ನೂರಾರು ಕೋಟಿ ಹಣಕಾಸು ಅವ್ಯವಹಾರ:ಜಿವಿಕೆ ಗ್ರೂಪ್ ಮೇಲೆ ಸಿಬಿಐ ಕೇಸ್ ದಾಖಲು

ಮುಂಬೈ, ಜುಲೈ 2: ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ಸುಮಾರು 705 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಜಿವಿಕೆ ಗ್ರೂಪ್ ಆಫ್ ಕಂಪೆನಿಸ್ ಅಧ್ಯಕ್ಷ ವೆಂಕಟ ಕೃಷ್ಣ ರೆಡ್ಡಿ ಗುಣಪತಿ ಮತ್ತು ಅವರ ಪುತ್ರ ಹಾಗೂ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಿ ವಿ ಸಂಜಯ್ ರೆಡ್ಡಿ ಸೇರಿದಂತೆ ಇತರ ಒಂಬತ್ತು ಕಂಪನಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ವಂಚನೆ ಮತ್ತು ಖೋಟಾ ಪ್ರಕರಣ ದಾಖಲಿಸಿದೆ.

Recommended Video

      Bhuvaneswar Kumar wants RajKumar Rao to play in his biopic | Oneindia Kannada

      ಜಿವಿಕೆ ಸಮೂಹ ಮತ್ತು ಮಿಯಾಲ್ ಕಚೇರಿಗಳು ಸೇರಿದಂತೆ ಮುಂಬೈ ಮತ್ತು ಹೈದರಾಬಾದ್‌ನಲ್ಲಿ ಆರು ಸ್ಥಳಗಳಲ್ಲಿ ಸಂಸ್ಥೆ ಶೋಧ ನಡೆಸಿದ ನಂತರ ಜೂನ್ 27 ರಂದು ಎಫ್‌ಐಆರ್ ದಾಖಲಿಸಲಾಗಿದೆ. ಸಿಬಿಐ ಅಧಿಕಾರಿಗಳು ಎರಡು ನಗರಗಳಲ್ಲಿನ ಜಿವಿಕೆ ರೆಡ್ಡಿ ಮತ್ತು ಮಿಯಾಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸಂಜಯ್ ರೆಡ್ಡಿ ಅವರ ನಿವಾಸಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

      ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಜಿವಿಕೆ ಏರ್ ಪೋರ್ಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ ಸಹಯೋಗದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮುಂಬೈ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಮತ್ತು ನಿರ್ವಹಣೆ ಮಾಡುವ ಕೆಲಸವನ್ನು ಜಿವಿಕೆ ಗ್ರೂಪ್ ಗೆ ನೀಡಿತ್ತು. ಈ ಒಪ್ಪಂದ 2006ರ ಏಪ್ರಿಲ್ 4ರಂದು ಆಗಿತ್ತು.

      CBIs Case Against GVK Group:Bogus Work Contract, Fund Diversion Of Rs 705 Crore From The Airport

      ಜಿವಿಕೆ ಗ್ರೂಪ್ ಪ್ರವರ್ತಕರು ತಮ್ಮ ಕಾರ್ಯನಿರ್ವಾಹಕ ಸಿಬ್ಬಂದಿ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಗುರುತು ಪತ್ತೆಯಾಗದ ಅಧಿಕಾರಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

      2017-18ರಲ್ಲಿ 9 ಕಂಪನಿಗಳಿಗೆ ನಕಲಿ ಕೆಲಸದ ಒಪ್ಪಂದಗಳನ್ನು ಮಾಡುವ ಮೂಲಕ ಕೆಲಸ ಮಾಡಿರುವುದಾಗಿ ತೋರಿಸಿ 310 ಕೋಟಿ ರೂಪಾಯಿಗಳನ್ನು ಜಿವಿಕೆ ಸಮೂಹದ ಪ್ರವರ್ತಕರು ತಮ್ಮ ಇಚ್ಛೆಯ ಕಂಪೆನಿಗಳಿಗೆ ಹಣ ಒದಗಿಸಿದ್ದಾರೆ. ಈ ಮೂಲಕ 395 ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+