ಬ್ರಿಗೇಡ್ ಗ್ರೂಪ್- ಜಿಐಸಿ 1500 ಕೋ. ರೂಪಾಯಿಗಳ ಒಪ್ಪಂದ

ಬೆಂಗಳೂರು, ಸೆ. 8: ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಯಾಗಿರುವ ಬ್ರಿಗೇಡ್ ಗ್ರೂಪ್ ಸಿಂಗಾಪುರದ ಪ್ರಮುಖ ಹಣಕಾಸು ಸಂಸ್ಥೆಯಾದ ಜಿಐಸಿ ಜತೆ 1500 ಕೋಟಿ ರೂಪಾಯಿಗಳ ವಸತಿ ಸಮುಚ್ಚಯ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡಿದೆ.

ಈ ಎರಡೂ ಸಂಸ್ಥೆಗಳು ಅತ್ಯಂತ ಹೆಚ್ಚು ಬೇಡಿಕೆ ಇರುವ ದಕ್ಷಿಣ ಭಾರತದ ನಗರಗಳಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಿಸಲಿವೆ.ಬ್ರಿಗೇಡ್ ಗ್ರೂಪ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಜೈಶಂಕರ್ ಅವರ ಪ್ರಕಾರ, ದೂರದೃಷ್ಟಿ ಇರುವ ಜಾಗತಿಕ ಮಟ್ಟದಲ್ಲಿ ಹೂಡಿಕೆ ಮಾಡುವಲ್ಲಿ ನಿಷ್ಣಾತವಾಗಿರುವ ಜಿಐಸಿ ಸಂಸ್ಥೆಯೊಂದಿಗೆ ಬ್ರಿಗೇಡ್ ಗ್ರೂಪ್ ಒಪ್ಪಂದ ಮಾಡಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ.

Brigade Group and GIC set up Rs. 1,500 crores
ಈ ಒಪ್ಪಂದದ ಮೊದಲ ಬೃಹತ್ ವಸತಿ ಯೋಜನೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಕಾರ್ಯರೂಪಕ್ಕೆ ಬರಲಿದ್ದು, ಇಲ್ಲಿ 880 ಕುಟುಂಬಗಳಿಗೆ ಮನೆಗಳು ನಿರ್ಮಾಣವಾಗಲಿವೆ. ಈಗಾಗಲೇ ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಮಾರಾಟ ಪ್ರಕ್ರಿಯೆಯೂ ಚಾಲನೆಗೊಂಡಿದೆ. ಇದೇ ರೀತಿ ದಕ್ಷಿಣ ಭಾರತದಲ್ಲಿ ಇಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ನಮ್ಮ ಜಂಟಿ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಪಡಿಸಿಕೊಳ್ಳಲಿದ್ದೇವೆ ಎಂದು ಜೈಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

ಜಿಐಸಿ ರಿಯಲ್ ಎಸ್ಟೇಟ್‍ನ ಏಷ್ಯಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಹ ಮುಖ್ಯಸ್ಥ ಲೀ ಕೊಕ್ ಸನ್ ಮಾತನಾಡಿ, ಭಾರತದ ರಿಯಲ್ ಎಸ್ಟೇಟ್ ಮಾರುಕಟ್ಟೆ ಅತ್ಯುತ್ತಮ ರೀತಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ಇದರ ಮೇಲೆಯೇ ನಮಗೆ ವಿಶ್ವಾಸವಿದೆ. ನಾವು ನಮ್ಮ ಮೌಲ್ಯ ಮತ್ತು ಘನತೆಯನ್ನು ಹೆಚ್ಚಿಸುವಂತಹ ಸಹಭಾಗಿದಾರರನ್ನು ಹುಡುಕುತ್ತಿದ್ದೆವು. ಅಂತಿಮವಾಗಿ ದಕ್ಷಿಣ ಭಾರತದಲ್ಲಿ ಮುಂಚೂಣಿಯಲ್ಲಿರುವ ರಿಯಲ್ ಎಸ್ಟೇಟ್ ಸಂಸ್ಥೆಯಾದ ಬ್ರಿಗೇಡ್ ಗ್ರೂಪ್ ನೊಂದಿಗೆ ಒಪ್ಪಂದಕ್ಕೆ ಬಂದಿದ್ದೇವೆ. ಇದು ನಮಗೆ ಸಂತಸ ತಂದಿದೆ ಎಂದರು. (ಒನ್ಇಂಡಿಯಾ ಬಿಜಿನೆಸ್ ಡೆಸ್ಕ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+