ಮೈಸೂರು ರಸ್ತೆಯಿಂದ ಬಿರ್ಲಾ ಹೋಮ್ಸ್ ನಗರಕ್ಕೆ ಎಂಟ್ರಿ!
ಬೆಂಗಳೂರು, ಜೂ. 25: ಬಿರ್ಲಾ ಫೈನಾನ್ಶಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (ಬಿಎಫ್‍ಎಸ್‍ಐ), ಯಶ್ ಬಿರ್ಲಾ ಗ್ರೂಪಿನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದ್ದು, ಇದು ಬಿರ್ಲಾ ಹೋಮ್ಸ್ ಅನ್ನು ಘೋಷಿಸಿದೆ. ಈ ಬಿಡುಗಡೆಯೊಂದಿಗೆ ಕಂಪನಿಯು ಬ್ರಾಂಡ್ ಸಹಯೋಗದ ಮಾದರಿಯ ಮೂಲಕ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಪ್ರವೇಶವನ್ನು ಘೋಷಿಸಿದೆ.
ಈ ಹೊಸ ಅಂಗಸಂಸ್ಥೆಯ ಬಿಡುಗಡೆಯ ಕುರಿತು ಮಾತನಾಡಿದ, ಮನೋಜ್ ಸಿಂಗ್, ವ್ಯವಸ್ಥಾಪಕ ನಿರ್ದೇಶಕರು, ಬಿರ್ಲಾ ಹೋಮ್ಸ್, "ಮಾರುಕಟ್ಟೆಯಲ್ಲಿ ಮನೆಗಳು ಅತಿ ದುಬಾರಿಯಾಗಿರುವ ವೇಳೆಯಲ್ಲಿ ಜನಸಮೂಹಕ್ಕೆ ಕೈಗೆಟಕುವ ಬೆಲೆಯಲ್ಲಿ ಸುಂದರ ಮನೆಗಳನ್ನು ಒದಗಿಸುವ ಪ್ರಯತ್ನವೇ ಬಿರ್ಲಾ ಹೋಮ್ಸ್ ಆಗಿದೆ. ನಾವು ಲಕ್ಷುರಿ ಬಜೆಟ್ ಮನೆಗಳನ್ನು ನೀಡಲಿದ್ದೇವೆ.

ವೃತ್ತಿಪರರು, ಮಾರುಕಟ್ಟೆ ಸಂಶೋಧಕರು ಇರುವ ಸಂಸ್ಥೆಯಾಗಿದ್ದುಕೊಂಡು, ನಿಗದಿತ ಸಮಯಕ್ಕೆ ಒದಗಿಸುವ ಸಾಮರ್ಥ್ಯ, ಆರ್ಥಿಕ ಅನುಕೂಲ, ಉತ್ತಮ ಪೂರೈಕೆ ಸರಣಿ ಮತ್ತು ಗುಣಮಟ್ಟ ಸೃಷ್ಟಿಯ ಬಯಕೆ ಮತ್ತು ಮೌಲವರ್ಧಿತ ಮನೆಗಳನ್ನು ಭಾರತದಾದ್ಯಂತ ಸಮುದಾಯಗಳಿಗೆ ಒದಗಿಸುವ ಸಾಮರ್ಥ್ಯ ಹೊಂದಿದೆ. ರಾಷ್ಟ್ರಾದ್ಯಂತ ಸ್ಥಾಪಿತ ವಸತಿ ಒದಗಿಸಬೇಕೆಂಬ ಸಹಜ ಬಯಕೆಯೊಂದಿಗೆ ನಾವು ಬಂದಿದ್ದೇವೆ'' ಎಂದು ಹೇಳಿದರು.
ಬ್ರಾಂಡ್ ಸಹಯೋಗಗಳು : ಈ ರಿಯಲ್ ಎಸ್ಟೇಟ್ ವೆಂಚರ್ಸ್, ಬಿರ್ಲಾ ಹೋಮ್ಸ್ ರಿಯಲ್ ಎಸ್ಟೇಟ್ ಡೆವಲಪರ್ಸ್, ಬಿಲ್ಡರ್ ಗಳು ಹಾಗೂ ಭೂಮಿ ಸಂಗ್ರಾಹಕರೊಂದಿಗೆ ವಾಣಿಜ್ಯ ಸಹಭಾಗಿತ್ವ ಪಡೆಯಲಿದೆ. ಸಿಂಗ್ ಅವರ ಪ್ರಕಾರ, ಬಿರ್ಲಾ ಹೋಮ್ಸ್, ಯಶ್ ಬಿರ್ಲಾ ಗ್ರೂಪಿನ ಭಾಗವಾಗಿದೆ ಹಾಗೂ ಕಂಪನಿಯು ಅವರಿಗೆ ಸ್ಥಾಪಿತ ಬ್ರಾಂಡ್ ಹೆಸರಾದ 'ಬಿರ್ಲಾ' ಅನ್ನು ಒದಗಿಸಲಿದೆ.

ಗ್ರೂಪ್ ಭಾರತದಾದ್ಯಂತ ಬಹು ಪ್ರಸಿದ್ಧ ಬ್ರಾಂಡ್ ಆಗಿದೆ ಮತ್ತು ನಮ್ಮ ಬ್ರಾಂಡ್ ನಮ್ಮ ಗುರಿ ಹಾಗೂ ನಮ್ಮ ಉದ್ಯಮ ಸಹವರ್ತಿಗಳಿಗೆ ಹೆಚ್ಚುವರಿ ಮೈಲೇಜ್ ನೀಡಬಲ್ಲುದು ಹಾಗೂ ಅಗತ್ಯ ಬೆಂಬಲ ಒದಗಿಸಬಲ್ಲುದು ಎಂಬ ವಿಶ್ವಾಸವಿದೆ.
ಬಿರ್ಲಾ ಹೋಮ್ಸ್ ಮೊದಲ ಬ್ರಾಂಡ್ ಸಹಯೋಗವನ್ನು ಬೆಂಗಳೂರು ಮೂಲದ ಡೆವಲಪರ್ ಆದ ಆಪಲ್ ಸ್ಪೈಲ್ ಪ್ರೈ.ಲಿ.ನ ಜೊತೆಗೆ ಘೋಷಿಸಿದೆ, ಕಂಪನಿಯು ಮೊದಲ ವಸತಿ ಯೋಜನೆಯಾದ ಬಿರ್ಲಾ ಆಪಲ್ ಸ್ಪೈಲ್ ಗೆ ಬೆಂಗಳೂರಿನಲ್ಲಿ ಚಾಲನೆ ನೀಡಿದೆ.

ವಸತಿ ಯೋಜನೆ - ಬಿರ್ಲಾ ಆಪಲ್ ಸ್ಪೈರ್ : ಬಿರ್ಲಾ ಆಪಲ್ ಸ್ಪೈರ್ ಒಂದು ಲಕ್ಷುರಿ ವಸತಿ ಪ್ರಾಜೆಕ್ಟ್ ಆಗಿದ್ದು, ಇದು 250
ಪ್ರೀಮಿಯರ್ ಎರಡು ಬೆಡ್ ರೂಮ್ ಗಳು ಹಾಗೂ ಮೂರು ಬೆಡ್ ರೂಮ್ ಗಳ ಅಪಾರ್ಟ್ ಮೆಂಟ್ ಅನ್ನು ಮೈಸೂರು ರಸ್ತೆಯ ನಾಯಂಡಹಳ್ಳಿಯಲ್ಲಿ ನೀಡುತ್ತಿದೆ. "ಬಿರ್ಲಾ ಆಪಲ್ ಸ್ಪೈರ್, ನಾಯಂಡಹಳ್ಳಿ ಮೆಟ್ರೋ ಸ್ಟೇಶನ್ ನಿಂದ ಕೂಗಳತೆ ದೂರದಲ್ಲಿದ್ದು, ಹೆಲಿಪ್ಯಾಡ್ ನಂತಹ ಸೌಲಭ್ಯದೊಂದಿಗೆ ನಿರ್ಮಾಣಗೊಳ್ಳುತ್ತಿದೆ.
ನಮ್ಮ ಅಪಾರ್ಟ್ ಮೆಂಟ್ ನ ಇನ್ನೊಂದು ವಿಶೇಷತೆ ಎಂದರೆ, ಪ್ರತಿ ಅಪಾರ್ಟ್‍ಮೆಂಟ್ ಗೆ ಜೋಡಿಕೊಂಡು ಕೆಲಸದಾಳುವಿನ ರೂಮ್ ಇರಲಿದೆ'' ಎಂದರು. ಎಲ್ಲಾ ಅಪಾರ್ಟ್‍ಮೆಂಟ್ ಗಳಿಗೂ ಸಾಕಷ್ಟು ಗಾಳಿ, ಬೆಳಕು ಇದ್ದು, ಲಿವಿಂಗ್ ರೂಮ್, ಕಾಮನ್ ರೂಮ್ ಹಾಗೂ ಬೆಡ್ ರೂಮ್ ಹಾಗೂ ಪ್ರತಿಯೊಂದಕ್ಕೂ ಬಾಲ್ಕನಿ ಹೊಂದಿಕೊಂಡಿರುತ್ತದೆ.(ಒನ್ ಇಂಡಿಯಾ ಸುದ್ದಿ)
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications