ಅನಿಯಮಿತ ಕರೆಗಾಗಿ ಬಿಎಸ್ಎನ್ಎಲ್ ನಿಂದ 'ಅನಂತ್' ಯೋಜನೆ
ನವದೆಹಲಿ, ಸೆಪ್ಟೆಂಬರ್ 18: ಸರ್ಕಾರಿ ಸ್ವಾಮ್ಯದ ಭಾರತೀಯ ಸಂಚಾರ ನಿಗಮ ನಿಯಮಿತ(ಬಿಎಸ್ಎನ್ಎಲ್) ತನ್ನ ಪ್ರೀಪೇಯ್ಡ್ ಚಂದಾದಾರರಿಗೆ ಅನಿಯಮಿತ ವಾಯ್ಸ್-ಓನ್ಲಿ ಯೋಜನೆಯನ್ನು ಹೊರ ತಂದಿದೆ.
ಬಿಎಸ್ಎನ್ಎಲ್ ಅನಂತ ಪ್ಲಸ್ ಮತ್ತು ಅನಂತ ಎಂಬ ಯೋಜನೆಯನ್ನು ಬಳಸಿಕೊಂಡು 90 ದಿನ ಅನಿಯಮಿತವಾಗಿ ಕರೆ ಮಾಡುವ ಪ್ರಯೋಜನ ಪಡೆದುಕೊಳ್ಳಬಹುದು. ಈ ಯೋಜನೆಗೆ ಕ್ರಮವಾಗಿ 105 ರೂ. ಮತ್ತು 328 ರೂ. ಪ್ರೀಪೇಯ್ಡ್ ರೀಚಾರ್ಜ್ ಮಾಡಿಸಿಕೊಂಡರೆ ಸಾಕು.
ಸದ್ಯ ಈ ಹೊಸ ಯೋಜನೆಯು ತೆಲಂಗಾಣ, ಆಂಧ್ರಪ್ರದೇಶ ಟೆಲಿಕಾಂ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಇನ್ನು ಕೆಲವು ದಿನಗಳಲ್ಲಿ ದೇಶದೆಲ್ಲೆಡೆ ಈ ಯೋಜನೆಗಳು ಲಭ್ಯವಾಗಲಿವೆ.

ಅನಂತ ಪ್ಲಸ್ ಯೋಜನೆಯಲ್ಲಿ 328 ರೂ. ದರದಲ್ಲಿ 90 ದಿನ ಅನಿಯಮಿತ ಕರೆ ಮಾಡಬಹುದು. ಎಸ್ಟಿಡಿ ವಾಯ್ಸ್ ಕರೆ ಜತೆ ರೋಮಿಂಗ್ ಗೂ ಅವಕಾಶವಿದೆ. ಇದೇ ರೀತಿ ಯೋಜನೆ ಸದ್ಯಕ್ಕೆ 219 ರುಗಳಿಗೆ 28 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತಿದೆ.
ಜತೆಗೆ ಬಿಎಸ್ಎನ್ಎಲ್, ಪ್ರತಿ ದಿನ 2.2 ಜಿಬಿ ಡೇಟಾ ನೀಡಲಿದೆ. ಇದಲ್ಲದೆ 186 ರು, 429 ರು, 485 ರು, 666 ರು ಹಾಗೂ 999 ರು ಪ್ರೀಪೇಯ್ಡ್ ರೀಚಾರ್ಜ್ ಗಳನ್ನು ನೀಡುತ್ತಿದೆ.












Click it and Unblock the Notifications