2020ರಲ್ಲಿ ಚೀನಾ ಜಿಡಿಪಿ ಬೆಳವಣಿಗೆ 4 ದಶಕಗಳಲ್ಲೇ ಅತ್ಯಂತ ಕಡಿಮೆ

ಬೀಜಿಂಗ್, ಜನವರಿ 18: ಚೀನಾದಲ್ಲಿ ಕೊರೊನಾವೈರಸ್ ಏಕಾಏಕಿ ಹರಡಿದ ಬಳಿಕ ಲಾಕ್‌ಡೌನ್ ಜೊತೆಗೆ ವಿಶ್ವದಾದ್ಯಂತ ಕೊರೊನಾ ಪ್ರಭಾವದಿಂದಾಗಿ 2020ರಲ್ಲಿ ಚೀನಾದ ಆರ್ಥಿಕತೆ ಕಳೆದ ನಾಲ್ಕು ದಶಕದಲ್ಲಿಯೇ ಅತ್ಯಂತ ನಿಧಾನಗತಿಯಲ್ಲಿ ಬೆಳೆದಿದೆ ಎಂದು ಅಧಿಕೃತ ಅಂಕಿ-ಅಂಶಗಳು ಸೋಮವಾರ ತಿಳಿಸಿದೆ.

ಚೀನಾದ ಆರ್ಥಿಕತೆಯು 1970 ರ ದಶಕದಲ್ಲಿ ಪ್ರಮುಖ ಸುಧಾರಣೆಗಳನ್ನು ಕೈಗೊಂಡ ನಂತರ ಶೇಕಡಾ 2.3ರಷ್ಟು ಬೆಳವಣಿಗೆ ದರ ದಾಖಲಿಸಿದ್ದೇ ಇಲ್ಲಿಯವರೆಗಿನ ಅತ್ಯಂತ ಕಡಿಮೆ ಅಂಕಿ-ಅಂಶವಾಗಿದೆ.

ಚೀನಾದ ಆರ್ಥಿಕತೆಯು ಕೊರೊನಾ ಪ್ರಭಾವದಿಂದ ಭಾರೀ ತೊಂದರೆಗೊಳಗಾಗಬಹುದು ಎಂದು ಈ ಹಿಂದೆಯೇ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಅಂದಾಜಿಸಿತ್ತು. ಅಂತೆಯೇ ಚೀನಾವು 2020ರಲ್ಲಿ ನಿಧಾನಗತಿಯ ಜಿಡಿಪಿ ದರವನ್ನು ದಾಖಲಿಸಿದೆ.

China GDP Grows 2.3% In 2020: Slowest In More Than 4 Decades

ಕೋವಿಡ್ ಬಿಕ್ಕಟ್ಟಿನಿಂದಾಗಿ ಭಾರತದ ಜಿಡಿಪಿ ಹಣಕಾಸು ವರ್ಷ 2020-21 ರಲ್ಲಿ ದಾಖಲೆಯ ಕುಸಿತವನ್ನು ಅನುಭವಿಸಲಿದ್ದು, ಕೆಲವು ದುರ್ಬಲಗೊಂಡ ಹಣಕಾಸಿನ ಸ್ಥಿತಿಯು ಆರ್ಥಿಕತೆಯನ್ನು ಬೆಂಬಲಿಸುವ ಸರ್ಕಾರದ ಸಾಮರ್ಥ್ಯವನ್ನು ನಿರ್ಬಂಧಿಸುತ್ತದೆ ಎಂದು ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ ಹೇಳಿದೆ.

ಇದರ ಜೊತೆಗೆ ಮುಂಬರುವ ವರ್ಷಗಳಲ್ಲಿ ಭಾರತದ ಆರ್ಥಿಕತೆಯು ವಿಶ್ವದಲ್ಲೇ ಅತ್ಯಂತ ಪ್ರಬಲವಾಗಿ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+