ಬಿಎಸ್ಎನ್ಎಲ್ ನಿಂದ ಕಡಿಮೆ ದರದಲ್ಲಿ ಬ್ರಾಡ್ ಬ್ಯಾಂಡ್ ಯೋಜನೆ
ಬೆಂಗಳೂರು, ಜೂನ್ 07: ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ನಾಲ್ಕು ಕಡಿಮೆ ದರದ ಬ್ರಾಡ್ ಬ್ಯಾಂಡ್ ಯೋಜನೆಯನ್ನು ಪ್ರಕಟಿಸಿದೆ.
99 ರು ನಿಂದ ಆರಂಭವಾಗುವ ಯೋಜನೆ 399ರು ತನಕ ಇದೆ. ಈ ಎಲ್ಲಾ ಯೋಜನೆಗಳಿದ ಗ್ರಾಹಕರಿಗೆ 20 ಎಂಬಿಪಿಎಸ್ ವೇಗದ ಇಂಟರ್ನೆಟ್ ಸಿಗಲಿದೆ. ತಿಂಗಳಿಗೆ 45 ಜಿಬಿಯಿಂದ 600 ಜಿಬಿ ಡೇಟಾ ತನಕ ಸಿಗಲಿದೆ.

99 ರೂಪಾಯಿ ಯೋಜನೆಯಲ್ಲಿ ಪ್ರತಿ ದಿನ 1.5 ಜಿಬಿ ಡೇಟಾ ಜೊತೆ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ಆರಂಭಿಸಲಿದೆ ಎಂಬ ಸುದ್ದಿ ಹಬ್ಬಿದೆ. ಇದಕ್ಕೆ ಪ್ರತಿಯಾಗಿ ನಾನ್ ಫೈಬರ್ ಟು ದಿ ಹೋಮ್(FTTH) ಯೋಜನೆ ಅಡಿಯಲ್ಲಿ ಬಿಎಸ್ಎನ್ಎಲ್ ಯೋಜನೆಗಳನ್ನು ಹೊರ ತಂದಿದೆ.
ಈ ಎಲ್ಲಾ ಯೋಜನೆಗಳಲ್ಲಿ ಪ್ರತಿದಿನ ರಾತ್ರಿ ಇಂಟರ್ನೆಟ್ ಸ್ಪೀಡ್ ಬದಲಾಗಲಿದೆ. ಅನಿಯಮಿತ ವಾಯ್ಸ್ ಕಾಲಿಂಗ್ (ಲ್ಯಾಂಡ್ ಲೈನ್ ನಿಂದ ಅಥವಾ ಯಾವುದೇ ನೆಟ್ವರ್ಕ್ ನಿಂದ) ಸೌಲಭ್ಯ ಸಿಗಲಿದೆ. ಒಂದು ಉಚಿತ ಇಮೇಲ್ ಐಡಿ ಹಾಗೂ 1ಜಿಬಿ ಶೇಖರಣೆ ಸ್ಥಳ ಸಿಗಲಿದೆ. 6 ತಿಂಗಳ ಅವಧಿಗೆ ಯೋಜನೆ ಲಭ್ಯವಿರಲಿದೆ.












Click it and Unblock the Notifications