ಟಿವಿ ಪ್ರಿಯರ ಜೇಬಿಗೆ ಕತ್ತರಿ: ಅನಲಾಗ್ ಕೇಬಲ್ ದರ ಹೆಚ್ಚಳ
ನವದೆಹಲಿ, ಜ. 9: ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಟಿವಿ ಪ್ರಿಯರ ಜೇಬಿಗೆ ಕತ್ತರಿ ಹಾಕಿದೆ. ಸದ್ದಿಲ್ಲದೇ ಅನಲಾಗ್ ಕೇಬಲ್ ಶುಲ್ಕದಲ್ಲಿ ಹೆಚ್ಚಳ ಮಾಡಲಾಗಿದೆ.
ಭಾರತೀಯ ದೂರಸಂಪರ್ಕ ಇಲಾಖೆ ಹಳೆಯ ಕೇಬಲ್ ವ್ಯವಸ್ಥೆ ಬಳಸುತ್ತಿರುವವರಿಗೆ ಶುಲ್ಕ ಹೆಚ್ಚಳ ಮಾಡಿದೆ. ಜನವರಿ 1 ರಿಂದಲೇ ಈ ದರ ಏರಿಕೆ ಅನ್ವಯವಾಗಲಿದೆ ಎಂದು ತಿಳಿಸಿದೆ.[ನಿಮ್ಮ ಇಷ್ಟದ ವಾಹಿನಿಗೆ ಮಾತ್ರ ಹಣ ಕೊಡಿ]

30 ಉಚಿತ ಚಾನಲ್ ಗಳಿಗೆ ಮಾಸಿಕ 117 ರೂ, 30 ಉಚಿತ ಮತ್ತು 20 ಪೇ ಚಾನೆಲ್ ಗಳಿಗೆ ಕೇಬಲ್ ಆಪರೇಟರ್ ಗಳು ತಿಂಗಳಿಗೆ 234 ರೂ. ಶುಲ್ಕ ವಿಧಿಸಬಹುದಾಗಿದೆ ಎಂದು ಮಾಹಿತಿ ನೀಡಿದೆ.[ಕೇಬಲ್ ಟಿವಿ ನೋಡಲು ಹೆಚ್ಚು ಹಣ ಪಾವತಿಸಬೇಕು]
ಅಲ್ಲದೇ ಅನಲಾಗ್ ವ್ಯವಸ್ಥೆಯಲ್ಲಿ ಪೇ ಚಾನೆಲ್ ಗಳ ಸಂಖ್ಯೆ 20 ಕ್ಕಿಂತ ಹೆಚ್ಚಿದ್ದರೆ 292 ರೂ. ಗಿಂತಲೂ ಹೆಚ್ಚಿಗೆ ಪಡೆದುಕೊಳ್ಳುವಂತಿಲ್ಲ ಎಂಬ ಸ್ಪಷ್ಟ ನಿದರ್ಶನವನ್ನೂ ನೀಡಿದೆ. ಈ ಮೊದಲು ಗ್ರಾಹಕರಿಗೆ ವಿಶೇಷ ಪ್ಯಾಕೇಜ್ ನೀಡಲಾಗುತ್ತಿದೆ ಎಂದು ಹೇಳಿದ್ದ ಅನಲಾಗ್ ಆಪರೇಟರ್ ಗಳು ಈಗ ಏಕಾಏಕಿ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿದ್ದಾರೆ.












Click it and Unblock the Notifications