500 ರೂ.ಗೆ ಜೆಟ್ ಏರ್‌ವೇಸ್ ಟಿಕೆಟ್ ಬುಕ್ ಮಾಡಿ

ಬೆಂಗಳೂರು, ಸೆ.3 : ವಿಮಾನಯಾನ ಸಂಸ್ಥೆಗಳ ದರ ಸಮರಕ್ಕೆ ಮುಂದುವರೆದಿದೆ. ಜೆಟ್ ಏರ್‌ವೇಸ್ ಸಹ ಸಮರಕ್ಕೆ ಕೈಜೋಡಿಸಿದ್ದು, ರೂ.500 ರೂ.ಗೆ ದೇಶಿಯಾ ಪ್ರಯಾಣದ ಟಿಕೆಟ್ ಲಭ್ಯವಾಗಲಿದೆ ಎಂದು ಘೋಷಿಸಿದೆ.

ಈ ವಿಶೇಷ ಸೇವೆಯನ್ನು ಪಡೆಯಲು ಇಚ್ಛಿಸುವ ಪ್ರಯಾಣಿಕರು ಸೆ.3 ಮತ್ತು 4ರಂದು ತಮ್ಮ ಟಿಕೆಟ್‌ಗಳನ್ನು ಕಾಯ್ದರಿಸಬೇಕಾಗುತ್ತದೆ. 2015ರ ಜನವರಿ 16ರೊಳಗೆ ಕಾಯ್ದಿರಿಸಿದ ಟಿಕೆಟ್ ಮೂಲಕ ಪ್ರಯಾಣ ಮಾಡಬಹುದಾಗಿದೆ ಎಂದು ಸಂಸ್ಥೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. [ಮಾಹಿತಿಗಾಗಿ ಇಲ್ಲಿ ನೋಡಿ]

Jet Airways

ಸ್ಪೈಸ್ ಜೆಟ್ ಮತ್ತು ಇಂಡಿಗೋ ಸಂಸ್ಥೆಗಳು ದರ ಸಮರ ಆರಂಭಿಸಿದ ನಂತರ ಜೆಟ್‌ ಏರ್‌ವೇಸ್ ಈ ಸಾಲಿಗೆ ಸೇರಿಕೊಂಡಿದೆ. ಇಂಡಿಗೋ ಸಹ ಮತ್ತೊಂದು ಸುತ್ತಿನ ದರ ಸಮರ ಘೋಷಣೆ ಮಾಡಿದ್ದು, ಸೆ.3 ಮತ್ತು 4ರಂದು 999 ರೂ.ಗೆ ಟಿಕೆಟ್ ಬುಕ್ ಮಾಡಿ ಎಂದು ಕರೆ ನೀಡಿದೆ. 2015ರ ಜನವರಿ 16ರ ವರೆಗೆ ಪ್ರಯಾಣ ಮಾಡಲು ಈ ಹೊಸ ದರ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದೆ. [ಸ್ಪೈಸ್ ಜೆಟ್ ಸಖತ್ ಆಫರ್ ನೀಡಿತ್ತು]

ಹಿಂದೆ ಇಂಡಿಗೋ ಸಂಸ್ಥೆ ದೇಶಿಯಾ ಪ್ರಯಾಣಕ್ಕೆ 1,887 ರೂ. ಟಿಕೆಟ್ ದರ ನಿಗದಿ ಮಾಡಿ ದರ ಸಮರ ಆರಂಭಿಸಿತ್ತು. ಆದರೆ, ಅದು ಕೆಲವು ದಿನಗಳಿಗೆ ಮಾತ್ರ ಸೀಮಿತವಾಗಿತ್ತು. ಸ್ಪೈಸ್ ಜೆಟ್ ಸಹ ಸೋಮವಾರ 'Early Bird' ಹೆಸರಿನ ಸೇವೆಯನ್ನು ಆರಂಭಿಸಿ ಮೂರು ದಿನಗಳ ಬುಕ್ಕಿಂಗ್ ಸೇವೆ ಒದಗಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+