ನೋಟ್ ಬ್ಯಾನ್ ಎಫೆಕ್ಟ್, ಮಹೀಂದ್ರಗೆ 8 ಸಾವಿರ ಕೋಟಿ ರು ಆದಾಯ ನಷ್ಟ
ಅಪನಗದೀಕರಣ ಬಳಿಕ ಮಹೀಂದ್ರ ಆಟೋಮೊಬೈಲ್ ಮತ್ತು ಟ್ರಾಕ್ಟರ್ ಕ್ಷೇತ್ರಗಳಲ್ಲಿ 8 ಸಾವಿರ ಕೋಟಿ ರು. ಆದಾಯ ನಷ್ಟವಾಗಿದೆ ಮಹೀಂದ್ರ ಕಂಪೆನಿ ಎಂಡಿ ಪವನ್ ಗೊಯೆಂಕಾ ಹೇಳಿದ್ದಾರೆ.
ನವದೆಹಲಿ, ಮಾರ್ಚ್. 02 : ನೋಟ್ ಬ್ಯಾನ್ ಎಫೆಕ್ಟ್ ಮಹೀಂದ್ರ ಕಂಪನಿ ಮೇಲೆ ಬೀರಿದೆ. ನವೆಂಬರ್ ನಿಂದ ಡಿಸೆಂಬರ್ ವರೆಗೆ ಮಹೀಂದ್ರ ಕಂಪನಿಯ ಭಾರತೀಯ ಆಟೋಮೊಬೈಲ್ ಮತ್ತು ಟ್ರಾಕ್ಟರ್ ಕ್ಷೇತ್ರಗಳಲ್ಲಿ ಬರೋಬ್ಬರಿ 8 ಸಾವಿರ ಕೋಟಿ ರು. ಆದಾಯ ನಷ್ಟವಾಗಿದೆ ಎಂದು ಎಂದು ಮಹೀಂದ್ರ ಕಂಪೆನಿಯ ಆಡಳಿತ ನಿರ್ದೇಶಕ ಪವನ್ ಗೊಯೆಂಕಾ ಅವರು ಹೇಳಿದ್ದಾರೆ.
ಕಳೆದ ವರ್ಷ ಸೆಪ್ಟಂಬರ್ ಮತ್ತು ಅಕ್ಟೋಬರ್‌ನಲ್ಲಿ ಹಬ್ಬಗಳ ಭರಾಟೆಯಲ್ಲಿ ಉತ್ತಮವಾಗಿ ಮಾರಾಟದಲ್ಲಿದ್ದ ಆಟೋಮೊಬೈಲ್ ಮತ್ತು ಟ್ರಾಕ್ಟರ್ ಕ್ಷೇತ್ರಗಳ ಕಂಪೆನಿಗಳು, 500 ಹಾಗೂ 1000 ರು. ನೋಟ್ ನಿಷೇಧಿಸಿದ ಬಳಿಕ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಬಹಳಷ್ಟು ಕುಸಿತ ಕಂಡಿದ್ದು ಈ ರೀತಿಯಾದ ಕುಸಿತ ಎಂದು ಕಂಡಿರಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ನವೆಂಬರ್ ನಲ್ಲಿ ವಾಹನ ಮಾರಾಟ ಶೇ.5.48ರಷ್ಟು ಕುಗ್ಗಿದರೆ ಡಿಸೆಂಬರ್‌ನಲ್ಲಿ ಅದು ಇನ್ನಷ್ಟು ತಳಮಟ್ಟಕ್ಕೆ ಜಾರಿದೆ. ಇದು ಕಳೆದ 43 ತಿಂಗಳಲ್ಲೇ ಅತ್ಯಂತ ತೀವ್ರ ಕುಸಿತವಾಗಿದೆ ಎಂದರು.
Auto, tractor cos suffered Rs 8,000-cr revenue loss in November and December due to #noteban: Mahindra & Mahindra MD Pawan Goenka.
— Press Trust of India (@PTI_News) March 2, 2017
2013ರ ಮಾರ್ಚ್‌ನಲ್ಲಿ ವಾಹನಗಳ ಒಟ್ಟು ಮಾರಾಟವು ಶೇ.7.75ರಷ್ಟು ಕುಸಿತ ಕಂಡಿತ್ತು ಎಂದು ಹೇಳಿದರು.












Click it and Unblock the Notifications