ಗ್ರಾಹಕರಿಗೆ ಹೊಸ ಆಫರ್ ನೀಡಿದ ಬಿಎಸ್ಎನ್ ಎಲ್
ಬೆಂಗಳೂರು, ಆ.4 : ಬಿಎಸ್ಎನ್ ಎಲ್ ರಕ್ಷಾ ಬಂಧನದ ಕೊಡುಗೆಯಾಗಿ ಗ್ರಾಹಕರಿಗೆ ಆಕರ್ಷಕವಾದ ಆಫರ್ ನೀಡಿದೆ. ಆ. 3 ರಿಂದ ಹನ್ನೆರಡು ದಿನಗಳ ಕಾಲ ಈ ಆಫರ್ ಲಭ್ಯವಿರುತ್ತದೆ.
ಎಸ್ ಟಿವಿ 74 ಆಫರ್ ಎಂಬ ಹೆಸರಿನ ಆಫರ್ ಇದಾಗಿದೆ. ಈ ಆಫರ್ ಅನ್ವಯ ಬಿಎಸ್ಎನ್ ಎಲ್ ನಂಬರ್ ಗಳಿಗೆ ಅನಿಯಮಿತ ಕರೆಗಳನ್ನು ಮಾಡಬಹುದು, 1 ಜಿಬಿ ಡೇಟಾ ಸಿಗಲಿದೆ. ಇತರ ನೆಟ್ ವರ್ಕ್ ಗಳಿಗೆ 74 ರೂ. ಮೌಲ್ಯದ ಕರೆಗಳು ಸಿಗಲಿವೆ.

'ಹಬ್ಬಗಳ ಸಂದರ್ಭದಲ್ಲಿ ಬಿಎಸ್ಎನ್ ಎಲ್ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ನೀಡುತ್ತದೆ. ಈ ಆಫರ್ ಆಗಸ್ಟ್ 3ರಿಂದ ಹನ್ನೆರಡು ದಿನಗಳ ಕಾಲ ಇರುತ್ತದೆ' ಎಂದು ಕರ್ನಾಟಕ ವಲಯದ ಮಹಾಪ್ರಬಂಧಕ ಆರ್.ಮಣಿ ಹೇಳಿದ್ದಾರೆ.
ಎಸ್ ಟಿವಿ 74 ಆಫರ್ ಜೊತೆಗೆ ಶೇ 18ರಷ್ಟು ಹೆಚ್ಚು ಕರೆ ಮೌಲ್ಯ ಒಂದು ಜಿಬಿ ಡೇಟಾ ಹೊಂದಿರುವ ನಾನಾ ಕೋಂಬೊ ವೋಚರ್ಸ್ ಗಳನ್ನು ಬಿಡುಗಡೆ ಮಾಡಲಾಗಿದೆ.












Click it and Unblock the Notifications