Budget 2025: ಬಜೆಟ್‌ನಲ್ಲಿ ಮನೆ ಖರೀದಿದಾರರ ನಿರೀಕ್ಷೆಗಳೇನು?

ಕೇಂದ್ರ ಬಜೆಟ್ ಮಂಡನೆಗೆ ಇನ್ನು ಎರಡು ದಿನ ಮಾತ್ರ ಬಾಕಿ ಉಳಿದಿದೆ. ಮಧ್ಯಮ ವರ್ಗದ ಜನತೆ ಈ ಬಾರಿ ಬಜೆಟ್ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದಾಯ ತೆರಿಗೆ ಕಡಿತ ಮಾಡುವುದು, ಜಿಎಸ್‌ಟಿ ಕಡಿತ ಸೇರಿದಂತೆ ಹಲವು ವಿಚಾರಗಳ ಮೇಲೆ ಗಮನ ಹರಿಸಲಾಗಿದೆ. ಮನೆ ಖರೀದಿದಾರರು ಕೂಡ ಈ ಬಾರಿಯ ಬಜೆಟ್ ಮೇಲೆ ಅಪಾರ ನಿರೀಕ್ಷೆ ಹೊಂದಿದ್ದು, ಹೊರೆಯನ್ನು ಕಡಿಮೆ ಮಾಡಬಹುದು ಎಂದು ಕಾಯುತ್ತಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು 2025 - 2026ರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಮನೆ ಖರೀದಿದಾರರ ಮೇಲಿನ ಹೊರೆಯನ್ನು ಕಡಿಮೆ ಮಾಡಲು, ರಿಯಲ್ ಎಸ್ಟೇಟ್ ಮೇಲೆ ಹೂಡಿಕೆಯನ್ನು ಹೆಚ್ಚಿಸಲು ಹಲವು ಸುಧಾರಣೆಗಳನ್ನು ತರುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ.

budget 2025 lower taxes affordable housing homebuyers needs

ಹೆಚ್ಚಿನ ಬಡ್ಡಿದರಗಳು ಮತ್ತು ತೆರಿಗೆಗಳು ಖರೀದಿದಾರರ ಮೇಲೆ ಹೆಚ್ಚಿನ ಹೊರೆಯಾಗುವಂತೆ ಮಾಡಿವೆ. ಆರ್ಥಿಕ ಒತ್ತಡವನ್ನು ಉಂಟುಮಾಡುತ್ತಿದ್ದು, ಹೆಚ್ಚುತ್ತಿರುವ ಹಣದುಬ್ಬರ ಮಧ್ಯಮ ಮತ್ತು ಕೈಗೆಟುಕುವ ವಸತಿಗಳ ಬೇಡಿಕೆಯನ್ನು ಕಡಿಮೆ ಮಾಡಿದೆ. ಬೇಡಿಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಪರಿಹಾರಗಳನ್ನು ಘೋಷಿಸುತ್ತದೆ ಎಂದು ನಿರೀಕ್ಷೆ ಮಾಡಲಾಗಿದ್ದು, ಮನೆ ಖರೀದಿದಾರರು ಉತ್ತೇಜನವನ್ನು ಬಯಸುತ್ತಿದ್ದಾರೆ.

ಕೇಂದ್ರ ಸರ್ಕಾರದ ನೀತಿ ಕ್ರಮಗಳು ರಿಯಲ್ ಎಸ್ಟೇಟ್ ವಲಯದ ಬೆಳವಣಿಗೆಗೆ ಉತ್ತೇಜನ ನೀಡುವುದರ ಜೊತೆಗೆ, ಮಧ್ಯಮ ವರ್ಗದ ಮನೆ ಖರೀದಿದಾರರಿಗೆ ಗಮನಾರ್ಹ ಬೆಂಬಲ ನೀಡಬಹುದು ಎಂದು ರಿಯಲ್ ಎಸ್ಟೇಟ್‌ ಉದ್ಯಮ ತಜ್ಞರು ಹೇಳಿದ್ದಾರೆ.

ಹಣಕಾಸು ವ್ಯವಹಾರಕ್ಕೆ ಉತ್ತೇಜನ ನೀಡಲು, ತೆರಿಗೆ ಹೊರೆಗಳನ್ನು ಕಡಿಮೆ ಮಾಡಲು ಮತ್ತು ವಸತಿಗಳ ಖರೀದಿಗೆ ಉತ್ತೇಜನ ಕೊಡಲು ಕೇಂದ್ರ ಸರ್ಕಾರ ನಿಯಮಗಳನ್ನು ಪರಿಚಯಿಸುವ ಸಾಧ್ಯತೆ ಇದೆ. ಅವುಗಳಲ್ಲಿ ಕೆಲವು ಇಲ್ಲಿದೆ.

ಜಿಎಸ್‌ಟಿ ಕಡಿಮೆ ಮಾಡುವುದು

ಸಾಲದ ಜೊತೆಗಿನ ಸಬ್ಸಿಡಿಯನ್ನು ವಿಸ್ತರಿಸುವುದು, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ-ಯು)ಯನ್ನು ಬಲಪಡಿಸುವುದು ಮನೆ ಖರೀದಿಗೆ ಉತ್ತೇಜನ ನೀಡುತ್ತದೆ. ಈಗ ಇರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬಗೆಗಿನ ಗೊಂದಲ ರಿಯಲ್ ಎಸ್ಟೇಟ್‌ ಉದ್ಯಿಮಗಳು ಸವಾಲಾಗಿದ್ದು, ಸುವ್ಯವಸ್ಥಿತ ಮತ್ತು ಪಾರದರ್ಶಕ ತೆರಿಗೆಯಿಂದ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡಬಹುದು. ಇದರಿಂದ ನಿರ್ಮಾಣ ಹಂತದಲ್ಲಿರುವ ಮನೆ, ಫ್ಲಾಟ್, ನಿವೇಶನಗಳ ವಹಿವಾಟುಗಳನ್ನು ಸುಲಭಗೊಳಿಸುತ್ತದೆ.

ಹಲವು ರಾಜ್ಯಗಳಲ್ಲಿ ಮನೆ ಖರೀದಿದಾರರ ಮೇಲೆ 8-9% ಹೆಚ್ಚಿನ ಸ್ಟ್ಯಾಂಪ್ ಡ್ಯೂಟಿ ಹೊರೆ ಬೀಳುತ್ತಿದ್ದು ಆಸ್ತಿ ಮೇಲಿನ ವೆಚ್ಚವನ್ನು ಹೆಚ್ಚಿಸುತ್ತಿದೆ. ಏಕರೂಪದ ಮತ್ತು ಕಡಿಮೆ ದರವನ್ನು ಜಾರಿ ಮಾಡಿದರೆ ಖರೀದಿದಾರರ ಮೇಲೆ ಹೊರೆ ಕಡಿಮೆಯಾಗಲಿದೆ.

ಡಿವಿಡೆಂಡ್ ವಿತರಣಾ ತೆರಿಗೆ (ಡಿಡಿಟಿ) ಕಡಿಮೆ ಮಾಡುವುದು ಮತ್ತು ಚಿಲ್ಲರೆ ಹೂಡಿಕೆದಾರರಿಗೆ ಹೆಚ್ಚುವರಿ ಪ್ರೋತ್ಸಾಹಕಗಳನ್ನು ನೀಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಮನೆ ಖರೀದಿಯ ಸಾಲಗಳ ಮೇಲಿನ ತೆರಿಗೆ ಕಡಿತ ಮಾಡುವಂತೆ ಹಲವು ದಿನಗಳಿಂದ ಬೇಡಿಕೆಯಿದ್ದು, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಮತ್ತು 24(b) ಅಡಿಯಲ್ಲಿ ತೆರಿಗೆ ಕಡಿತ ಮಿತಿಗಳನ್ನು ಮರುಪರಿಶೀಲಿಸುವುದರಿಂದ ಉತ್ತೇಜನ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+