ಜಿಯೋಗೆ ಸ್ಪರ್ಧೆ ನೀಡಲು ಬಿಎಸ್ಎನ್ನೆಲ್ ನಿಂದ ಹೊಸ ಆಫರ್ಸ್
ಬೆಂಗಳೂರು, ಜುಲೈ 25: ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್ಎನ್ಎಲ್) ಹೊಚ್ಚ ಹೊಸ ಪೋಸ್ಟ್ ಪೇಯ್ಡ್ ಹಾಗೂ ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಈ ಮೂಲಕ ಏರ್ ಟೆಲ್, ರಿಲಯನ್ಸ್ ಜಿಯೋ ಹಾಗೂ ವೋಡಾಫೋನ್ ವಿರುದ್ಧ ಬಿಎಸ್ಎನ್ಎಲ್ ಸ್ಪರ್ಧೆಗಿಳಿದಿದೆ.
ಪೋಸ್ಟ್ ಪೇಯ್ಡ್ ಗ್ರಾಹಕರಿಗೆ 499 ರೂಪಾಯಿ 3ಜಿ ಯೋಜನೆ ಶುರು ಮಾಡಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ 1 ತಿಂಗಳವರೆಗೆ 45 ಜಿಬಿ 3 ಜಿ ಡೇಟಾ ಸಿಗಲಿದೆ. ಅನಿಯಮಿತ ವಾಯ್ಸ್ ಕರೆ, 100 ಎಸ್ಎಂಎಸ್ ಸಿಗಲಿದೆ. 45 ಜಿಬಿ ಬಳಕೆ ನಂತರ, ಮೊಬೈಲ್ ಇಂಟರ್ನೆಟ್ ಸ್ಪೀಡ್ 40 ಕೆಬಿಪಿಎಸ್ ಆಗಲಿದೆ. ಈ ಯೋಜನೆಯು ರಿಲಯನ್ಸ್ ಜಿಯೋದ 509ರು ಯೋಜನೆಗೆ ಪೈಪೋಟಿ ನೀಡಲಿದೆ.

ಬಿಎಸ್ಎನ್ ಎಲ್ ಇತ್ತೀಚಿಗಷ್ಟೇ ಪರಿಚಯಿಸಿದ ದೀರ್ಘಾವಧಿ ಯೋಜನೆಯಲ್ಲಿ 1,999 ರೂಪಾಯಿ ಪ್ಲಾನ್ ಮುಖ್ಯವಾಗಿದೆ. ಇದರಲ್ಲಿ ಗ್ರಾಹಕರಿಗೆ 365 ದಿನಗಳವರೆಗೆ 2 ಜಿಬಿ 3 ಜಿ ಡೇಟಾ ಸಿಗಲಿದೆ. ಅನಿಯಮಿತ ಧ್ವನಿ ಕರೆ ಜೊತೆ 100 ಎಸ್ ಎಂ ಎಸ್ ಸಿಗಲಿದೆ. ಈ ಪ್ಲಾನ್ ನಲ್ಲಿ ಗ್ರಾಹಕರು ತಿಂಗಳಿಗೆ 167 ರೂಪಾಯಿ ಖರ್ಚು ಮಾಡಿದಂತಾಗುತ್ತದೆ. ಸದ್ಯಕ್ಕೆ ಈ ಯೋಜನೆಯು ಚೆನ್ನೈ ಹಾಗೂ ತಮಿಳುನಾಡು ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ.
171 ರುಪಾಯಿ ಯೋಜನೆ : ಅನಿಯಮಿತ ವಾಯ್ಸ್ ಕಾಲ್ಸ್, ಪ್ರತಿದಿನ 2 ಜಿಬಿ ಡೇಟಾ ಹಾಗೂ 100ಎಸ್ಎಂಎಸ್. 30 ದಿನಗಳ ವ್ಯಾಲಿಡಿಟಿ. ಒಟ್ಟಾರೆ, 60 ಜಿಬಿ ಡೇಟಾ ಸಿಗಲಿದೆ.
ರಿಲಯನ್ಸ್ ಜಿಯೋದ 149 ಯೋಜನೆ ಜತೆ ಬಿಎಸ್ಎನ್ಎಲ್ 117 ಯೋಜನೆ ಪೈಪೋಟಿ ನಡೆಸಲಿದೆ. ಜಿಯೋ ಯೋಜನೆಯಲ್ಲಿ 15 ಜಿಬಿ ಪ್ರತಿದಿನ, 100 ಎಸ್ಎಂಎಸ್ ಸಿಗಲಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಆದರೆ, ಜಿಯೋ ಗ್ರಾಹಕರಿಗೆ ಲೈವ್ ಟಿವಿ ಸೇರಿದಂತೆ ಅನೇಕ ಅಪ್ಲಿಕೇಷನ್ ಗಳು ಹೆಚ್ಚುವರಿಯಾಗಿ ಸಿಗಲಿದೆ.












Click it and Unblock the Notifications