Q2: ಭಾರ್ತಿ ಏರ್ ಟೆಲ್ ನಿವ್ವಳ ಲಾಭ ಶೇ 10ರಷ್ಟು ಏರಿಕೆ
ಬೆಂಗಳೂರು, ಅ.27: ಟೆಲಿಕಾಂ ಕ್ಷೇತ್ರದ ಅಗ್ರಗಣ್ಯ ಸಂಸ್ಥೆ ಭಾರ್ತಿ ಏರ್ ಟೆಲ್ ತನ್ನ ಎರಡನೇ ತ್ರೈಮಾಸಿಕ ವರದಿಯಲ್ಲಿ ಶೇ 10 ರಂತೆ 1,523 ಕೋಟಿ ರು ಗಳಷ್ಟು ನಿವ್ವಳ ಲಾಭ ಪಡೆದುಕೊಂಡಿದೆ.
ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿ ಶೇ 10.1ರಂತೆ 1,383 ಕೋಟಿ ರು ಗಳಿಸಿತ್ತು. ಸೆಪ್ಟೆಂಬರ್ 30, 2015ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಒಟ್ಟಾರೆ ಶೇ 4.3ರಷ್ಟು ಆದಾಯ ಏರಿಕೆಯಾಗಿ 23,852ರು ಗಳಿಕೆಯಾಗಿದೆ. [ಪ್ರೀ ಪೇಯ್ಡ್ ಇಂಟರ್ನೆಟ್ ಪ್ಯಾಕ್ ಬೆಲೆ ಏರಿಕೆ]

ಏರ್ ಟೆಲ್ ನ ಬ್ರಾಡ್ ಬ್ಯಾಂಡ್, ಡಿಟಿಎಚ್ ಅಲ್ಲದೆ ಮೊಬೈಲ್ ಡಾಟಾ ಆದಾಯ ಗಳಿಕೆ ಶೇ 60ರಷ್ಟು ಏರಿಕೆ ಕಂಡಿದೆ ಎಂದು ಭಾರತ ಹಾಗೂ ದಕ್ಷಿಣ ಏಷ್ಯಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಗೋಪಾಲ್ ವಿಠಲ್ ಅವರು ಹೇಳಿದ್ದಾರೆ. [ಪ್ರೀಪೇಯ್ಡ್ ಗ್ರಾಹಕರಿಗೆ ಶುಭ ಸಂದೇಶ]
ಮೊಬೈಲ್ ಡಾಟಾ ಆದಾಯ 2,893 ಕೋಟಿ ರು ಗಳಿಕೆಯಾಗಿದೆ. ಗ್ರಾಹಕರ ಸಂಖ್ಯೆ ಶೇ 27ರಷ್ಟು ಹಾಗೂ ಟ್ರಾಫಿಕ್ ಶೇ 69.9ರಷ್ಟು ಏರಿಕೆ ಕಂಡಿದೆ. 4ಜಿ ಸರ್ವೀಸ್ 334 ನಗರಗಳಿಗೆ ವಿಸ್ತರಿಸಲಾಗುವುದು. ಸುಮಾರು 200 ರಿಂದ 400 ಮಿಲಿಯನ್ ಡಾಲರ್ ಹೂಡಿಕೆ ಮಾಡಲಾಗುತ್ತಿದೆ ಎಂದು ವಿಠಲ್ ಹೇಳಿದ್ದಾರೆ.
ಭಾರ್ತಿ ಏರ್ ಟೆಲ್ ಷೇರುಗಳು ಮಂಗಳವಾರ ಬಿಎಸ್ ಇನಲ್ಲಿ 353 ರು ನಂತೆ ಶೇ 0.31ರಷ್ಟು ಏರಿಕೆ ಕಂಡಿದೆ. ಇದೇ ಸಮಯಕ್ಕೆ ಎನ್ ಎಸ್ ಇನಲ್ಲಿ 352.70 ರುನಂತೆ ಶೇ 0.14ರಷ್ಟು ಏರಿತ್ತು. (ಒನ್ ಇಂಡಿಯಾ ಸುದ್ದಿ)












Click it and Unblock the Notifications