ಜಿಯೋಗೆ ಪೈಪೋಟಿ : ಏರ್ ಟೆಲ್ 149ರು ರೀಚಾರ್ಚ್ ಗೆ ಇನ್ನಷ್ಟು ಬಲ

ರಿಲಯನ್ಸ್ ಜಿಯೋ ಈಗ ಅತಿ ಕಡಿಮೆ ಬೆಲೆಯ ಪ್ರೀಪೇಯ್ಡ್ ರೀಚಾರ್ಜ್ ಮೇಲೆ ಕಣ್ಣಿಟ್ಟಿದೆ. ದೇಶದ ಅಗ್ರಗಣ್ಯ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಮತ್ತೊಮ್ಮೆ ಭರ್ಜರಿ ಆಫರ್ ನೀಡುತ್ತಿದೆ. ಹಾಲಿ ಇರುವ ಜನಪ್ರಿಯ ಯೋಜನೆಗಳ ಡೇಟಾ ಪ್ಲ್ಯಾನ್ ಬದಲಾಯಿಸಿದ್ದು ಪ್ರತಿದಿನ ಹೆಚ್ಚು ಡೇಟಾ ಸಿಗುವಂತೆ ಆಫರ್ ಬದಲಾಯಿಸಲಾಗಿದೆ.

ರಿಲಯನ್ಸ್ ಜಿಯೋ ವಿರುದ್ಧ ಪೈಪೋಟಿಗೆ ಬಿದ್ದಿರುವ ಟೆಲಿಕಾಂ ಸಂಸ್ಥೆಗಳು, ಪ್ರತಿ ತಿಂಗಳು ಹೊಸ ಹೊಸ ಆಫರ್ ಗಳನ್ನು ನೀಡುತ್ತಿದೆ. ಏರ್ಟೆಲ್ ನ 199 ರು, 349, 448, 549, 799 ರೂಪಾಯಿ ಯೋಜನೆಗಳು ಜನಪ್ರಿಯಗೊಳ್ಳುತ್ತಿವೆ. ಏರ್ ಟೆಲ್ ಈಗ ತನ್ನ 349 ಹಾಗೂ 549 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ತಂದಿದೆ.

ಏರ್ಟೆಲ್ ತನ್ನ 149 ರೂಪಾಯಿ ಯೋಜನೆಯನ್ನು ನವೀಕರಿಸಿದೆ. ಕೆಲ ಪ್ರಾಂತ್ಯದ ಪ್ರೀಪೇಡ್ ಗ್ರಾಹಕರು ಮಾತ್ರ ಇದ್ರ ಲಾಭ ಪಡೆಯಲಿದ್ದಾರೆ. ಸದ್ಯಕ್ಕೆ ಈ ಯೋಜನೆ ಆಂಧ್ರಪ್ರದೇಶ ಹಾಗೂ ತೆಲಂಗಾಣ, ಕರ್ನಾಟಕದ ಗಡಿಭಾಗದ ಜಿಲ್ಲೆಗಳಿಗೆ ಲಭ್ಯವಿದೆ. ಕಡಿಮೆ ಅವಧಿಯ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಗಳ ವಿವರ ಮುಂದೆ ಓದಿ..

149 ರೂಪಾಯಿ ಯೋಜನೆಯನ್ನು ನವೀಕರಿಸಿದೆ

149 ರೂಪಾಯಿ ಯೋಜನೆಯನ್ನು ನವೀಕರಿಸಿದೆ

ಏರ್ಟೆಲ್ ತನ್ನ 149 ರೂಪಾಯಿ ಯೋಜನೆಯನ್ನು ನವೀಕರಿಸಿದೆ. 149 ರೂಪಾಯಿ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಸ್ಥಳೀಯ ಹಾಗೂ ಎಸ್ ಟಿ ಡಿ ಕರೆ ಸಿಗಲಿದೆ. ಇದು ಏರ್ ಟೆಲ್ ನಿಂದ ಏರ್ಟೆಲ್ ಗೆ ಅಲ್ಲದೆ ಎಲ್ಲಾ ನೆಟ್ವರ್ಕ್ ಕರೆಗೂ ಅನ್ವಯವಾಗಲಿದೆ. ಪ್ರತಿದಿನ ನೂರು ಎಸ್ ಎಂ ಎಸ್ ಉಚಿತವಾಗಿ ಸಿಗಲಿದೆ. ಈ ಪ್ಲಾನ್ ಮಾನ್ಯತೆ 28 ದಿನಗಳಿರಲಿದ್ದು, 1 ಜಿಬಿ ಡೇಟಾ ಮಾತ್ರ ಸಿಗಲಿದೆ.

146 ರು ಗಳ ಪ್ರೀಪೇಯ್ಡ್ ಡೇಟಾ

146 ರು ಗಳ ಪ್ರೀಪೇಯ್ಡ್ ಡೇಟಾ

146 ರು ಗಳ ಪ್ರೀಪೇಯ್ಡ್ ಡೇಟಾ ಯೋಜನೆಯಲ್ಲಿ 1 ಜಿ.ಬಿ. 4 ಜಿ ಡೇಟಾ, ಉಚಿತ ಕರೆ ಸೌಲಭ್ಯವನ್ನು 7 ದಿನಗಳ ಅವಧಿಗೆ ನೀಡಲಾಗುವುದು. ಮೈ ಏರ್ ಟೆಲ್ ಆಪ್ ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

98 ಹಾಗೂ 99 ರು ಯೋಜನೆ

98 ಹಾಗೂ 99 ರು ಯೋಜನೆ

98 ರೂ. ಯೋಜನೆಯಡಿ 2 ಜಿ.ಬಿ. ಡೇಟಾವನ್ನು 5 ದಿನಗಳವರೆಗೆ ನೀಡಲಿದೆ.ಇದರಲ್ಲಿ 2ಜಿ/3ಜಿ/4ಜಿ ಡೇಟಾವನ್ನು ಪಡೆಯಬಹುದಾಗಿದೆ. ಭಾರತದೆಲ್ಲೆಡೆ ಈ ಸೌಲಭ್ಯ ಲಭ್ಯವಿದೆ. ಈ ಯೋಜನೆಯ ವ್ಯಾಲಿಡಿಟಿ 28 ದಿನಗಳವರೆಗೆ ಇದೆ. * 99 ರು ಗಳ ಯೋಜನೆಯ ವ್ಯಾಲಿಡಿಟಿ 5 ದಿನಗಳವರೆಗೆ ಮಾತ್ರ ಇದೆ.

29 ರು ಗಳ ಡೇಟಾ ಬೂಸ್ಟ್ ಪ್ಯಾಕ್

29 ರು ಗಳ ಡೇಟಾ ಬೂಸ್ಟ್ ಪ್ಯಾಕ್

ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಏರ್ ಟೆಲ್ ಹೊಸ ಪ್ರೀಪೇಯ್ಡ್ ಯೋಜನೆಯನ್ನು ಪರಿಚಯಿಸಿದ್ದು, 29 ರು ಗಳ ಡೇಟಾ ಬೂಸ್ಟ್ ಪ್ಯಾಕ್ ನಲ್ಲಿ 150 ಎಂಬಿ 2ಜಿ/3ಜಿ/4ಜಿ ಡೇಟಾವನ್ನು ಪಡೆಯಬಹುದಾಗಿದೆ. ಈ ಯೋಜನೆಯ ವ್ಯಾಲಿಡಿಟಿ 28 ದಿನಗಳ ಅವಧಿಯಾಗಿದೆ.

49 ರೂ.ಗೆ ಪ್ರೀಪೇಯ್ಡ್ ಪ್ಲಾನ್: 49 ರೂ.ಗೆ 1 ಜಿ.ಬಿ. ಡೇಟಾ ಪ್ಲಾನ್ ಒಂದು ದಿನದ ಯೋಜನೆಯಾಗಿದೆ. ಇದರಲ್ಲಿ 2ಜಿ/3ಜಿ/4ಜಿ ಡೇಟಾವನ್ನು ಪಡೆಯಬಹುದಾಗಿದೆ. ಭಾರತದೆಲ್ಲೆಡೆ ಈ ಸೌಲಭ್ಯ ಲಭ್ಯವಿದೆ. ಏರ್ ಟೆಲ್ ನ ಮೈಏರ್ಟೆಲ್ ಅಪ್ಲಿಕೇಷನ್ ನಲ್ಲಿ ವಿವರಗಳು ಲಭ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+