ಬ್ರಿಗೇಡ್ ಎಂಟರ್ ಪ್ರೈಸಸ್ ಲಿಮಿಟೆಡ್ ಶೇ.40 ಲಾಭ
ಬೆಂಗಳೂರು, ಮೇ 9, 2014: ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ದೈತ್ಯ ಬ್ರಿಗೇಡ್ ಎಂಟರ್ ಪ್ರೈಸಸ್ ನ 2013-14ನೇ ಸಾಲಿನ ನಿವ್ವಳ ಲಾಭ ಶೇ. 40% ನಷ್ಟು ಪ್ರಗತಿಯಾಗಿದ್ದು, ಕಳೆದ ಆರ್ಥಿಕ ವರ್ಷದ 898 ರೂ.ನಿಂದ 642 ರೂ. ಗೆ ಏರಿದೆ.
ಸಂಸ್ಥೆಯ ಕಾರ್ಯನಿರ್ವಹಣೆಯ ಬಗ್ಗೆ ಪ್ರತಿಕ್ರಿಯಿಸಿರುವ ಬ್ರಿಗೇಡ್ ಎಂಟರ್ ಪ್ರೈಸಸ್ ಲಿಮಿಟೆಡ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಂ.ಆರ್.ಜೈಶಂಕರ್, 2013-14ನೇ ಸಾಲಿನಲ್ಲಿ ಸಾಧಿಸಿರುವ ಪ್ರಗತಿಯು "ಹೊಸ ಉಪಕ್ರಮಗಳ ಉತ್ತಮ ಮಾರಾಟ ಹಾಗೂ ಕಮರ್ಷಿಯಲ್ ಸ್ಪೇಸ್ ನ ಮಾರಾಟದ ಫಲಿತಾಂಶವಾಗಿದೆ'' ಎಂದು ಹೇಳಿದರು.
ಮಾರ್ಚ್ 31, 2014 ಆರ್ಥಿಕ ವರ್ಷದಲ್ಲಿ ಕಂಪನಿಯು ರೂ. 9,158 ಮಿಲಿಯನ್ ಆದಾಯ ಗಳಿಸಿದೆ. ಕಳೆದ ವರ್ಷದ ರೂ. 7,881 ಮಿಲಿಯನ್ಸ್ ಗೆ ಹೋಲಿಸಿದರೆ ಈ ಬಾರಿ ಶೇ. 16% ಆದಾಯ ಜಾಸ್ತಿಯಾಗಿದೆ.

ವಸತಿ ಮಾರಾಟದ ಏರಿಕೆ: ಹೊಸ ಉಪಕ್ರಮಗಳ ಮಾರಾಟವನ್ನು ವಿವರಿಸಿದ ಜೈಶಂಕರ್, "ಬೆಂಗಳೂರಿನಾದ್ಯಂತ ವಿವಿಧ ಪ್ರದೇಶಗಳಲ್ಲಿ 80 ಲಕ್ಷದಿಂದ 1.6 ಕೋಟಿ ರೂ. ಬೆಲೆಯ ವಿಭಾಗದಲ್ಲಿ ಉತ್ತಮ ಏರಿಕೆ ಕಂಡಿದೆ'' ಎಂದರು. ಜತೆಗೆ, ಈ ಟ್ರೆಂಡ್ ಈ ವರ್ಷವೂ ಮುಂದುವರಿಯುವ ನಿರೀಕ್ಷೆ ವ್ಯಕ್ತಪಡಿಸಿದರು. ಖರೀದಿದಾರರು ಒಟ್ಟಾರೆ ವಹಿವಾಟಿನ ಗಾತ್ರದ ಬಗೆಗೂ ಜಾಗೃತರಾಗಿದ್ದಾರೆ'' ಎಂದು ಅವರು ಹೇಳಿದರು.
ಇದು ಕೇವಲ ಐಷಾರಾಮಿ ವಿಚಾರದಲ್ಲಿ ಮಾತ್ರವಲ್ಲ. ಕನಕಪುರ ರಸ್ತೆಯಲ್ಲಿರುವ ಬ್ರಿಗೇಡ್ ಮೆಡೋಸ್ ಗ್ರಾಹಕರ ತುಡಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣವಾಗುತ್ತಿರುವ ಯೋಜನೆಯಾಗಿದೆ. ಇಲ್ಲಿ 1850 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈಗಾಗಲೇ ಮೊದಲ ಹಂತದ ಮನೆಗಳು ಮಾರಾಟವಾಗಿವೆ ಎಂದು ಜೈಶಂಕರ್ ತಿಳಿಸಿದರು.
ಉತ್ತಮ ವಹಿವಾಟು ನಡೆಸುತ್ತಿರುವ ಇದು ಕೇವಲ ಲಕ್ಷುರಿ ವಿಭಾಗವಲ್ಲ ಎಂದು ಹೇಳಿರುವ ಜೈಶಂಕರ್, ಕಂಪನಿಯ ವ್ಯಾಲ್ಯೂ ಹೋಮ್ ಪ್ರಾಜೆಕ್ಟ್ ಆಗಿರುವ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಬ್ರಿಗೇಡ್ ಮೆಡೋಸ್ ನ ಮಾರಾಟ ಭಾರಿ ಭರವಸೆ ಮೂಡಿಸುತ್ತಿದೆ ಎಂದರು. ಈ ಪ್ರಾಜೆಕ್ಟ್ ನ 1ನೇ ಹಂತ ಸಂಪೂರ್ಣವಾಗಿ ಮಾರಾಟವಾಗಿದೆ'' ಎಂದೂ ಅವರು ವಿವರಿಸಿದರು. ಬ್ರಿಗೇಡ್ ಮೆಡೋಸ್ ನ 1ನೇ ಹಂತವು 1,850 ಘಟಕಗಳನ್ನು ಹೊಂದಿದೆ.
ಬ್ರಿಗೇಡ್ ಗ್ರೂಪ್ ಕಳೆದ ಒಂದು ವರ್ಷದಲ್ಲಿ ದಕ್ಷಿಣ ಭಾರತದಾದ್ಯಂತ ಉಪಕ್ರಮಗಳ ಸರಣಿಯನ್ನೇ ಘೋಷಿಸಿದೆ: ಹೈದರಾಬಾದ್ (ಬ್ರಿಗೇಡ್ ಅಟ್ ನಂ 7), ಮಂಗಳೂರು (ಬ್ರಿಗೇಡ್ ಪಿನಾಕಲ್), ಮೈಸೂರು (ಬ್ರಿಗೇಡ್ ಪಾಮ್ ಗ್ರೋವ್- ವಿಲ್ಲಾ ಪ್ರಾಜೆಕ್ಟ್), ಚಿಕ್ಕಮಗಳೂರು (ಬ್ರಿಗೇಡ್ ಸೆರೆನಿಟಿ), ಮತ್ತು ಬೆಂಗಳೂರು (ಬ್ರಿಗೇಡ್ ಲೇಕ್ ಫ್ರಂಟ್- ವೈಟ್ ಫೀಲ್ಡ್ ನಲ್ಲಿ ಇಪಿಐಪಿ ವಲಯ; ಬ್ರಿಗೇಡ್ ಕಾಸ್ಮೋಪೊಲಿಸ್ ವೈಟ್ ಫೀಲ್ಡ್). ಇದಲ್ಲದೆ, ಕಂಪನಿಯು ಬೆಂಗಳೂರು, ದೇವನಹಳ್ಳಿ ಬಳಿಯ ಬ್ರಿಗೇಡ್ ಆರ್ಕೆಡ್ಸ್ ನ ಪಾರ್ಕ್ ಸೈಡ್ ನಲ್ಲಿ ನಿವೃತ್ತಿ ಮನೆಗಳನ್ನೂ ಆರಂಭಿಸಿದೆ.
ಆತಿಥ್ಯ ಉದ್ಯಮ: ಬ್ರಿಗೇಡ್ ಹಾಸ್ಪಿಟಾಲಿಟಿ ಸರ್ವೀಸ್, ಬ್ರಿಗೇಡ್ ಗ್ರೂಪ್ ನ ಆತಿಥ್ಯ ವಿಭಾಗವು, ಪ್ರಸ್ತುತ ಬೆಂಗಳೂರಿನ - ಕೋರಮಂಗಲದಲ್ಲಿ ಗ್ರಾಂಡ್ ಮರ್ಕ್ಯೂರ್ ಮತ್ತು ಶೆರ್ಲಾನ್ ಟವರ್ಸ್ ಗಳನ್ನು ಹೊಂದಿದೆ. ತನ್ನ ಬಜೆಟ್ ಹೋಟೆಲ್ ಗಳಿಗಾಗಿ ಕಂಪನಿಯು ಹಾಲಿಡೇ ಇನ್ ಎಕ್ಸ್ ಪ್ರೆಸ್ ನೊಂದಿಗೆ ಸಹಭಾಗಿತ್ವ ಸಾಧಿಸಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಒಪ್ಪಂದದನ್ವಯ, ಬ್ರಿಗೇಡ್ ಗ್ರೂಪ್ 2020ರ ವೇಳೆಗೆ ಭಾರತದಾದ್ಯಂತ 10 ಆಸ್ತಿಗಳನ್ನು ಹೊಂದಿ ಅಭಿವೃದ್ಧಿಪಡಿಸುವ ಯೋಜನೆ ಹೊಂದಿದೆ. ಹಾಲಿಡೇ ಇನ್ ಎಕ್ಸ್ ಪ್ರೆಸ್ ಇವುಗಳನ್ನು ನಿರ್ವಹಿಸಲಿದೆ. 2013-14ರಲ್ಲಿ ಗ್ರೂಪ್ ವರ್ಲ್ಡ್ ಟ್ರೇಡ್ ಸೆಂಟರ್ ನ ರೂಫ್ ಟಾಪ್ ನಲ್ಲಿ ಲಾಂಜ್ ಬಾರ್ ಅನ್ನು ಆರಂಭಿಸಿದ್ದು, ಇದನ್ನು ಹೈ ಎಂದು ಕರೆದಿದ್ದು ಇದು ದಕ್ಷಿಣ ಭಾರತದಲ್ಲೇ ಅತಿ ಎತ್ತರದ ರೂಫ್ ಟಾಪ್ ಲಾಂಜ್ ಬಾರ್ ಆಗಿದೆ. (ಒನ್ಇಂಡಿಯಾ ಕನ್ನಡ)












Click it and Unblock the Notifications