ವಿಮಾನಯಾನ, ವಿಮೆ, ಮಾಧ್ಯಮ ಕ್ಷೇತ್ರದಲ್ಲಿ ಎಫ್ ಡಿಐಗೆ ಉತ್ತೇಜನ

ನವದೆಹಲಿ, ಜುಲೈ 05: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಚೊಚ್ಚಲ ಬಜೆಟ್ ನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ ಡಿಐ) ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಭಾರತಕ್ಕೆ ಎಫ್ ಡಿಐ ಹೊಸ ವಿಷಯವೇನಲ್ಲ. ಯುಪಿಎ ಸರ್ಕಾರದ ಕಾಲದಿಂದಲೂ ಎಫ್ ಡಿಐಗೆ ಅವಕಾಶ ನೀಡಲಾಗಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಸಿಂಗಲ್ ಬ್ರ್ಯಾಂಡ್ ನಲ್ಲಿ ಎಫ್ ಡಿಐ ಈಗಾಗಲೇ ಹೋಲ್ ಸೇಲ್, ಬ್ಯಾಂಕಿಂಗ್, ವಿಮಾ ಕ್ಷೇತ್ರದಲ್ಲಿ ಜಾರಿಯಲ್ಲಿದೆ.

ಮೋದಿ ಸರ್ಕಾರ್ 2.0 ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಜೆಟ್ ನಲ್ಲಿ ಮಾಧ್ಯಮ, ವಿಮಾನಯಾನ, ವಿಮೆ ಮತ್ತು ರೀಟೈಲ್ ಕ್ಷೇತ್ರದ(ಸಿಂಗಲ್​ಬ್ರ್ಯಾಂಡ್) ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆ (ಎಫ್​ಡಿಐ) ಗೆ ಅನುವು ಮಾಡಿಕೊಡಲಾಗಿದೆ.

2018-19ರ ಸಾಲಿನಲ್ಲಿ ಎಫ್ ಡಿ ಐ ಪ್ರಮಾಣ ಶೇ.6ರಷ್ಟು ಹೆಚ್ಚಾಗಿದ್ದು ಸದ್ಯ 64.37 ಬಿಲಿಯನ್ ಡಾಲರ್​ಗೆ ನಷ್ಟಿದೆ. ವಿಮಾ ಕ್ಷೇತ್ರದಲ್ಲಿ ಶೇ 100 ರಷ್ಟು ಎಫ್ ಡಿ ಐಗೆ ಒತ್ತು ನೀಡಲಾಗುತ್ತಿದೆ. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಸಿಂಗಲ್ ಬ್ರ್ಯಾಂಡ್ ನಲ್ಲಿ ಎಫ್ ಡಿಐಗೆ ಅವಕಾಶ ನೀಡಿರುವುದರಿಂದ ಆರ್ಥಿಕ ಪ್ರಗತಿ ಕಾಣಬಹುದು. ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ 'ಸಿಂಗಲ್‌ ಬ್ರ್ಯಾಂಡ್‌'

ಚಿಲ್ಲರೆ ಮಾರುಕಟ್ಟೆಯಲ್ಲಿ 'ಸಿಂಗಲ್‌ ಬ್ರ್ಯಾಂಡ್‌'

ಎಫ್ ಡಿಐ ಮೂಲಕ ಇಲ್ಲಿನ ಮಾರುಕಟ್ಟೆ ಪ್ರವೇಶಿಸುವ ಸಂಸ್ಥೆಗಳ ಉತ್ಪನ್ನ 'ಸಿಂಗಲ್‌ ಬ್ರ್ಯಾಂಡ್‌' ಆಗಿರಬೇಕು. ಅದೇ ಬ್ರ್ಯಾಂಡ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡಬೇಕು ಎಂಬ ಷರತ್ತಿನ ಅಡಿಯಲ್ಲಿ ಹೂಡಿಕೆಗೆ ಅನುಮತಿ ನೀಡಲಾಗಿದೆ.

ಇದಲ್ಲದೆ, ರಿಯಲ್‌ ಎಸ್ಟೇಟ್‌ ಕ್ಷೇತ್ರಗಳಲ್ಲಿನ ಎಫ್‌ಡಿಐ ನಿಯಮಾವಳಿಗೆ ಸಡಿಲಿಕೆ ಮಾಡಲಾಗಿದೆ. ಸಾಲದ ಹೊರೆ ಹೊತ್ತು ಕುಸಿಯುತ್ತಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆ ಮೇಲೆತ್ತಲು ಶೇ 49ರಷ್ಟು ಎಫ್ ಡಿಐ ಅನುಕೂಲಕರ. ಇದಕ್ಕಿಂತ ಹೆಚ್ಚಿನ ಪ್ರಮಾಣದ ಹೂಡಿಕೆಗೆ ಸರ್ಕಾರದ ಅನುಮತಿ ಅಗತ್ಯ.

ಮೊದಲಿಗೆ ವಿಮೆ ಕ್ಷೇತ್ರದಲ್ಲಿ ಹೂಡಿಕೆಗೆ ಅನುವು

ಮೊದಲಿಗೆ ವಿಮೆ ಕ್ಷೇತ್ರದಲ್ಲಿ ಹೂಡಿಕೆಗೆ ಅನುವು

ವಿಮೆ ಕ್ಷೇತ್ರದಲ್ಲಿ ಶೇ 49ರಷ್ಟು ಇದ್ದ ಎಫ್ ಡಿಐ ಈಗ ಶೇ 100ರಷ್ಟಾಗಿದೆ. 2014ರಿಂದ ಎಫ್ ಡಿಐ ನಿಯಮಾವಳಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಶೇ 26ರಿಂದ 46ಕ್ಕೆ ಮೊದಲಿಗೆ ವಿಮೆ ಕ್ಷೇತ್ರದಲ್ಲಿ ಹೂಡಿಕೆಗೆ ಅನುವು ಮಾಡಿಕೊಡಲಾಯಿತು. 2014ರ ನಂತರ 25ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಉದಾರೀಕರಣ ನೀತಿ ಅಳವಡಿಸಿ, ಏಪ್ರಿಲ್ 2015ರ ನಂತರ ಮೇಕ್ ಇನ್ ಇಂಡಿಯಾದ ಫಲವಾಗಿ ಎಫ್ ಡಿಐ ಹರಿವು ಶೇ 48ಕ್ಕೇರಿತು.

ನಿರ್ಮಾಣ ವಲಯದಲ್ಲಿಯೂ ಎಫ್ ಡಿ ಐ ನಿಯಮ

ನಿರ್ಮಾಣ ವಲಯದಲ್ಲಿಯೂ ಎಫ್ ಡಿ ಐ ನಿಯಮ

ನಿರ್ಮಾಣ ವಲಯದಲ್ಲಿಯೂ ಎಫ್ ಡಿ ಐ ನಿಯಮಗಳನ್ನು ಒಂದಷ್ಟು ಸಡಿಲಗೊಳಿಸುವ ಸಾಧ್ಯತೆಗಳಿವೆ. ಅಭಿವೃದ್ಧಿ ಹೊಂದದ ಪ್ಲಾಟ್ಗಳಿಗೂ ಭಾರತೀಯ ಕಂಪನಿಯೊಂದು ವಿದೇಶಿ ಹೂಡಿಕೆ ಸೆಳೆಯಲು ಅವಕಾಶ ಸಿಗಲಿದೆ. ಪ್ರಸ್ತುತ ನೀತಿಯ ಪ್ರಕಾರ, ವಿವಿಧ ಶರತ್ತುಗಳ ಮೇಲೆ ನಿರ್ಮಾಣ ವಲಯದಲ್ಲಿ 100% ರಷ್ಟು ಎಫ್ಡಿಐಗೆ ಅವಕಾಶವಿದೆ. ಆದರೆ ಭಾರತೀಯ ಹೂಡಿಕೆದಾರರಿಗೆ ಕೇವಲ ಅಭಿವೃದ್ಧಿ ಹೊಂದಿರುವ ಪ್ಲಾಟ್ಗಳನ್ನು ಮಾರಾಟ ಮಾಡಲು ಮಾತ್ರ ಅವಕಾಶ ಇತ್ತು.

ವಿದೇಶಿ ನೇರ ಹೂಡಿಕೆಯಲ್ಲಿ ಭಾರತ ಅಗ್ರಸ್ಥಾನ

ವಿದೇಶಿ ನೇರ ಹೂಡಿಕೆಯಲ್ಲಿ ಭಾರತ ಅಗ್ರಸ್ಥಾನ

2013ರಲ್ಲಿ 15ನೇ ಸ್ಥಾನದಲ್ಲಿದ್ದ ಭಾರತ, 2014ರಲ್ಲಿ 9ನೇ ಸ್ಥಾನಕ್ಕೇರಿತು. 2015ರ ನಂತರ ವಿದೇಶಿ ನೇರ ಹೂಡಿಕೆಯಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ.ವಿದೇಶಿ ಹೂಡಿಕೆಗಳನ್ನು ಭಾರತಕ್ಕೆ ನಿರ್ಣಾಯಕವೆಂದು ಪರಿಗಣಿಸಲಾಗಿದ್ದು, ದೇಶದ ಬೆಳವಣಿಗೆಯನ್ನು ಹೆಚ್ಚಿಸಲು, ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಹೆದ್ದಾರಿಗಳಂತಹ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 1 ಟ್ರಿಲಿಯನ್ ಡಾಲರ್ನಷ್ಟು ಅಗತ್ಯವಿದೆ. ಇಷ್ಟು ದೊಡ್ಡ ಮೊತ್ತದ ಹಣ ಎಫ್ ಡಿಐ ಮೂಲಕ ದಕ್ಕುತ್ತದೆ ಎಂಬುದು ಸರಕಾರದ ಚಿಂತನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+