರೀದಿಸಿದ್ದಾರೆ. ಬಹುಕೋಟಿ ಬೆಲೆಯ ಲಕ್ಸುರಿ ಕಾರುಗಳನ್ನು ಹೊಂದಿದ್ದರೂ, ನೆನಪುಗಳು ಮತ್ತು ವೈಯಕ್ತಿಕ ಜೀವನದ ಪಯಣಕ್ಕೆ ಸಂಬಂಧಿಸಿದ್ದರಿಂದ ಈ ವಾಹನವೇ ತಮಗೆ ಅತ್ಯಂತ ವಿಶೇಷವೆಂದು ಅವರು ಹೇಳಿಕೊಂಡಿದ್ದಾರೆ.
ಲಕ್ಸುರಿ ಮತ್ತು ಸೂಪರ್ ಕಾರ್‌ಗಳ ಕಲೆಕ್ಷನ್
* Bugatti Veyron: ಅತೀ ವೇಗ ಮತ್ತು ಅತ್ಯುನ್ನತ ತಂತ್ರಜ್ಞಾನ ಒಳಗೊಂಡ ಈ ಹೈಪರ್ ಕಾರ್ ಬಿಡುಗಡೆ ಸಮಯದಲ್ಲಿ ಅಂದಾಜು ₹16 ಕೋಟಿಗೂ ಹೆಚ್ಚು ಮೌಲ್ಯ.
* Koenigsegg Agera: ಇದು ಸ್ವೀಡಿಷ್ ತಯಾರಕರಿಂದ ನಿರ್ಮಿಸಲ್ಪಟ್ಟ ಅತಿವೇಗದ ಮತ್ತು ಐಷಾರಾಮಿ ಹೈಪರ್‌ಕಾರ್ ಆಗಿದೆ. ಭಾರತದಲ್ಲಿ ನೋಂದಣಿ ಮಾಡಿದರೆ, ಅಂದಾಜು ₹12 ಕೋಟಿಗೂ ಹೆಚ್ಚು ಮೌಲ್ಯ.
* Ferrari Models (458, SF90, 812 ಸೂಪರ್ ಫಾಸ್ಟ್): ಅತಿ ವೇಗ ಮತ್ತು ವೈಭವದ ಅಪರೂಪದ ಕಾರುಗಳು ಇವೆವಾಗಿದ್ದು, SF90 ಮಾದರಿ ಕಾರಿನ ಮೌಲ್ಯ ಸುಮಾರು ₹7.5 ಕೋಟಿ.
* McLaren 720S: ಗರಿಷ್ಠ ವೇಗ ಮತ್ತು ಅತ್ಯುತ್ತಮ ಹ್ಯಾಂಡ್ಲಿಂಗ್‌ಗೆ ಹೆಸರಾದ ಸೂಪರ್‌ಕಾರ್ ಇದಾಗಿದೆ.
* Lamborghini Huracán & Aventador: ಇವು ಇಟಾಲಿಯನ್ ಲಕ್ಸುರಿ ಸೂಪರ್‌ಕಾರುಗಳಾಗಿದ್ದು, ಆನ್-ರೋಡ್ ಬೆಲೆ ಅಂದಾಜು ₹5ರಿಂದ ₹8.5 ಕೋಟಿ ಅಥವಾ ಅದಕ್ಕಿಂತ ಹೆಚ್ಚು.
ರೋಲ್ಸ್-ರಾಯ್ಸ್ ಕಾರುಗಳು
* Phantom VIII - ರೋಲ್ಸ್-ರಾಯ್ಸ್‌ನ ಫ್ಲ್ಯಾಗ್‌ಶಿಪ್ ಸೆಡಾನ್‌ನ ಆನ್-ರೋಡ್ ಬೆಲೆ ಅಂದಾಜು ₹10 ರಿಂದ ₹12 ಕೋಟಿಗೂ ಹೆಚ್ಚು.
* Wraith, Spectre and Ghost ಸೇರಿದಂತೆ ಹಲವು ರೋಲ್ಸ್-ರಾಯ್ಸ್ ಕಾರುಗಳು ಅವರ ಬಳಿಯಿವೆ. ಇವುಗಳ ಪ್ರತಿಯೊಂದರ ಮೌಲ್ಯವೂ ಕೋಟಿ ಲೆಕ್ಕದಲ್ಲಿದೆ.
ಇತರೆ ಐಷಾರಾಮಿ ವಾಹನಗಳು
* Bentley Continental GT: ಇದು ಅತಿವೈಭವದ ಗ್ರ್ಯಾಂಡ್ ಟೂರರ್ ಕಾರಾಗಿದ್ದು, ಆನ್-ರೋಡ್ ಬೆಲೆ ಅಂದಾಜು ₹5 ರಿಂದ ₹8 ಕೋಟಿಗೂ ಹೆಚ್ಚು.
* ಇತರೆ ಲಕ್ಸುರಿ ಎಸ್‌ಯುವಿಗಳು ಹಾಗೂ ಹೈ-ಎಂಡ್ ಬ್ರ್ಯಾಂಡ್ ವಾಹನಗಳನ್ನು ಹೊಂದಿದ್ದಾರೆ. ಜಾಗತಿಕ ಬಿಲಿಯನೇರ್‌ಗಳ ಗ್ಯಾರೇಜ್‌ಗಳಲ್ಲಿ ಕಾಣಸಿಗುವಂತಹ ವಿವಿಧ ಪ್ರೀಮಿಯಂ ಎಸ್‌ಯುವಿಗಳು ಮತ್ತು ಐಷಾರಾಮಿ ಕಾರುಗಳ ಕಲೆಕ್ಷನ್ ಸಹ ಅವರ ಬಳಿಯಿವೆ.
ಎಲ್ಲೆಲ್ಲಿ ಯಾವ ಕಾರುಗಳಿವೆ?
* ದುಬೈ ಗ್ಯಾರೇಜ್‌ನಲ್ಲಿ ಹೆಚ್ಚಿನ ಹೈಪರ್‌ಕಾರ್‌ಗಳನ್ನು ಇಲ್ಲಿ ಇರಿಸಲಾಗಿದ್ದು, ಇದು ರಾಯ್ ಕುಟುಂಬದ ವಾಸಸ್ಥಳವಾಗಿರುವುದನ್ನು ಪ್ರತಿಬಿಂಬಿಸುತ್ತದೆ.
* ಭಾರತದಲ್ಲಿ ರೋಲ್ಸ್-ರಾಯ್ಸ್ ಫ್ಯಾಂಟಮ್ VIII ಸೇರಿದಂತೆ ಲಕ್ಸುರಿ ಕಾರುಗಳನ್ನು ಹೊಂದಿದ್ದಾರೆ. ಇನ್ನೂ ಸಿಜೆ ರಾಯ್ ಅವರ ಪುತ್ರ ರೋಹಿತ್ ರಾಯ್ ಅವರು ಈ ಕಾರು ಸಂಗ್ರಹದ ಸಂರಕ್ಷಣೆ ಹಾಗೂ ವಿಸ್ತರಣೆಯ ಜವಾಬ್ದಾರುಯನ್ನು ಹೊತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಸಂಪೂರ್ಣ ಕಾರು ಸಂಗ್ರಹದ ಮೌಲ್ಯವು ದಶಕೋಟಿ ರೂಪಾಯಿಗಳ ಲೆಕ್ಕದಲ್ಲಿದ್ದು, ಇವರ ಈ ಕಾರ್ ಕಲೆಕ್ಷನ್ ಕ್ರೇಜ್ ವಿಶ್ವದಾದ್ಯಂತ ಕಾರು ಪ್ರಿಯರ ಗಮನ ಸೆಳೆಯುತ್ತಿದೆ. ಹೈಪರ್‌ಕಾರ್‌ಗಳಿಂದ ಹಿಡಿದು ಅಲ್ಟ್ರಾ-ಲಕ್ಸುರಿ ಸೆಡಾನ್‌ಗಳವರೆಗೆ ಜಗತ್ತಿನ ಅತ್ಯಂತ ಅಪರೂಪದ ಮತ್ತು ದುಬಾರಿ ಕಾರುಗಳ ಕಲೆಕ್ಷನ್ ಇವರ ಬಳಿಯಿದೆ.
ಭಾರತದಲ್ಲಿ ಈ ಕಾರುಗಳ ಆನ್-ರೋಡ್ ಅಂದಾಜು ಬೆಲೆ
* ರೋಲ್ಸ್-ರಾಯ್ಸ್ ಫ್ಯಾಂಟಮ್: ₹10 ರಿಂದ 12 ಕೋಟಿಗೂ ಅಧಿಕ
* ರೋಲ್ಸ್-ರಾಯ್ಸ್ ಕುಲ್ಲಿನನ್: ₹10 ರಿಂದ 12 ಕೋಟಿ
* ರೋಲ್ಸ್-ರಾಯ್ಸ್ ಘೋಸ್ಟ್: ₹9 ರಿಂದ 10.5 ಕೋಟಿ
* ರೋಲ್ಸ್-ರಾಯ್ಸ್ ಸ್ಪೆಕ್ಟರ್: ಸುಮಾರು ₹7.5 ಕೋಟಿ
* ಬೆಂಟ್ಲಿ ಕಾಂಟಿನೆಂಟಲ್ ಜಿಟಿ: ₹5 ರಿಂದ 8 ಕೋಟಿಗೂ ಅಧಿಕ
* ಫೆರಾರಿ SF90: ಸುಮಾರು ₹7.5 ಕೋಟಿ
* ಲ್ಯಾಂಬೋರ್ಗಿನಿ ಅವೆಂಟಾಡರ್ / ಹುರಾಕನ್: ₹5 ರಿಂದ 8.5 ಕೋಟಿಗೂ ಅಧಿಕ
* ಬುಗಾಟಿ ವೆರಾನ್: ₹16 ಕೋಟಿಗೂ ಅಧಿಕ
* ಕೊಯೆನಿಗ್ಸೆಗ್ ಅಗೇರಾ: ಸುಮಾರು ₹12 ಕೋಟಿಗೂ ಅಧಿಕ












Click it and Unblock the Notifications