ಕಾಗ್ನಿಜೆಂಟ್ ನಲ್ಲಿ ಉದ್ಯೋಗ ಕಡಿತ, ಹಿರಿಯ ಉದ್ಯೋಗಿಗಳಿಗೆ ಕೊಕ್
ಬೆಂಗಳೂರು, ಅಕ್ಟೋಬರ್ 11: ಪ್ರಮುಖ ಐಟಿ ಸಂಸ್ಥೆ ಕಾಂಗ್ನಿಜೆಂಟ್ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುತ್ತಿದೆ. ಸಂಸ್ಥೆಯ ಹಿರಿಯ ಉದ್ಯೋಗಿಗಳನ್ನು ಮನೆಗೆ ಕಳಿಸಲಾಗುತ್ತಿದ್ದು, ಟೈಮ್ಸ್ ಆಫ್ ಇಂಡಿಯಾದ ವರದಿಯಂತೆ ಸರಿ ಸುಮಾರು 200ಕ್ಕೂ ಅಧಿಕ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಾಗಿದೆ.
ಮುರ್ನಾಲ್ಕು ತಿಂಗಳ ಭತ್ಯೆ ನೀಡಿ, ನಿರ್ದೇಶಕ ಸ್ಥಾನ ಸ್ತರ ಉದ್ಯೋಗಿಗಳನ್ನು ಹುದ್ದೆ ತೊರೆಯುವಂತೆ ಸೂಚಿಸಲಾಗಿದೆ. ಕಳೆದ ವರ್ಷ ಸ್ವಯಂನಿವೃತ್ತಿ ಅಥವಾ ಸಂಸ್ಥೆ ತೊರೆಯುವ ಅವಕಾಶವನ್ನು ಘೋಷಿಸಲಾಗಿತ್ತು. ಅದರಂತೆ ಕಳೆದ ಜುಲೈ, ಆಗಸ್ಟ್ ತಿಂಗಳಿನಲ್ಲಿ ಈ ಪ್ರಕ್ರಿಯೆ ಜಾರಿಗೆ ಬಂದಿತ್ತು. ಆದರೆ, ಈ ವರ್ಷ ವ್ಯಾಲೆಂಟರಿ ಕಾರ್ಯಕ್ರಮ ಇರಲಿಲ್ಲ ಎಂದು ತಿಳಿದು ಬಂದಿದೆ.

ಕಾಂಗ್ನಿಜೆಂಟ್ ನ ಉದ್ಯೋಗಿಗಳ ಸಂಖ್ಯೆ ಸದ್ಯ 2,68,900 ನಷ್ಟಿದೆ. ಉದ್ಯೋಗ ಕಡಿತ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಇದರಿಂದ ಸಂಸ್ಥೆಗೆ 35 ಮಿಲಿಯನ್ ಡಾಲರ್ ಹೊರೆ ಬಿದ್ದಿದೆ.












Click it and Unblock the Notifications