ಐಸಿಐಸಿಐ ಬ್ಯಾಂಕ್ ಸಿಇಒ ಹುದ್ದೆಗೆ ಚಂದಾ ಕೊಚ್ಚರ್ ರಾಜೀನಾಮೆ
ಅಂತೂ ಐಸಿಐಸಿಐ ಬ್ಯಾಂಕ್ ಸಿಇಒ ಹುದ್ದೆಗೆ ಚಂದಾ ಕೊಚ್ಚರ್ ರಾಜೀನಾಮೆ ನೀಡಿದ್ದಾರೆ. ಆ ಸ್ಥಾನಕ್ಕೆ ಸಂದೀಪ್ ಬಕ್ಷಿ ಅವರ ನೇಮಕ ಮಾಡಲಾಗಿದೆ. ಚಂದಾ ಕೊಚ್ಚರ್ ವಿರುದ್ಧ ಹಿತಾಸಕ್ತಿ ಸಂಘರ್ಷದ ಆರೋಪ ಇತ್ತು. ಆ ಹಿನ್ನೆಲೆಯಲ್ಲಿ ತನಿಖೆ ಕೂಡ ನಡೆಯುತ್ತಿದೆ. 56 ವರ್ಷದ ಕೊಚ್ಚರ್ ಅವಧಿಪೂರ್ವ ನಿವೃತ್ತಿಗೆ ಮನವಿ ಮಾಡಿದ್ದರು ಎಂದು ಬ್ಯಾಂಕ್ ತಿಳಿಸಿದೆ.
ತಕ್ಷಣದಿಂದಲೇ ಜಾರಿಯಾಗುವಂತೆ ಆಕೆಯನ್ನು ಬ್ಯಾಂಕ್ ನ ನಿರ್ದೇಶಕ ಮಂಡಳಿಯು ಜವಾಬ್ದಾರಿಯಿಂದ ಬಿಡುಗಡೆ ಮಾಡಿದೆ. ಆಕೆಯ ಸ್ಥಾನವನ್ನು ಸಂದೀಪ್ ಬಕ್ಷಿ ತುಂಬಲಿದ್ದು, ಅವರು ಸದ್ಯಕ್ಕೆ ಐಸಿಐಸಿಐ ಬ್ಯಾಂಕ್ ನ ನಿರ್ದೇಶಕರು ಹಾಗೂ ಚೀಫ್ ಆಪರೇಟಿಂಗ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆಡಳಿತ ಮಂಡಳಿಯಿಂದ ನೇಮಿಸಿ, ನಡೆಯುತ್ತಿರುವ ವಿಚಾರಣೆಯಲ್ಲಿ ಯಾವುದೇ ಬದಲಾಣೆ ಆಗುವುದಿಲ್ಲ. ಅದು ಹಾಗೇ ಮುಂದುವರಿಯಲಿದೆ. ಆದರೆ ಚಂದಾ ಕೊಚ್ಚರ್ ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುವುದು. ವಿಚಾರಣೆಯು ಪೂರ್ತಿ ಮುಗಿದ ನಂತರ ಆ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.












Click it and Unblock the Notifications