Get Updates
Get notified of breaking news, exclusive insights, and must-see stories!

ಭಾರತದಲ್ಲಿ ಬಿಟ್‌ ಕಾಯಿನ್ ಖರೀದಿಸಬಯಸುವ ನವ ಹೂಡಿಕೆದಾರರಿಗೆ ಇಲ್ಲಿದೆ, ವಿಶ್ವಸನೀಯ ಮಾರ್ಗದರ್ಶಿ

ಭಾರತೀಯ ಸ್ಟಾಕ್ ಮಾರುಕಟ್ಟೆಯಲ್ಲಿನ ರಿಟೇಲ್ ಹೂಡಿಕೆದಾರರು ಡಿಜಿಟಲ್ ಆಸ್ತಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವಂತಿದೆ, ಕಾಯಿನ್ ಸ್ವಿಚ್ನಂತಹ (CoinSwitch) ಕ್ರಿಪ್ಟೋ ಟ್ರೇಡಿಂಗ್ ಪ್ಲಾಟ್ಫಾರ್ಮ್ಗಳು 2 ಕೋಟಿಯಷ್ಟು ನೋಂದಾಯಿತ ಬಳಕೆದಾರರನ್ನು ಹೊಂದಿರುವ ವರದಿ ಮಾಡುತ್ತಿವೆ. ಈ ಹಲವು ವಿನಿಮಯ ಕೇಂದ್ರಗಳಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ಕ್ರಿಪ್ಟೋ ಸ್ವತ್ತು ಬಿಟ್‌ ಕಾಯಿನ್ ಆಗಿರುವುದು ಆಶ್ಚರ್ಯವೇನಿಲ್ಲ, ಕಾರಣ ಇದು ವಿಶ್ವದ ಪ್ರವರ್ತಕ ಕ್ರಿಪ್ಟೋ ಆಗಿದೆ.

ಹಣಕಾಸಿನ ಸ್ವತ್ತುಗಳಿಗೆ ಹೆಚ್ಚುತ್ತಿರುವ ಬೇಡಿಕೆ ಒಂದು ವಿಷಯವಾದರೆ, ಈ ಸ್ವತ್ತುಗಳನ್ನು ಸಲೀಸಾಗಿ ಖರೀದಿಸುವುದು ಇನ್ನೊಂದು ವಿಷಯವಾಗಿದೆ. ಖಚಿತವಾಗಿ ಹೇಳಬೇಕೆಂದರೆರೆ, CoinSwitch ಮತ್ತು WazirX ನಂತಹ ಕ್ರಿಪ್ಟೋ ಪ್ಲಾಟ್ಫಾರ್ಮ್ಗಳು ಬಿಟ್‌ ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳನ್ನು ಖರೀದಿಸಲು ಸುರಕ್ಷಿತ ಗೇಟ್ವೇಅನ್ನು ಒದಗಿಸುತ್ತವೆ. CoinSwitch ನಂತಹ ಪ್ಲಾಟ್ಫಾರ್ಮ್ಗಳೊಂದಿಗೆ, ವ್ಯಾಪಾರಿಗಳು ಬಿಟ್ಕಾಯಿನ್ ದರಗಳನ್ನು ರಿಯಲ್ ಟೈಮ್ನಲ್ಲಿ INR ಆಗಿ ಪರಿವರ್ತಿಸಬಹುದು, ಇದರ ಜೊತೆಗೆ ಈ ಲೇಖನದಲ್ಲಿ ನಾವು ಇನ್ನಷ್ಟು ವೈಶಿಷ್ಟ್ಯಗಳನ್ನುವಿವರವಾಗಿ ಚರ್ಚಿಸೋಣ

CoinSwitch Here is a reliable guide for new investors who want to buy Bitcoin in India

ಭಾರತದಲ್ಲಿ ಬಿಟ್‌ ಕಾಯಿನ್ ಖರೀದಿಯ ಮಾರ್ಗದರ್ಶಿ

ಹಲವಾರು ಕ್ರಿಪ್ಟೋ ವಿನಿಮಯ ವೇದಿಕೆಗಳು ಹೂಡಿಕೆದಾರರ ಅನನ್ಯ ಅಗತ್ಯಗಳನ್ನು ಪೂರೈಸುತ್ತಿರುವುದರಿಂದ ಭಾರತದಲ್ಲಿ ಬಿಟ್‌ ಕಾಯಿನ್ ಅನ್ನು ಖರೀದಿಸುವುದು ಸುಲಭವಾಗಿಲ್ಲ. ಭಾರತದಲ್ಲಿ ಬಿಟ್‌ ಕಾಯಿನ್ ಅನ್ನು ಹೇಗೆ ಖರೀದಿಸಬೇಕು ಎಂಬುದರ ಕುರಿತಾದ ವಿವರವಾದ ಮಾರ್ಗದರ್ಶಿ ಇಲ್ಲಿದೆ.

ಹಂತ 1: ಸೂಕ್ತ ಕ್ರಿಪ್ಟೋ ವಿನಿಮಯ ಕೇಂದ್ರವನ್ನು ಆಯ್ಕೆಮಾಡಿ

ಅನೇಕ ಆಯ್ಕೆಗಳನ್ನು ಲಭ್ಯವಿರುವುದರಿಂದ, ಕ್ರಿಪ್ಟೋ ವಿನಿಮಯ ಕೇಂದ್ರವನ್ನು ಆಯ್ಕೆಮಾಡುವುದು ತುಂಬಾ ಸುಲಭವೆಂಬಂತೆ ಕಾಣುತ್ತದೆ. ಆದರೂ, ಹೂಡಿಕೆದಾರರು ಆಯ್ಕೆಯಲ್ಲಿ ಸ್ವಲ್ಪ ಶ್ರದ್ಧೆವಹಿಸುವ ಅಗತ್ಯವಿರುತ್ತದೆ. ಸರ್ಕಾರಿ ನಿಯಂತ್ರಕ ಅಗತ್ಯತೆಗಳನ್ನು ಸಂಪೂರ್ಣವಾಗಿ ಅನುಸರಿಸುತ್ತಿರುವ ಪ್ರತಿಷ್ಠಿತ ಕ್ರಿಪ್ಟೋ ವಿನಿಮಯ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಿ. ಈ ವಿನಿಮಯ ಕೇಂದ್ರವು ನಿಮಗೆ ವಹಿವಾಟು ಕೈಗೊಳ್ಳಲು ಸುರಕ್ಷಿತ ವೇದಿಕೆಯನ್ನು ನೀಡುವುದರ ಜೊತೆಗೆ, ಆಯ್ಕೆ ಮಾಡಲು ಕ್ರಿಪ್ಟೋಗಳ ಸರಳ ವಿಂಗಡಣೆಯನ್ನು ಸಹ ನೀಡಬೇಕು.

ನೀವು ಬಳಸಲು ಉದ್ದೇಶಿಸಿರುವ ಟ್ರೇಡಿಂಗ್ ಅಪ್ಲಿಕೇಶನ್ ಮೇಲಿನ ಎಲ್ಲಾ ಬಾಕ್ಸ್ಗಳನ್ನು ಟಿಕ್ ಮಾಡುತ್ತಿದ್ದರೆ, ನೀವು ಈ ಅಪ್ಲಿಕೇಶನ್ ಅನ್ನು Google Play Store ಅಥವಾ App Store ನಿಂದ ಡೌನ್ಲೋಡ್ ಮಾಡಬಹುದು.

ಹಂತ 2: ಖಾತೆಯ್ನನು ಕ್ರಿಯೇಟ್ ಮಾಡಿ ಮತ್ತು KYC ಅನ್ನು ಪೂರ್ಣಗೊಳಿಸಿ

ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ನೋಂದಾಯಿಸಲಾದ ಫೋನ್ ಸಂಖ್ಯೆಯನ್ನು ಬಳಸಿಕೊಂಡು ಖಾತೆಗೆ ಸೈನ್ ಅಪ್ ಮಾಡಿ. ಕ್ರಿಪ್ಟೋ ಟ್ರೇಡಿಂಗ್ ಅಪ್ಲಿಕೇಶನ್ನೊಂದಿಗೆ ಖಾತೆಗೆ ಸೈನ್ ಅಪ್ ಮಾಡುವಾಗ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (ಕೆವೈಸಿ) ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಆದ್ದರಿಂದ, ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ನಂತಹ ದಾಖಲೆಗಳನ್ನು ಒದಗಿಸುವ ಮೂಲಕ ನೀವು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಹಂತ 3: ಬ್ಯಾಂಕ್ ವಿವರಗಳನ್ನು ಸೇರಿಸಿ

KYC ಪ್ರಕ್ರಿಯೆಯು ಪೂರ್ಣಗೊಂಡ ನಂತರ, ನಿಮ್ಮ ಬ್ಯಾಂಕ್ ವಿವರಗಳನ್ನು ಸೇರಿಸಿ ಮತ್ತು ಅವುಗಳನ್ನು ಪರಿಶೀಲಿಸಿಕೊಳ್ಳಿ, ಇದರಿಂದ ನೀವು ಸರಳವಾಗಿ ಮುಂದಿನ ಹಂತಕ್ಕೆ ಮುಂದುವರಿಯಬಹುದು. ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಿದ ನಂತರ, ನೀವು ನಿಮ್ಮ ವ್ಯಾಲೆಟ್ಗೆ ಹಣವನ್ನು ಜಮಾ ಮಾಡಬಹುದು. ನೀವು ಖರೀದಿಸಲು ಯೋಚಿಸುತ್ತಿರುವ BTC ಯ ಪ್ರಮಾಣವನ್ನು ಅವಲಂಬಿಸಿ, ನೀವು ಹಣವನ್ನು ಜಮೆ ಮಾಡಬಹುದು.

ಹಂತ 4: ನಿಮ್ಮ ಬಿಟ್‌ ಕಾಯಿನ್ ಅನ್ನು ಆರ್ಡರ್ ಮಾಡಿ

ನಿಮ್ಮ ಕ್ರಿಪ್ಟೋ ವಹಿವಾಟು ಪಾಲುದಾರರನ್ನು ಅವಲಂಬಿಸಿ ಖರೀದಿ ಪ್ರಕ್ರಿಯೆಯು ಸ್ವಲ್ಪ ಭಿನ್ನವಾಗಿರಬಹುದು. ಉದಾಹರಣೆಗೆ, ನೀವು CoinSwitch ಮೂಲಕ ಬಿಟ್‌ ಕಾಯಿನ್ ಅನ್ನು ಖರೀದಿಸುತ್ತಿದ್ದರೆ, ಅಪ್ಲಿಕೇಶನ್ನಲ್ಲಿ "ಮಾರುಕಟ್ಟೆ" ವಿಭಾಗಕ್ಕೆ ಹೋಗಿ, BTC ಆಯ್ಕೆಮಾಡಿ, "ಖರೀದಿ" ಕ್ಲಿಕ್ ಮಾಡಿ ಮತ್ತು ಮೊತ್ತವನ್ನು ನಮೂದಿಸಿ. ಆದರೆ ನೀವು ಇದನ್ನು ಮಾಡುವ ಮೊದಲು, INR ನಲ್ಲಿ BTC ಯ ಪ್ರಸ್ತುತ ಬೆಲೆಯನ್ನು ನೀವು ಸರಿಯಾಗಿ ತಿಳಿದಿದ್ದಿರೀ ಎಂದು ಖಚಿತಪಡಿಸಿಕೊಳ್ಳಿ. ಖರೀದಿಸಲು ಮುಂದುವರಿಯುವ ಮೊದಲು ನೀವು ಪ್ರಸ್ತುತ ಬಿಟ್‌ ಕಾಯಿನ್ ಬೆಲೆಯನ್ನು ಇಲ್ಲಿ ಪರಿಶೀಲಿಸಬಹುದು.

ಹಂತ 5: ನಿಮ್ಮ ಬಿಟ್‌ ಕಾಯಿನ್ ಅನ್ನು ಸುರಕ್ಷಿತ ವ್ಯಾಲೆಟ್ನಲ್ಲಿ ಸಂಗ್ರಹಿಸಿ

ಒಮ್ಮೆ ನೀವು ಕ್ರಿಪ್ಟೋ ವಿನಿಮಯದಿಂದ ನಿಮ್ಮ ಬಿಟ್‌ ಕಾಯಿನ್ ಅನ್ನು ಖರೀದಿಸಿದರೆ, ಅದನ್ನು ಸುರಕ್ಷಿತವಾಗಿ ಸಂಗ್ರಹಿಸುವುದು ಮುಂದಿನ ಹಂತವಾಗಿದೆ. ಬಿಟ್‌ ಕಾಯಿನ್‌ನಂತಹ ನಿಮ್ಮ ಕ್ರಿಪ್ಟೋಗಳನ್ನು ನೀವು ಖರೀದಿಸಿದ ಪ್ಲಾಟ್ಫಾರ್ಮ್ನೊಂದಿಗೆ ಇಟ್ಟುಕೊಳ್ಳುವುದು ಅನುಭವಿ ಹೂಡಿಕೆದಾರರಿಂದ ಅತ್ಯಂತ ಅಪಾಯಕಾರಿ ಎಂದು ಪರಿಗಣಿತವಾಗಿದೆ.

ಆದ್ದರಿಂದ, ನಿಮ್ಮ BTC ಹಿಡುವಳಿಗಳು ಸುರಕ್ಷಿತವೆಂದು ಖಚಿತಪಡಿಸಿಕೊಳ್ಳಲು ಕ್ರಿಪ್ಟೋ ವ್ಯಾಲೆಟ್ನಲ್ಲಿ ಹೂಡಿಕೆ ಮಾಡಲು ಶಿಫಾರಸು ಮಾಡಲಾಗಿದೆ. ಕ್ರಿಪ್ಟೋ ವ್ಯಾಲೆಟ್ಗಳಲ್ಲಿ ಪ್ರಾಥಮಿಕವಾಗಿ ಎರಡು ವಿಧಗಳಿವೆ: ಹಾಟ್ ಮತ್ತು ಕೋಲ್ಡ್ ವ್ಯಾಲೆಟ್ಗಳೆಂದು. ಹಾಟ್ ವ್ಯಾಲೆಟ್ ಯಾವುದೇ ಭೌತಿಕ ಅಸ್ತಿತ್ವವನ್ನು ಹೊಂದಿಲ್ಲ ಮತ್ತು ಸಂಪೂರ್ಣವಾಗಿ ಆನ್ಲೈನ್ ಆಗಿದೆ. ಆದರೆ ಎರಡನೆಯದು ಕಂಪ್ಯೂಟರ್ಗೆ ಸಂಪರ್ಕಗೊಂಡಾಗ ಮಾತ್ರ ಆನ್ಲೈನ್ಗೆ ಬರುವ ಹಾರ್ಡ್ ಡ್ರೈವ್ನ ರೂಪದಲ್ಲಿ ಬರುತ್ತದೆ.

ಬಿಟ್‌ ಕಾಯಿನ್‌ ಖರೀದಿಸಲು ಪರ್ಯಾಯ ವಿಧಾನಗಳು

ಕಾಯಿನ್ ಸ್ವಿಚ್ನಂತಹ ಕ್ರಿಪ್ಟೋ ವಿನಿಮಯದ ಮೂಲಕ ಬಿಟ್‌ ಕಾಯಿನ್‌ ಖರೀದಿಸುವುದು, ಬಿಟ್‌ ಕಾಯಿನ್‌ ಖರೀದಿಸುವ ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ. ವಾಸ್ತವವಾಗಿ, ಭಾರತದಲ್ಲಿನ ಎಲ್ಲಾ ಪ್ರಮುಖ ಕ್ರಿಪ್ಟೋ ಟ್ರೇಡಿಂಗ್ ಪ್ಲಾಟ್ಫಾರ್ಮ್ಗಳು ಸ್ಮಾರ್ಟ್ಫೋನ್ಗಳಿಗೆ ಹೊಂದಿಕೆಯಾಗುವ ಅಪ್ಲಿಕೇಶನ್ಗಳನ್ನು ಹೊಂದಿವೆ. ಆದಾಗ್ಯೂ, ಬಿಟ್‌ ಕಾಯಿನ್‌ ಖರೀದಿಸಲು ಹಲವಾರು ಪರ್ಯಾಯ ವಿಧಾನಗಳಿವೆ.

ಕಾಯಿನ್ ಸೆಟ್ಗಳು

ಕ್ರಿಪ್ಟೋ ಮಾರುಕಟ್ಟೆಯು ಚಂಚಲತೆಯಿಂದ ಕೂಡಿದ್ದು, ಕ್ರಿಪ್ಟೋ ಹೂಡಿಕೆದಾರರು ಯಾವಾಗಲೂ ಮಾರುಕಟ್ಟೆಯ ಚಂಚಲತೆಯ ಏರಿಳಿತವನ್ನು ದಾಟುವ ತಂತ್ರಗಳನ್ನು ಅನ್ವೇಷಿಸುತ್ತಿರುತ್ತಾರೆ. ಉದಾಹರಣೆಗೆ, ನೀವು ಕಾಯಿನ್ ಸೆಟ್ಗಳ ಮೂಲಕ ಹೂಡಿಕೆ ಮಾಡಬಹುದು. ಕಾಯಿನ್ ಸೆಟ್ಗಳು ಮಾರುಕಟ್ಟೆ ಬಂಡವಾಳ ಅಥವಾ ಟಾಪ್ AI ಕ್ರಿಪ್ಟೋಸ್ ಎಂಬ ಸಂಗ್ರಹದ ಅಗ್ರ ಐದು ಕ್ರಿಪ್ಟೋಗಳಂತಹ ಥೀಮ್ಗಳ ಆಧಾರದ ಮೇಲೆ ಗುಂಪು ಮಾಡಲಾದ ನಾಣ್ಯಗಳ ಗುಂಪಾಗಿದೆ. ಅವುಗಳನ್ನು ಕ್ರಿಪ್ಟೋಕರೆನ್ಸಿಗಳ ಬಾಸ್ಕೆಟ್ ಎಂದೂ ಕರೆಯಲಾಗುತ್ತದೆ. ಇವು ಕ್ರಿಪ್ಟೋ ಹೂಡಿಕೆದಾರರಿಗೆ ಡಿಜಿಟಲ್ ಕರೆನ್ಸಿಗಳನ್ನು ಕಡಿಮೆ ಅಪಾಯಕಾರಿ ರೀತಿಯಲ್ಲಿ ಖರೀದಿಸಲು ಅತ್ಯುತ್ತಮ ಮಾರ್ಗವನ್ನು ನೀಡುತ್ತದೆ.

ಈ ಕಾಯಿನ್ ಸೆಟ್ಗಳನ್ನು ಕ್ರಿಪ್ಟೋ ಟ್ರೇಡಿಂಗ್ ಪ್ಲಾಟ್ಫಾರ್ಮ್ನ ತಜ್ಞರ ತಂಡವು ರಚಿಸಿರುವುದರಿಂದ, ಇಲ್ಲಿ ಯಾವುದೇ ಅಸ್ಪಷ್ಟತೆಗೆ ಅವಕಾಶವಿಲ್ಲ. ಇದಲ್ಲದೆ, ಕಾಯಿನ್ ಸೆಟ್ಗಳು ಹೂಡಿಕೆದಾರರಿಗೆ ಪೂರ್ವ-ನಿರ್ಧರಿತ ವೈವಿಧ್ಯಮಯ ಪೋರ್ಟ್ಫೋಲಿಯೊದ ಅವಕಾಶವನ್ನು ನೀಡುತ್ತವೆ.

ಅಪಾಯ-ವಿರೋಧಿ ಕ್ರಿಪ್ಟೋ ಹೂಡಿಕೆದಾರರು ಅಪಾಯಗಳನ್ನು ತಗ್ಗಿಸಲು ಕ್ರಿಪ್ಟೋ ಟ್ರೇಡಿಂಗ್ ಪ್ಲಾಟ್ಫಾರ್ಮ್ಗಳು ನೀಡುವ ಕಾಯಿನ ಸೆಟ್ಗಳನ್ನು ಖರೀದಸಬಹುದು ಮತ್ತು ಈ ಕಾಯಿನ ಸೆಟ್ಗಳು ಪೂರ್ವ-ಸಂಶೋಧಿಸಿದ ಕಾಯಿನ್ ಬಾಸ್ಕೆಟ್ ಆಗಿರುವುದರಿಂದ, ಇವು ನಿಮ್ಮ ಪೋರ್ಟ್ಫೋಲಿಯೊನ್ನು ವೈವಿಧ್ಯಗೊಳಿಸಬಹುದು. ಆದ್ದರಿಂದ, ನೀವು ಕಾಯಿನ್ ಸೆಟ್ಗಳ ಮೂಲಕ ಬಿಟ್ಕಾಯಿನ್ ಖರೀದಿಸಲು ಬಯಸಿದರೆ, ಬಿಟ್ಕಾಯಿನ್ ಹೊಂದಿರುವ ಕ್ರಿಪ್ಟೋ ಬಾಸ್ಕೆಟ್ಗಾಗಿ ನೋಡಿ.

ಪೀರ್-ಟು-ಪೀರ್ (P2P) ವಿನಿಮಯ

ಪೀರ್-ಟು-ಪೀರ್ (P2P) ವಿನಿಮಯದಲ್ಲಿ, ಕೇಂದ್ರ ಪ್ರಾಧಿಕಾರದ ಹಸ್ತಕ್ಷೇಪವಿಲ್ಲದೆ ನೇರವಾಗಿ ವ್ಯಕ್ತಿಗಳ ನಡುವೆ ಬಿಟ್‌ ಕಾಯಿನ್‌ನಂತಹ ಕ್ರಿಪ್ಟೋವನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅವಕಾಶ ನೀಡುತ್ತದೆ. ಗೌಪ್ಯತೆ ಕಾಪಾಡಿಕೊಳ್ಳ ಬಯಸುವ ಹೂಡಿಕೆದಾರರು ಗೌಪ್ಯತೆ, ಪಾರದರ್ಶಕತೆ, ಮಧ್ಯವರ್ತಿಗಳ ಅನುಪಸ್ಥಿತಿ, ವೇಗದ ವಹಿವಾಟುಗಳು, ಶುಲ್ಕರಹಿತ ವಹಿವಾಟುಗಳು, ವೈವಿಧ್ಯಮಯ ಪಾವತಿ ಆಯ್ಕೆಗಳು ಮತ್ತು ವಾಪಸಾತಿ ವಿಧಾನಗಳಿಗೋಸ್ಕರ P2P ವಿನಿಮಯವನ್ನು ಬಯಸುತ್ತಾರೆ.

P2P ವಿನಿಮಯದ ಮೂಲಕ ಬಿಟ್‌ ಕಾಯಿನ್‌ ಖರೀದಿಸಲು, ಕೆಳಗಿನ ಹಂತಗಳನ್ನು ಅನುಸರಿಸಿ:

● ಹೆಸರಾಂತ P2P ಪ್ಲಾಟ್ಫಾರ್ಮ್ ಆಯ್ಕೆಮಾಡಿ.

● ಸೈನ್ ಅಪ್ ಮಾಡಿ ಮತ್ತು ಪರಿಶೀಲನೆಯನ್ನು ಪೂರ್ಣಗೊಳಿಸಿ

● ಮಾರಾಟಗಾರರಿಂದ ಹಣವನ್ನು ಸ್ವೀಕರಿಸಲು ಬಿಟ್‌ ಕಾಯಿನ್‌ ವ್ಯಾಲೆಟ್ ಸರಿಯಾದ ಸ್ಥಳದಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ.

● ಮಾರಾಟಗಾರರನ್ನು ಆಯ್ಕೆಮಾಡಿ, ಖರೀದಿ ಮೊತ್ತವನ್ನು ನಮೂದಿಸಿ ಮತ್ತು ಪಾವತಿ ವಿಧಾನವನ್ನು ಆಯ್ಕೆಮಾಡಿ.

● ಒಪ್ಪಿದ ಮೊತ್ತವನ್ನು ಮಾರಾಟಗಾರರಿಗೆ ವರ್ಗಾಯಿಸಿ ಮತ್ತು ನಿಮ್ಮ BTC ಗಾಗಿ ನಿಮ್ಮ Bitcoin ವ್ಯಾಲೆಟ್ಅನ್ನು ಪರಿಶೀಲಿಸಿ.

ಸೂಚನೆ: ಯಾವಾಗಲೂ ವ್ಯಾಲೆಟ್ ವಿಳಾಸವನ್ನು ಸರಿಯಾಗಿ ಪರಿಶೀಲಿಸಿ, ತಪ್ಪಾದ ವ್ಯಾಲೆಟ್ ವಿಳಾಸಕ್ಕೆ ಕಳುಹಿಸಲಾದ ಕ್ರಿಪ್ಟೋಗಳನ್ನು ಹಿಂಪಡೆಯಲು ಸಾಧ್ಯವಿಲ್ಲ.

ಉಪಸಂಹಾರ

ಭಾರತದ ಮಿಲೇನಿಯಲ್ ಜನಸಮೂಹಕ್ಕೆ ಬಿಟ್‌ ಕಾಯಿನ್‌ ಹಾಗೇ ಸುಮ್ಮನೇ ಆಕರ್ಷಕ ವಸ್ತುವಾಗಿಲ್ಲ. ಕ್ರಿಪ್ಟೋ ಮಾರುಕಟ್ಟೆಯಲ್ಲಿರುವ ಅಂತರ್ಗತ ಚಂಚಲತೆಯ ಹೊರತಾಗಿಯೂ ಬಿಟ್‌ ಕಾಯಿನ್‌ ಸ್ಥಿರವಾಗಿ ಕಾರ್ಯನಿರ್ವಹಿಸುತ್ತಾ ಹೂಡಿಕೆದಾರರಿಗೆ ಉತ್ತಮ ಆದಾಯವನ್ನು ನೀಡುತ್ತಿದೆ. ಭಾರತದಲ್ಲಿ ಬಿಟ್‌ ಕಾಯಿನ್‌ ಅನ್ನು ಖರೀದಿಸಲು ಹಲವಾರು ಮಾರ್ಗಗಳು ಲಭ್ಯವಿದ್ದು, ನಿಮ್ಮ ಆದ್ಯತೆಯ ಮೇರೆಗೆ ಕ್ರಿಪ್ಟೋ ಎಕ್ಸ್ಚೇಂಜ್ ಪ್ಲಾಟ್ಫಾರ್ಮ್ಗಳು, ಪೀರ್-ಟು-ಪೀರ್ (ಪಿ2ಪಿ) ಎಕ್ಸ್ಚೇಂಜ್ಗಳು ಅಥವಾ ಕಾಯಿನ್ ಸೆಟ್ಗಳು ಆಯ್ದುಕೊಳ್ಳಬಹುದು. ನೀವು ಬಳಸಲು ಸುಲಭವಾದ, INR ಆಧಾರಿತ ಸುರಕ್ಷಿತ ವಹಿವಾಟು ಪರಿಸರವನ್ನು ನೀಡುವ ಪ್ಲಾಟ್ಫಾರ್ಮ್ ಅನ್ನು ಹುಡುಕುತ್ತಿದ್ದರೆ ಕಾಯಿನ್ ಸ್ವಿಚ್ ನಿಮಗೆ ಸರಿಯಾದ ಆಯ್ಕೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+