ಮಿಂತ್ರಾ.ಕಾಂನ ಸಿಇಒ ಸ್ಥಾನ ತೊರೆದ ಅನಂತ್ ನಾರಾಯಣ್
ಬೆಂಗಳೂರು, ಡಿಸೆಂಬರ್ 10: ಪ್ರತಿಷ್ಠಿತ ಆನ್ ಲೈನ್ ಶಾಪಿಂಗ್ ಕಂಪನಿ ಮಿಂತ್ರಾ.ಕಾಂನ ಸಿಇಒ ಸ್ಥಾನಕ್ಕೆ ಅನಂತ್ ನಾರಾಯಣ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ಅನಂತ್ ನಾರಾಯಣ್ ಅವರು ತೊರೆದ ಸಿಇಒ ಸ್ಥಾನಕ್ಕೆ ಫ್ಲಿಪ್ ಕಾರ್ಟಿನ ಅಮರ್ ನಗರಮ್ ಅವರನ್ನು ನೇಮಿಸಲಾಗಿದೆ. ಮಿಂತ್ರಾದ ವಾಣಿಜ್ಯ ಅಧಿಕಾರಿ ಮಿಥುನ್ ಸುಂದರ್, ಮಾನವ ಸಂಪನ್ಮೂಲ ಮುಖ್ಯಸ್ಥರಾಗಿದ್ದ ಮನ್ ಪ್ರೀತ್ ರಾತಿಯಾ ಅವರು ಕೂಡಾ ರಾಜೀನಾಮೆ ನೀಡಿದ್ದಾರೆ.

ಫ್ಲಿಪ್ ಕಾರ್ಟ್ ಒಡೆತನದ ಮಿಂತ್ರಾ, ಜಬಾಂಗ್ ನಿಂದ 150 ರಿಂದ 200 ಮಂದಿಗೆ ಪಿಂಕ್ ಸ್ಲಿಪ್ ನೀಡಿ ಮನೆಗೆ ಕಳಿಸಲಾಗಿದೆ. ಇನ್ನಷ್ಟು ಉದ್ಯೋಗ ಕಡಿತ ಸಾಧ್ಯತೆಯೂ ಇದೆ. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿದ್ದ ಫ್ಲಿಪ್ ಕಾರ್ಟ್ ಸಹ ಸ್ಥಾಪಕ ಮುಖ್ಯಸ್ಥ ಬಿನ್ನಿ ಬನ್ಸಾಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಸ್ಮರಿಸಬಹುದು.












Click it and Unblock the Notifications