ಭಾರತ್ ಪೆಟ್ರೋಲಿಯಂ ಷೇರು ಮಾರಲು ಮುಂದಾದ ಕೇಂದ್ರ ಸರ್ಕಾರ
ನವದೆಹಲಿ, ಸೆಪ್ಟೆಂಬರ್ 14: ದೇಶದ ಎರಡನೆಯ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿ ಭಾರತ್ ಪೆಟ್ರೋಲಿಯಂನ (ಬಿಪಿಸಿಎಲ್) ಷೇರುಗಳನ್ನು ವಿದೇಶಿ ತೈಲ ಸಂಸ್ಥೆಯೊಂದಕ್ಕೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.
ಸ್ಪರ್ಧೆಯನ್ನು ಹೆಚ್ಚಿಸಲು ಮತ್ತು ಸುದೀರ್ಘಕಾಲದಿಂದ ಸರ್ಕಾರಿ ಸ್ವಾಮ್ಯದ ಕಂಪೆನಿಗಳೇ ಪ್ರಾಬಲ್ಯ ಸಾಧಿಸಿರುವ ವಲಯದಲ್ಲಿ ಬದಲಾವಣೆ ತರಲು ಸರ್ಕಾರವು ಬಹುರಾಷ್ಟ್ರೀಯ ಕಂಪೆನಿಗಳನ್ನು ಸೆಳೆಯಲು ಮುಂದಾಗಿದೆ ಎಂದು ಸಂಸ್ಥೆಗೆ ಸಂಬಂಧಿಸಿರುವ ಕೆಲವು ವ್ಯಕ್ತಿಗಳು ಹೇಳಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮೂಲಗಳ ಪ್ರಕಾರ ಸರ್ಕಾರವು ಕಂಪೆನಿಯಲ್ಲಿ ತನ್ನ ಹಿಡಿತದಲ್ಲಿರುವ ಶೇ 53.3ರಷ್ಟು ಷೇರುಗಳನ್ನು ಮಾರಾಟ ಮಾಡಲು ಚಿಂತನೆ ನಡೆಸಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳ ಮಾರಾಟದಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ 1.05 ಟ್ರಿಲಿಯನ್ ರೂಪಾಯಿಗಳನ್ನು ಎತ್ತಲು ನರೇಂದ್ರ ಮೋದಿ ಸರ್ಕಾರ ಗುರಿ ಹೊಂದಿದೆ. ಷೇರುಗಳ ಮಾರಾಟದ ವರದಿ ಬಹಿರಂಗವಾಗುತ್ತಿದ್ದಂತೆಯೇ ಭಾರತ್ ಪೆಟ್ರೋಲಿಯಂನ ಷೇರುಗಳ ಮೌಲ್ಯ ಶೇ 7ರಷ್ಟು ಹೆಚ್ಚಳಗೊಂಡಿವೆ.












Click it and Unblock the Notifications