ಈಗಲೇ ಖರೀದಿಸಿ! 1ಕೆಜಿ ಈರುಳ್ಳಿಗೆ ಕೇವಲ 1ರೂ ಮಾತ್ರ

ಬೆಂಗಳೂರು, ಸೆ. 04: ದೇಶದೆಲ್ಲೆಡೆ ಈರುಳ್ಳಿ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡು ಜನರು ಕಂಗಾಲಾಗಿದ್ದರೆ ನಿಂಜಾಕಾರ್ಟ್ ಹೈಪರ್ ಲೋಕಲ್ ಗ್ರೋಸರಿ ಡೆಲಿವರಿ ಮೊಬೈಲ್ ಅಪ್ಲಿಕೇಷನ್ ಸಂಸ್ಥೆಯು ಗ್ರಾಹಕರಿಗೆ ಸಿಹಿ ಸುದ್ದಿ ನೀಡುತ್ತಿದೆ.

ಒಂದು ಕೆಜಿ ಈರುಳ್ಳಿಯನ್ನು ಕೇವಲ 1 ರೂಪಾಯಿಗೆ ಒದಗಿಸುತ್ತದೆ. ಸೆಪ್ಟೆಂಬರ್ 4 ರಿಂದ 6ರ ವರೆಗೆ ನಿಂಜಾಕಾರ್ಟ್ ಮೊಬೈಲ್ ಅಪ್ಲಿಕೇಷನ್ ಮೂಲಕ ರಿಯಾಯಿತಿ ದರದಲ್ಲಿ ಈರುಳ್ಳಿ ಲಭ್ಯವಾಗಲಿದೆ.ಅದರೆ, 200ರು ಗಿಂತ ಕಡಿಮೆ ಮೊತ್ತದ ಆರ್ಡರ್ ಗಳಿಗೆ 50 ರು ಡೆಲಿವರಿ ಚಾರ್ಜ್ ಪ್ರತ್ಯೇಕವಾಗಿ ನೀಡಬೇಕಾಗುತ್ತದೆ.

ಗ್ರಾಹಕರಿಗೆ ಈ ಸೌಲಭ್ಯ ಒದಗಿಸಲು ಪುಣೆಯಲ್ಲಿನ ಬೃಹತ್ ಪ್ರಮಾಣದ ಈರುಳ್ಳಿ ವಿತರಕರನ್ನು ಸಂಪರ್ಕಿಸಿದ್ದು, ಅತ್ಯುತ್ತಮ ಗುಣಮಟ್ಟದ ಈರುಳ್ಳಿ ಲಭಿಸಲಿದೆ. ಈ ಮೂಲಕ ಸಂಸ್ಥೆಯು ಗ್ರಾಹಕರ ಅವಶ್ಯಕತೆಯನ್ನು ಪೂರೈಸುವ ಸಂಸ್ಥೆಯಾಗಿ ಬೆಳೆದಿದೆ.

ತಿರುಕುಮಾರನ್ ನಾಗರಾಜನ್, ನಿಂಜಾಕಾರ್ಟ್ ಸಂಸ್ಥಾಪಕ ಮಾತನಾಡಿ, ಪ್ರಸ್ತುತ ಈರುಳ್ಳಿ ದರ ಅತ್ಯಂತ ಹೆಚ್ಚಾಗಿ ಏರಿಕೆ ಕಂಡಿದ್ದು, ಪ್ರತಿಯೊಬ್ಬ ಗ್ರಾಹಕನು ಸಂಕಟ ಪಡುವಂತಾಗಿದೆ. ಪ್ರಥಮವಾಗಿ ಒಬ್ಬ ಗ್ರಾಹಕನಾಗಿ ಕಂಪನಿಯಿಂದ ಉತ್ತಮ ಸೇವೆಯೊಂದೇ ಗ್ರಾಹಕರಿಗೆ ನೀಡಬಹುದಾದ ಅತ್ಯಂತ ದೊಡ್ಡದಾದ ಖುಷಿ.

1 ರೂಪಾಯಿನಲ್ಲಿ ಈರುಳ್ಳಿ ನೀಡುವ ಆಂದೋಲನ

1 ರೂಪಾಯಿನಲ್ಲಿ ಈರುಳ್ಳಿ ನೀಡುವ ಆಂದೋಲನ

ಗ್ರಾಹಕರಿಗೆ 1 ರೂಪಾಯಿನಲ್ಲಿ ಈರುಳ್ಳಿ ನೀಡುವ ಆಂದೋಲನವನ್ನು ಪ್ರಾರಂಭಿಸಲಾಗಿದೆ. ಈ ಕೊಡುಗೆಯಿಂದ ಅನಿರೀಕ್ಷಿತವಾಗಿ ಆದ ಈರುಳ್ಳಿ ಬೆಲೆ ಏರಿಕೆಯಿಂದಾದ ಗ್ರಾಹಕರ ಅನನುಕೂಲತೆಯನ್ನು ಸರಿದೂಗಿಸಲು ಸಹಾಯವಾಗುತ್ತದೆ. ಸೆ.4 ಸಂಜೆ 5ರಿಂದ ಕೊಡುಗೆ ಲಭ್ಯವಿರುತ್ತದೆ ಎಂದು ತಿರುಕುಮಾರನ್ ನಾಗರಾಜನ್, ನಿಂಜಾಕಾರ್ಟ್ ಸಂಸ್ಥಾಪಕ

ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿ

ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿ

ಹೊಸ ರೀತಿಯ ಹೈಪರ್ ಲೋಕಲ್ ಗ್ರೋಸರಿ ಡೆಲಿವರಿ ಮಾಡೆಲ್ ಗಳನ್ನು ಅಳವಡಿಸಿಕೊಂಡಿರುವ ನಿಂಜಾ ಕಾರ್ಟ್ ಮೊಬೈಲ್ ಅಪ್ಲಿಕೇಷನ್ ಪ್ರಸ್ತುತ ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತಿದ್ದು, ಹಲವು ಸ್ಟೋರ್ ಗಳ ಮೂಲಕ ಗ್ರಾಹಕರನ್ನು ಸಂಪರ್ಕಿಸಲು ಹಾಗೂ ವೇಗ ಗುಣಮಟ್ಟದ ಸೇವೆ ನೀಡಲು ಮುಂದಾಗಿದೆ.

ಗ್ರೋಸರಿ ಶಾಪಿಂಗ್ ನಿಂಜಾಕಾರ್ಟ್ ಬಗ್ಗೆ

ಗ್ರೋಸರಿ ಶಾಪಿಂಗ್ ನಿಂಜಾಕಾರ್ಟ್ ಬಗ್ಗೆ

ಗ್ರೋಸರಿ ಶಾಪಿಂಗ್ ಮಾಡುವಾಗ ಉಂಟಾಗುವ ಗೊಂದಲಕ್ಕೆ ಪರಿಹಾರವಾಗಿ ಸ್ಥಳೀಯವಾಗಿರುವ ಕಿರಾಣಿ ಅಂಗಡಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. 2015ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಗೊಂಡ ಹೈಪರ್ ಲೋಕಲ್ ಗ್ರೋಸರಿ ಡೆಲಿವರಿ ಮೊಬೈಲ್ ಅಪ್ಲಿಕೇಷನ್ ಆಗಿದೆ. ಕಿರಾಣಿ ಸ್ಟೋರ್ ಗಳೊಂದಿಗಿನ ಸಹಯೋಗದೊಂದಿಗೆ ಅವರನ್ನು ಆಫ್ ಲೈನ್ ನಿಂದ ಆನ್ ಲೈನ್ ಗೆ ತರಲಾಗಿದೆ.

ನಿಂಜಾಕಾರ್ಟ್ ಅಪ್ಲಿಕೇಷನ್ ಡೌನ್ ಲೋಡ್

ನಿಂಜಾಕಾರ್ಟ್ ಅಪ್ಲಿಕೇಷನ್ ಡೌನ್ ಲೋಡ್

ಈ ಹಿಂದೆ ಟ್ಯಾಕ್ಸಿಫಾರ್ ಶೂರ್, ಕಾಮನ್ ಫ್ಲೋರ್, ಓಲಾ ಹಾಗೂ ವರ್ಷನ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವಿಗಳಾದ 6 ಮಂದಿ ತಂಡ ಈ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಮೇರಾಗ್ರೋಸರ್, ಫ್ರೆಸ್ ಫಾಲ್ಸಾಬ್ಜಿ, ಗ್ರೋಸರ್ ಮ್ಯಾಕ್ಸ್ ಸಂಸ್ಥೆ, ಲೋಕಲ್ ಬನ್ಯಾ ಕೂಡಾ ಇದೇ ರೀತಿ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಮುಂದಾಗಿವೆ. ನಿಂಜಾಕಾರ್ಟ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+