ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒನ್ ನೇಷನ್, ಒನ್ ನಂಬರ್, ಒನ್ ಇಂಡಿಯ ಕನ್ನಡ!

|
Google Oneindia Kannada News

ನವದೆಹಲಿ, ಜೂ.15 : ಬಿಎಸ್‌ಎನ್‌ಎಲ್ ಗ್ರಾಹಕರು ಇಂದಿನಿಂದ ರೋಮಿಂಗ್ ಶುಲ್ಕದ ಬಗ್ಗೆ ಚಿಂತಿಸಬೇಕಿಲ್ಲ. ಬೇರೆ ರಾಜ್ಯಕ್ಕೆ ಹೋದರೆ ಈ ಕರೆ ಎಲ್ಲಿಂದ ಬಂದಿದೆ?. ಸ್ವೀಕರಿಸಿದರೆ ರೋಮಿಂಗ್ ಶುಲ್ಕ ಕಟ್ಟಬೇಕೆ? ಎಂದು ತಲೆಕೆಡಿಸಿಕೊಳ್ಳಬೇಕಿಲ್ಲ.

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನ ಮಹತ್ವಾಕಾಂಕ್ಷೆಯ 'ಒನ್ ನೇಶನ್ ಒನ್ ನಂಬರ್' ಕನಸು ನನಸಾಗಿದ್ದು, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವ ಜನರು ರೋಮಿಂಗ್ ಶುಲ್ಕದ ಬಗ್ಗೆ ಚಿಂತಿಸಬೇಕಾಗಿಲ್ಲ. ಯಾವುದೇ ರಾಜ್ಯಕ್ಕೆ ಹೋದರೂ ಒಳ ಬರುವ ಕರೆಗಳನ್ನು ಉಚಿತವಾಗಿ ಸ್ವೀಕರಿಸಬಹುದು. [ಉಚಿತ ರೋಮಿಂಗ್ ಕೊಡುಗೆ]

bsnl

ಬೇರೆ ರಾಜ್ಯಕ್ಕೆ ಹೋಗುವಾಗ ರೋಮಿಂಗ್ ಶುಲ್ಕದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಎರಡು-ಮೂರು ಸಿಮ್‌ ಕಾರ್ಡ್‌ ಬಳಸುವ ಅಗತ್ಯವೂ ಇಲ್ಲ ಎಂದು ಬಿಎಸ್‌ಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ್ ಹೇಳಿದ್ದಾರೆ. [ಲ್ಯಾಂಡ್ ಲೈನ್ ಗ್ರಾಹಕರಿಗೆ ಉಚಿತ ಕರೆ ಗಿಫ್ಟ್]

ಉಚಿತ ರೋಮಿಂಗ್ ಸೇವೆ ಸೋಮವಾರದಿಂದ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಲಭ್ಯವಾಗಲಿದೆ. ಬಿಎಸ್‌ಎನ್‌ಎಲ್ ಸಿಮ್‌ ಕಾರ್ಡ್ ಹೊಂದಿರುವವರು ದೇಶದ ಯಾವುದೇ ರಾಜ್ಯಕ್ಕೆ ಹೋದರೂ ಒಳಬರುವ ಕರೆಗಳನ್ನು ಉಚಿತವಾಗಿ ಸ್ವೀಕರಿಸಬಹುದಾಗಿದೆ.

ರೋಮಿಂಗ್ ಶುಲ್ಕ ಕಡಿತಗೊಳಿಸಲು ಟ್ರಾಯ್ ಯಾವುದೇ ಸೂಚನೆ ನೀಡಿರಲಿಲ್ಲ. ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಅವರೊಂದಿಗೆ ಚರ್ಚಿಸಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶ್ರೀವಾಸ್ತವ್ ಅವರು ತಿಳಿಸಿದ್ದಾರೆ.

English summary
Now BSNL mobile customers dont need to carry multiple SIM cards during India roaming. Bharat Sanchar Nigam Limited (BSNL) has launched free roaming starting from Monday 15th June 2015. The all new feature will allow customers across the country to receive incoming calls at no cost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X