ಬಾಷ್ ಲಾಭ ಇಳಿಕೆಯಾದರೂ ಬಿಡದಿ ಘಟಕದ ಮೇಲಿದೆ ಭರವಸೆ!

ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಪೂರೈಕೆದಾರ ಮತ್ತು ಸೇವಾ ಪ್ರವರ್ತಕ ಬಾಷ್ ಸಂಸ್ಥೆ ಗುರುವಾರ(ಮೇ 25) ತನ್ನ ನಾಲ್ಕನೇ ತ್ರೈಮಾಸಿಕ ವರದಿ ಪ್ರಕಟಿಸಿದೆ.

ಬೆಂಗಳೂರು, ಮೇ 25: ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಪೂರೈಕೆದಾರ ಮತ್ತು ಸೇವಾ ಪ್ರವರ್ತಕ ಬಾಷ್ ಸಂಸ್ಥೆ ಗುರುವಾರ(ಮೇ 25) ತನ್ನ ನಾಲ್ಕನೇ ತ್ರೈಮಾಸಿಕ ವರದಿ ಪ್ರಕಟಿಸಿದೆ.

ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ಶೇ 10.22ರಷ್ಟು ನಿವ್ವಳ ಲಾಭ ಇಳಿಕೆ ಕಂಡು 440.47 ಕೋಟಿ ರು ಗೆ ಮುಟ್ಟಿದೆ. ಆದರೆ, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ. 7.6 ರಷ್ಟು ಬೆಳವಣಿಗೆ ಸಾಧಿಸಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಆದಾಯ ಶೇ 3.14 ಏರಿಕೆ ಕಂಡು 2,780 ಕೋಟಿ ರು ನಷ್ಟಿದೆ.

ಹೂಡಿಕೆ ಮುಂದುವರಿಕೆ: ಉತ್ಪಾದನೆ ಘಟಕಗಳ ಅಭಿವೃದ್ಧಿ

ಮೇ.22,2017ರಂದು ಬಾಷ್ ಆಡಳಿತ ಮಂಡಳಿ ಬಿಡದಿಯಲ್ಲಿನ 2ನೇ ಹಂತದ ಘಟಕ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿದೆ. 2019ರ ಮಧ್ಯ ಅವಧಿಯಲ್ಲಿ 2ನೇ ಹಂತ ವಹಿವಾಟು ಆರಂಭಿಸಲಿದ್ದು 2500 ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಮುಖ್ಯವಾಗಿ ಬಿಡದಿಯ ಡೀಸೆಲ್ ಘಟಕ ಎ-ಪಂಪ್ ಮತ್ತು ಸಿಂಗಲ್ ಸಿಲಿಂಡರ್ ಪಂಪ್ ಇತರೆ ಉತ್ಪಾದನೆ ಮಾಡಲಿದೆ.

ಕಳೆದ 12 ತಿಂಗಳಲ್ಲಿ ಬಾಷ್ ತನ್ನ ಬಿಡದಿ ಮತ್ತು ನಾಸಿಕ್ ಘಟಕಗಳ ಹೊಸ ಉತ್ಪನ್ನಗಳ ಮೇಲೆ ಹೂಡಿಕೆ ಮಾಡಿದೆ. ಒಟ್ಟಾರೆಯಾಗಿ ಕಂಪನಿ 2016-17ರಲ್ಲಿ 630 ಕೋಟಿ ಹೂಡಿಕೆ ಮಾಡಿದೆ. ಬಾಷ್ ಭಾರತದಲ್ಲಿ ನಿರಂತರವಾಗಿ ಹೂಡಿಕೆ ಮುಂದುವರಿಸಿದ್ದು ಮುಂದಿನ ಹಣಕಾಸು ವರ್ಷದಲ್ಲಿ ಅದೇ ರೀತಿ ಹೂಡಿಕೆ ಮುಂದುವರಿಸಲಿದೆ.

Bosch Q4 profit dips 10.22% at Rs440.47 crore on higher tax expenses

ಮಾರ್ಚ್ 31,2017ರ ಅಂತ್ಯದ ತ್ರೈಮಾಸಿಕದಲ್ಲಿ ಬಾಷ್ ಒಟ್ಟಾರೆ ಮಾರಾಟ ಮತ್ತು ವಹಿವಾಟು ಆದಾಯ 2,734 ಕೋಟಿ ರೂ. ಆಗಿದ್ದು 2016ರ ಇದೇ ಅವಧಿಗೆ ಹೋಲಿಸಿದರೆ ಶೇ.6 ರಷ್ಟು ಬೆಳವಣಿಗೆ ಕಂಡಿದೆ. ಇದೇ ತ್ರೈಮಾಸಿಕದಲ್ಲಿ ತೆರಿಗೆ ಪೂರ್ವ ಲಾಭ 662 ಕೋಟಿ ರೂ. ಆಗಿದ್ದು ಹಿಂದಿನ ವರ್ಷಕ್ಕಿಂತ ಶೇ.9ರಷ್ಟು ಬೆಳವಣಿಗೆ ಕಂಡಿದೆ.

ಮೊಬಿಲಿಟಿ ಕ್ಷೇತ್ರ ಶೇ.4.3ರಷ್ಟು ಬೆಳವಣಿಗೆ ಕಂಡಿದೆ. ಮೊಬಿಲಿಟಿ ಸಲ್ಯೂಷನ್ಸ್, ಗ್ಯಾಸೋಲಿನ್ ಸಿಸ್ಟಮ್ ಮತ್ತು ದ್ವಿಚಕ್ರ ವಾಹನವಹಿವಾಟುಗಳು ಎರಡಂಕಿ ಬೆಳವಣಿಗೆ ಸಾಧಿಸಿವೆ.

ಮೊಬಿಲಿಟಿ ಹಿಂದಿನ ವಹಿವಾಟು ಶೇ.17.2 ರಷ್ಟು ಬೆಳವಣಿಗೆ ಸಾಧಿಸಿದ್ದು ಸೆಕ್ಯುರಿಟಿ ಸಿಸ್ಟಮ್, ಎಟಿಎಂಒ ಮತ್ತು ಎನರ್ಜಿ ಹಾಗೂ ಬಿಲ್ಡಿಂಗ್ ಸಲ್ಯೂಷನ್ ವಹಿವಾಟುಗಳು ಪ್ರಗತಿ ಕಂಡಿವೆ.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+