ಅಮೆರಿಕದ ಸ್ಥಾನ ಕಸಿದುಕೊಂಡ ಕೆಂಪು ರಾಷ್ಟ್ರ

ನವದೆಹಲಿ, ಅ. 10 : ವಿಶ್ವದ ಹಿರಿಯಣ್ಣನ ಒಂದು ಪಟ್ಟವನ್ನು ಚೀನಾ ಕಸಿದುಕೊಂಡಿದೆ. ಜಗತ್ತಿನ ಅತಿದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿರುವ ದೇಶ ಎಂಬ ಖ್ಯಾತಿ ಈಗ ಚೀನಾ ಪಾಲಾಗಿದೆ.

ಅಂತಾರಾಷ್ಟ್ರೀಯ ಹಣಕಾಸು ಮತ್ತು ಬಂಡವಾಳ ಸಂಸ್ಥೆಯ(ಐಎಂಎಫ್‌) ವರದಿ ಈ ಅಂಶವನ್ನು ಸ್ಪಷ್ಟಪಡಿಸಿದೆ. ಒಟ್ಟು 17.6 ಟ್ರಿಲಿಯನ್‌ ಡಾಲರ್‌ ಮೌಲ್ಯ ಹೊಂದಿರುವ ಚೀನಾ ಅರ್ಥ ವ್ಯವಸ್ಥೆ ಅಮೆರಿಕವನ್ನು ಹಿಂದೆ ಹಾಕಿದೆ. 1872ರಿಂದ ಸ್ಥಾನ ಕಾಪಾಡಿಕೊಂಡು ಬಂದಿದ್ದ ಅಮೆರಿಕ ಅದನ್ನು ಈಗ ಅನಿವಾರ್ಯವಾಗಿ ಚೀನಾಕ್ಕೆ ಬಿಟ್ಟುಕೊಟ್ಟಿದೆ.[ಬ್ರಿಟನ್ನಿಗೆ ಮುಸ್ಲಿಮರಿಂದ 31 ಬಿಲಿಯನ್ ಪೌಂಡ್ ಕೊಡುಗೆ]

china

1872ರಲ್ಲಿ ಬ್ರಟನ್‌ನಿಂದ ಅಮೆರಿಕ ಪಡೆದಿದ್ದ ಸ್ಥಾನ ಮೊದಲ ಬಾರಿಗೆ ಏಷ್ಯಾ ಖಂಡದ ರಾಷ್ಟ್ರವೊಂದರ ಪಾಲಾಗಿದೆ. ಐಎಂಎಫ್ ವರದಿಯಂತೆ ಅಮೆರಿಕದ ಅರ್ಥ ವ್ಯವಸ್ಥೆ ಮೌಲ್ಯ 17.4 ಟ್ರಿಲಿಯನ್‌ ಡಾಲರ್‌ಗಳಷ್ಟಿದೆ.

ಜನರ ಕೊಳ್ಳುವ ಶಕ್ತಿ, ವಸ್ತುಗಳ ಮಾರಾಟ ಮೌಲ್ಯ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಈ ವರದಿ ನೀಡಲಾಗಿದೆ. ಆದರೆ ಚೀನಾದಲ್ಲಿ ಇತರೆ ಖರ್ಚು ವೆಚ್ಚಗಳು ಅಮೆರಿಕಕ್ಕಿಂತಲೂ ಹೆಚ್ಚಾಗಿದ್ದರೂ ಇದು ವಿಶ್ವದ ಅರ್ಥವ್ಯವಸ್ಥೆಯ ದೃಷ್ಟಿಕೋನ ತಿಳಿಸುತ್ತದೆ ಎಂದು ಐಎಂಎಫ್‌ ಹೇಳಿದೆ.

ಚೀನಾದ ಅರ್ಥ ವ್ಯವಸ್ಥೆ ಈ ವರ್ಷದ ಅಂತ್ಯಕ್ಕೆ ಶೇ. 7.4 ಬೆಳವಣಿಗೆ ಸಾಧಿಸಲಿದೆ. 2015ರಲ್ಲಿ ಶೇ.7.1 ಪ್ರಗತಿ ಸಾಧಿಸಲಿದೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+