Get Updates
Get notified of breaking news, exclusive insights, and must-see stories!

ಎನ್‌ಆರ್‌ಐಗಳು ಹೂಡಿಕೆ ಮಾಡಲು ಬಯಸುವ ಮೊದಲ ಆಯ್ಕೆ ಬೆಂಗಳೂರು

ಬೆಂಗಳೂರು, ನವೆಂಬರ್‌ 8: ಪ್ರಾಪರ್ಟಿ ಯುನಿಕಾರ್ನ್ ನೋಬ್ರೋಕರ್ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಭಾರತೀಯ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುವ ಅನಿವಾಸಿ ಭಾರತೀಯರ ನೆಚ್ಚಿನ ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಬೆಂಗಳೂರು ಎಂದು ಡಿಎಚ್‌ ವರದಿ ಮಾಡಿದೆ.

ಕಾಸ್ಮೋಪಾಲಿಟನ್ ಸಂಸ್ಕೃತಿ, ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಿಂದ ಬೆಂಗಳೂರು ನೆಚ್ಚಿನ ಆಯ್ಕೆಯಾಗಿದೆ. ಬೆಂಗಳೂರಿನಲ್ಲಿ ಬಾಡಿಗೆ ದರವೂ ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ ಇದು ಉತ್ತಮ ಹೂಡಿಕೆಯ ತಾಣವಾಗಿದೆ ಎಂದು ವರದಿ ತಿಳಿಸಿದೆ.

Bengaluru is the first choice for NRIs to invest in

"ಬೆಂಗಳೂರು ಎನ್‌ಆರ್‌ಐಗಳಿಗೆ ಉತ್ತಮ ಹೂಡಿಕೆಯ ಆಯ್ಕೆಯಾಗಿದೆ. ಕಾರಣ ಇದು ಸರಿಯಾದ ಬೆಲೆ ಮತ್ತು ಸರಿಯಾದ ವೇಗದಲ್ಲಿ ಬೆಳೆಯುತ್ತಿರುವ ಸ್ಥಿರ ಮಾರುಕಟ್ಟೆಯಾಗಿದೆ. ನಗರವು ವಿಸ್ತರಣೆಗೆ ಮತ್ತು ಹಲವಾರು ಉದಯೋನ್ಮುಖ ಉದ್ಯಮಿಗಳೊಂದಿಗೆ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ. ಮಾರುಕಟ್ಟೆಗಳು ಹೂಡಿಕೆಯ ಮೇಲಿನ ಲಾಭವೂ ಆಕರ್ಷಕವಾಗಿದೆ" ಎಂದು ಬಿಸಿಡಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಅಂಗದ್ ಬೇಡಿ ಹೇಳಿದರು.

ಬೆಂಗಳೂರು ಅನ್ನು ವಿಶಿಷ್ಟವಾಗಿ ಇರಿಸಿರುವುದು ಅದರ ಅತ್ಯಂತ ರೋಮಾಂಚಕ ಪರಿಸರ ವ್ಯವಸ್ಥೆಯಾಗಿದೆ. ಅದು ಪ್ರಪಂಚದಾದ್ಯಂತದ ಉದ್ಯಮಗಳು, ಹೂಡಿಕೆದಾರರು ಮತ್ತು ಪ್ರತಿಭೆಗಳನ್ನು ಆಕರ್ಷಿಸುತ್ತಿದೆ. ಈ ಅಂಶಗಳಿಂದಾಗಿ ಗುಣಮಟ್ಟದ ವಸತಿಗಾಗಿ ಬೇಡಿಕೆ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಸ್ಥಿರವಾದ ಬೆಲೆ ಏರಿಕೆ ಮತ್ತು ಬಾಡಿಗೆ ಹೆಚ್ಚಳವಾಗಿದೆ ಎಂದು ವೈಷ್ಣವಿ ಗ್ರೂಪ್ ನಿರ್ದೇಶಕ ದರ್ಶನ್ ಗೋವಿಂದರಾಜು ಹೇಳಿದರು.

ಬೆಂಗಳೂರಿನ ಬಳಿಕ ವಾಣಿಜ್ಯ ಮತ್ತು ಐಷಾರಾಮಿ ವಸತಿ ಆಸ್ತಿಗಳಗಳನ್ನು ಒಳಗೊಂಡಿರುವ ಡೈನಾಮಿಕ್ ರಿಯಲ್ ಎಸ್ಟೇಟ್ ಕೊಡುಗೆಯೊಂದಿಗೆ ಮುಂಬೈ ಎರಡನೇ ಸ್ಥಾನದಲ್ಲಿದೆ. ವಿದೇಶಿ ಹೂಡಿಕೆಗೆ ಅನುಕೂಲಕರವಾದ ಸರ್ಕಾರಿ ನೀತಿಗಳಿಂದ ಆಕರ್ಷಿತರಾದ ಅನಿವಾಸಿ ಭಾರತೀಯರು 2019-20ರಲ್ಲಿ ತಮ್ಮ ಒಟ್ಟು ಹೂಡಿಕೆಯಲ್ಲಿ ಸರಿಸುಮಾರು 10% ರಷ್ಟನ್ನು ಇಟ್ಟಿದ್ದಾರೆ, ಇದು 2025 ರ ವೇಳೆಗೆ ಗಣನೀಯ ಪ್ರಮಾಣ ಶೇಕಡ 17%ರಷ್ಟು ಏರಿಕೆಯಾಗಬಹುದು ಎಂದು ವರದಿಯು ತಿಳಿಸಿದೆ.

ಈ ಹಿಂದೆ ನಿರ್ದಿಷ್ಟ ಆಸ್ತಿ ವರ್ಗಕ್ಕೆ ಸೀಮಿತವಾಗಿದ್ದ ಎನ್‌ಆರ್‌ಐ ಹೂಡಿಕೆದಾರರ ಆಸಕ್ತಿಯು ವಸತಿ, ವಾಣಿಜ್ಯ ಮತ್ತು ಬೆಳವಣಿಗೆ ಕ್ಷೇತ್ರಗಳಾದ ಡೇಟಾ ಸೆಂಟರ್‌ಗಳು, ಫ್ಲೆಕ್ಸ್ ಆಫೀಸ್‌ಗಳು ಮತ್ತು ವೇರ್‌ಹೌಸಿಂಗ್‌ಗಳನ್ನು ಒಳಗೊಂಡಂತೆ ವಿವಿಧೆಡೆ ಕ್ರಮೇಣ ವಿಸ್ತರಿಸುತ್ತಿದೆ. ನೋ ಬ್ರೋಕರ್‌ ಸಮೀಕ್ಷೆ ನಡೆಸಿದ 57% ನಿರೀಕ್ಷಿತ ಎನ್‌ಆರ್‌ಐ ಆಸ್ತಿ ಖರೀದಿದಾರರು ಸ್ವಯಂ ಬಳಕೆಗಾಗಿ ಆಸ್ತಿಯನ್ನು ಖರೀದಿಸಲು ಬಯಸುತ್ತಿದ್ದಾರೆ ಎಂದು ಹೇಳಿದರೆ, ಉಳಿದ 43% ಭಾರತದಲ್ಲಿ ವಾಸಿಸುವ ತಮ್ಮ ಕುಟುಂಬಕ್ಕಾಗಿ ಖರೀದಿ ಮಾಡುವ ಉದ್ದೇಶವನ್ನು ಬಹಿರಂಗಪಡಿಸಿದ್ದಾರೆ.

ಸಮೀಕ್ಷೆಗೆ ಒಳಗಾದವರಲ್ಲಿ 46% ರಷ್ಟು ಜನರು ದೇಶದಲ್ಲಿ ಹೂಡಿಕೆಗಾಗಿ ಆಸ್ತಿ ಆಯ್ಕೆಗಳನ್ನು ಗಮನಿಸುವಾಗ ರಿಯಲ್ ಎಸ್ಟೇಟ್ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಿದ್ದಾರೆ. ಇತರ ಬೇಡಿಕೆಯ ಪ್ರವೃತ್ತಿಗಳು ಗೇಟೆಡ್ ಸೊಸೈಟಿಗಳಲ್ಲಿ 1 ಕೋಟಿ ರೂ ಮೌಲ್ಯದ 3 ಬಿಎಸ್‌ಕೆ ಗೇಡೆಟ್‌ ಸೊಸೈಟಿಗಳನ್ನು ನೋಡುತ್ತಿದ್ದಾರೆ.

ಭಾರತೀಯ ರಿಯಾಲ್ಟಿಗೆ ಎನ್‌ಆರ್‌ಐ ಕೊಡುಗೆಗಳಿಗಾಗಿ ಅಗ್ರ ಮೂರು ದೇಶಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್, ಯುಎಸ್ ಮತ್ತು ಸಿಂಗಾಪುರ ಸೇರಿವೆ. ಸುಮಾರು 82% ಎನ್‌ಆರ್‌ಐ ಖರೀದಿದಾರರು ಮಾಹಿತಿಯ ಕೊರತೆ ಮತ್ತು ಭಾರತೀಯ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ವ್ಯವಹರಿಸುವಾಗ ಪಾರದರ್ಶಕತೆ ಕೊರತೆ ಇರುವುದಾಗಿ ಉಲ್ಲೇಖಿಸಿದ್ದಾರೆ.

ಎನ್‌ಆರ್‌ಐ ಪರಿಗಣಿಸುವ 52% ಆಸ್ತಿ ಮಾಲೀಕರು ತಮ್ಮ ಸ್ವತ್ತುಗಳನ್ನು ಮೇಲ್ವಿಚಾರಣೆ ಮಾಡಲು ವೃತ್ತಿಪರ ಆಸ್ತಿ ನಿರ್ವಹಣೆ ಪರಿಹಾರಗಳ ಕಡೆಗೆ ಒಲವನ್ನು ತೋರಿಸಿದ್ದಾರೆ. ಇದರಲ್ಲಿ ಬಾಡಿಗೆದಾರರನ್ನು ಹುಡುಕುವುದು, ಆಸ್ತಿ ತಪಾಸಣೆ, ಬಾಡಿಗೆ ಸಂಗ್ರಹಣೆ ಮತ್ತು ಆಡಳಿತಾತ್ಮಕ ಕರ್ತವ್ಯಗಳು ಸೇರಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+