ಬಿಎಸ್ಎನ್ಎಲ್ ಭಾನುವಾರ ಉಚಿತ ಕರೆ ಸೌಲಭ್ಯ ಇನ್ನಿಲ್ಲ
ಬೆಂಗಳೂರು, ಜನವರಿ 29: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ ಎನ್ ಎಲ್ ತನ್ನ ಗ್ರಾಹಕರಿಗೆ ನೀಡಿದ್ದ ವಾರಾಂತ್ಯದ ಕೊಡುಗೆಯನ್ನು ಹಿಂಪಡೆಯಲು ನಿರ್ಧರಿಸಿದೆ.
ಕಳೆದ ವರ್ಷ ಆಗಸ್ಟ್ 21 ರಿಂದ ಉಚಿತ ಕರೆ ಸೌಲಭ್ಯವನ್ನು ಜಾರಿಗೆ ತಂದಿತ್ತು. ಸ್ಥಿರ ದೂರವಾಣಿಗಳಿಗೆ ಭಾನುವಾರ ಉಚಿತ ಕರೆ ಸೌಲಭ್ಯವನ್ನು ನೀಡಲಾಗಿತ್ತು. ಈ ಸೌಲಭ್ಯ ಫೆಬ್ರವರಿ 1 ರಿಂದ ಕಡಿತಗೊಳಿಸಲಾಗುವುದು ಎಂದು ಭಾರತೀಯ ಸಂಚಾರಿ ನಿಗಮ ನಿಯಮಿತ(ಬಿಎಸ್ಎನ್ಎಲ್) ಪ್ರಕಟಿಸಿದೆ.

ಮೊದಲಿಗೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಉಚಿತ ಕರೆ ಸೌಲಭ್ಯವನ್ನು ನೀಡಲಾಗಿತ್ತು. ಆ ಸಮಯವನ್ನು ಇತ್ತೀಚೆಗೆ ಕಡಿತಗೊಳಿಸಿ ರಾತ್ರಿ 10.30 ರಿಂದ ಬೆಳಿಗ್ಗೆ 6 ಗಂಟೆಗೆ ನಿಗದಿ ಮಾಡಲಾಗಿತ್ತು. ಈಗ ಭಾನುವಾರದ ಉಚಿತ ಕರೆ ಸೌಲಭ್ಯವನ್ನೂ ಕೂಡ ಹಿಂಪಡೆಯಲಿದೆ.
ಹೊಸ ವರ್ಷದ ಆರಂಭದಲ್ಲಿ ಅನಿಯಮಿತ ಸ್ಥಳೀಯ ಹಾಗೂ ಎಸ್ ಟಿಡಿ ಕರೆ ಮಾಡುವ ಅವಕಾಶ ನೀಡಲಾಗಿದ್ದು, ಯಾವುದೇ ನೆಟ್ವರ್ಕ್ ಗೆ ಬೇಕಾದರೂ ಕರೆ ಮಾಡಬಹುದಾಗಿದೆ.ಇದು ಪ್ರೀಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರಿಬ್ಬರಿಗೂ ಅನ್ವಯವಾಗಲಿದೆ. ಉಚಿತ ಕರೆ ಸೌಲಭ್ಯವನ್ನು ಬಿ.ಎಸ್.ಎನ್.ಎಲ್. ಸ್ಥಗಿತಗೊಳಿಸುತ್ತಿರುವುದಕ್ಕೆ ಸಹಜವಾಗಿ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications