ದಾಖಲೆ ಮಟ್ಟಕ್ಕೇರಿ ಮಾರ್ಚ್ 15ರಂದು ಕುಸಿತ ಕಂಡ ಬಿಟ್ ಕಾಯಿನ್
ಬೆಂಗಳೂರು, ಮಾರ್ಚ್15: ಜನಪ್ರಿಯ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಮೌಲ್ಯ ಸತತವಾಗಿ ಏರಿಕೆ ಕಾಣುತ್ತಾ ಮೈನರ್ಸ್, ಟ್ರೇಡರ್ಸ್ ಭಾರಿ ಕೆಲಸ ಕೊಟ್ಟಿತ್ತು. ಆದರೆ, ಸೋಮವಾರ(ಮಾರ್ಚ್ 15) ಶೇ 9.2 ರಷ್ಟು ಒಟ್ಟಾರೆ ಕುಸಿತ ಕಂಡು ಬೆಳಗ್ಗಿನ ವಹಿವಾಟಿನಲ್ಲಿ $56, 325ಕ್ಕೆ ಕುಸಿದಿತ್ತು.
ಭಾನುವಾರ (ಮಾರ್ಚ್ 14)ರಂದು 60, 000 ಡಾಲರ್ ಗಡಿ ದಾಟಿತ್ತು. ಶನಿವಾರ ಶೇ 6.64ರಷ್ಟು ಏರಿಕೆ ಕಂಡು ಮೊದಲ ಬಾರಿಗೆ ದಾಖಲೆಯ $61,073.71 ತಲುಪಿತ್ತು.
ಡಿಜಿಟಲ್ ದುಡ್ಡು ಬಿಟ್ ಕಾಯಿನ್ 1 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ದಾಟಿ ಅಚ್ಚರಿ ಮೂಡಿಸಿದ ಬಳಿಕ ಭಾರಿ ಕುಸಿತ ಕಂಡಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 27,734 ಡಾಲರ್ ಮೌಲ್ಯ ಹೊಂದಿದ್ದ ಬಿಟ್ ಕಾಯಿನ್ ಶೇ 120.2ರಷ್ಟು ಏರಿಕೆ ಕಂಡಿದೆ.

ಮಾರ್ಚ್ 15ರಂದು ಈ ಸಮಯ(17.35)ಕ್ಕೆ ಬಿಟ್ ಕಾಯಿನ್ ಮೌಲ್ಯ:
ಬಿಟ್ ಕಾಯಿನ್ ಬೆಲೆ: $56,155.90
ಒಟ್ಟಾರೆ ಮಾರುಕಟ್ಟೆ ಮೌಲ್ಯ: $1,047,558,900,879
ಒಂದು ಬಿಟ್ ಕಾಯಿನ್ ಬೆಲೆ = 40,85,568.22 ರು
(1 USD=72.53 ರುಪಾಯಿ)
ಕಳೆದ 24 ಗಂಟೆಗಳಲ್ಲಿ ಶೇ 7.73ಷ್ಟು ಇಳಿಕೆ ಕಂಡಿದೆ. ಈ ವಾರ 11.89% ರಷ್ಟು ಏರಿಕೆಯಾಗಿತ್ತು. ಈ ನಡುವೆ ಮತ್ತೊಂದು ಡಿಜಿಟಲ್ ಕರೆನ್ಸಿ ಎಥೆರೆಯಂ(Ethereum) ಕಳೆದ 24 ಗಂಟೆಗಳಲ್ಲಿ ಶೇ 5.89ರಷ್ಟು ಇಳಿಕೆ ಕಂಡು 1,773.52ಡಾಲರ್ ಮೌಲ್ಯಕ್ಕಿಳಿದಿದೆ. ಒಟ್ಟಾರೆ $ 204,057,679,788ಮೌಲ್ಯ ಹೊಂದಿದೆ.
ಬಿಟ್‌ಕಾಯಿನ್: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications