ಷೇರುಪೇಟೆಗೆ ಬರ್ಗರ್ ಕಿಂಗ್ ಇಂಡಿಯಾ ಭರ್ಜರಿ ಎಂಟ್ರಿ: ಮೊದಲ ದಿನ ಶೇ. 125ರಷ್ಟು ಜಿಗಿತ

ನವದೆಹಲಿ, ಡಿಸೆಂಬರ್ 14: ಶೀಘ್ರ ಸೇವೆ ಒದಗಿಸುವ ರೆಸ್ಟೋರೆಂಟ್ ಜಾಲವಾದ ಬರ್ಗರ್‌ ಕಿಂಗ್ ಇಂಡಿಯಾ ಷೇರುಪೇಟೆ ಪ್ರವೇಶಿಸಿದ ಮೊದಲ ದಿನವೇ ಭರ್ಜರಿ ಏರಿಕೆ ಕಂಡಿದ್ದು, ಬಿಎಸ್‌ಇನಲ್ಲಿ ಶೇಕಡಾ 130ರಷ್ಟು, ಹಾಗೂ ಎನ್‌ಎಸ್‌ಇನಲ್ಲಿ ಶೇಕಡಾ 125ರಷ್ಟು ಏರಿಕೆ ದಾಖಲಿಸಿದೆ.

ಡಿಸೆಂಬರ್ 2 ರಿಂದ 4ರವರೆಗೆ ನಡೆದ ಬರ್ಗರ್ ಕಿಂಗ್ ಇಂಡಿಯಾ ಐಪಿಒ ಬಿಡ್ ಪ್ರಕ್ರಿಯೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗುವುದರ ಜೊತೆಗೆ ಮೂಲ ಬೆಲೆಗೆ 156 ಪಟ್ಟು ಬಿಡ್‌ ಆಗಿತ್ತು. ಷೇರು ವಿನಿಮಯ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 810 ಕೋಟಿ ರೂ.ಗಳ ಐಪಿಒ ಗಾತ್ರದ 7.45 ಕೋಟಿ ಇಕ್ವಿಟಿ ಷೇರುಗಳ ವಿರುದ್ಧ 1,166 ಕೋಟಿ ಇಕ್ವಿಟಿ ಷೇರುಗಳಿಗೆ (156.65 ಬಾರಿ) ಬಿಡ್ ಪಡೆದಿದೆ.

ಡಿಸೆಂಬರ್ 14ರಂದು ಮುಂಬೈ ಷೇರುಪೇಟೆ ಬಿಎಸ್‌ಇನಲ್ಲಿ ಶೇಕಡಾ 130ರಷ್ಟು ಜಿಗಿತ ಕಂಡು ಗರಿಷ್ಠ 138.40 ರೂಪಾಯಿಗೆ ಮುಟ್ಟಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿಯಲ್ಲಿ ಶೇಕಡಾ 125ರಷ್ಟು ಹೆಚ್ಚಾಗಿ ಗರಿಷ್ಠ ಷೇರು ಬೆಲೆ 135 ರೂ. ತಲುಪಿದೆ. ಇಂದು 112.50 ರೂಪಾಯಿಗೆ ವಹಿವಾಟು ಆರಂಭಿಸಿದೆ.

Burger King India Shares Soar In Marke

4,294 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಬರ್ಗರ್ ಕಿಂಗ್ ಇಂಡಿಯಾ ಐಪಿಒ ಪ್ರತಿ ಷೇರಿಗೆ 59 ರಿಂದ 60 ರೂಪಾಯಿಗೆ ನಿಗದಿಯಾಗಿತ್ತು. ಆದರೆ 156 ಪಟ್ಟು ಬಿಡ್ ಹೆಚ್ಚಾಗಿ ಕಂಡುಬಂದ ಪರಿಣಾಮ ಭಾರೀ ಬೇಡಿಕೆ ಸೃಷ್ಟಿಸಿತ್ತು.

ನವೆಂಬರ್ 2014 ರಲ್ಲಿ ತನ್ನ ಮೊದಲ ರೆಸ್ಟೋರೆಂಟ್ ಅನ್ನು ತೆರೆದ ನಂತರ, ಕಂಪನಿಯು ತನ್ನ ಉತ್ತಮ ಕಾರ್ಯ ನಿರ್ವಹಣೆ ಮೂಲಕ ಹೆಸರುವಾಸಿಯಾಗಿದೆ. 30 ಜೂನ್ 2019 ರ ಹೊತ್ತಿಗೆ, ಇದು 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ್ತು ಭಾರತದಾದ್ಯಂತ 47 ನಗರಗಳಲ್ಲಿ ಏಳು ಉಪ ಫ್ರ್ಯಾಂಚೈಸ್ಡ್‌ ಬರ್ಗರ್ ಕಿಂಗ್ ರೆಸ್ಟೋರೆಂಟ್‌ಗಳನ್ನು ಒಳಗೊಂಡಂತೆ 202 ರೆಸ್ಟೋರೆಂಟ್‌ಗಳನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+