Gold Rate: ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ- ಭಾರತದಾದ್ಯಂತ ಇಂದಿನ ದರ ಎಷ್ಟಿದೆ?
ಭಾರತದಲ್ಲಿ ಚಿನ್ನದ ದರ ಇಂದು (ನವೆಂಬರ್ 16) ಕೊಂಚ ಇಳಿಕೆಯಾಗಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ ಇಂದು ಚಿನ್ನದ ಬೆಲೆ 100 ರೂಪಾಯಿಯಷ್ಟು ಇಂದು ಅಗ್ಗವಾಗಿದೆ. ಬೆಳ್ಳಿ ಬೆಲೆಯಲ್ಲಿ ಒಂದು ಸಾವಿರ ರೂಪಾಯಿ ಇಳಿಕೆ ದಾಖಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ದುಬಾರಿಯಾಗಬಹುದು ಎನ್ನುತ್ತಾರೆ ತಜ್ಞರು. ಆದರೆ ಕಳೆದ ವಾರದಿಂದಲೂ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಂಡುಬಂದಿದೆ.
ದೇಶದ ಬಹುತೇಕ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 75,000 ರೂಪಾಯಿ ಇದ್ದರೆ ಆಭರಣ ಖರೀದಿದಾರರಿಗೆ 22 ಕ್ಯಾರೆಟ್ ಚಿನ್ನದ ಬೆಲೆ 69,000 ರೂಪಾಯಿ ಇದೆ. ಇನ್ನೂ ಬೆಳ್ಳಿ ಬೆಲೆಯಲ್ಲಿ 1000 ರೂಪಾಯಿ ಇಳಿಕೆಯಾಗಿದೆ. ಇಂದು (ನವೆಂಬರ್ 16) ಬೆಳ್ಳಿ ಕೆಜಿಗೆ 89,400 ರೂಪಾಯಿಯಂತೆ ಮಾರಾಟಕ್ಕಿದೆ.

ಬೆಂಗಳೂರಿನಲ್ಲಿಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 69,350 ರೂಪಾಯಿ ಇದ್ದರೆ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 75,650 ರೂಪಾಯಿ ಇದೆ. ಅಂತೆಯೇ ಕಳೆದ ದಿನಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 100ರೂಪಾಯಷ್ಟು ಕುಸಿದಿತದ ನಂತರ 69,350 ರೂಪಾಯಿ ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 110 ರೂಪಾಯಿರಷ್ಟು ಕುಸಿದು 75,650ಕ್ಕೆ ಸ್ಥಿರವಾಯಿತು. ಇನ್ನೂ 18ಕ್ಯಾರೆಟ್ ಚಿನ್ನದ ದರ 80ರೂಪಾಯಿಯಷ್ಟು ಕಡಿಮೆಯಾಗಿ 56,770 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ ಪ್ರಸ್ತುತ 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 1,100 ರೂಪಾಯಿ ಕಡಿಮೆಯಾಗಿ 7,56,500 ರೂಪಾಯಿ ಆಗಿದ್ದು 100 ಗ್ರಾಂ 22-ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 1,000 ರೂಪಾಯಿ ಕಡಿಮೆಯಾಗಿ 6,93,500 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಗಳು:
ಬೆಂಗಳೂರಿನಲ್ಲಿ 1 ಕಿಲೋಗ್ರಾಂ ಬೆಳ್ಳಿ ಬೆಲೆಯಲ್ಲಿ ಹೆಚ್ಚೇನು ವ್ಯತ್ಯಾಸ ಗಮನಿಸಿಲ್ಲ. ಪ್ರಸ್ತುತ ಒಂದು ಕಿಲೋಗ್ರಾಂ ಬೆಳ್ಳಿ ಬೆಲೆ 89,500 ರೂಪಾಯಿಯಷ್ಟಿದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 8,950 ರೂಪಾಯಿ ಇದೆ. ಈ ವಾರದ ಆರಂಭದಲ್ಲಿ ಸತತ ಕುಸಿತ ಕಂಡ ಬೆಳ್ಳಿ ಬೆಲೆಯಲ್ಲಿ ಕಳೆದ ಎರಡು ದಿನಗಳಿಂದ ಸ್ಥಿರತೆ ಕಂಡುಬಂದಿದೆ. ದೇಶದ ದೊಡ್ಡ ನಗರಗಳಲ್ಲಿ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ದರ ಎಷ್ಟು ಎಂದು ತಿಳಿಯೋಣ.
ಇಂದು ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
*ದೆಹಲಿ ಚಿನ್ನದ ದರ: ಇಂದು ದೆಹಲಿಯಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 75,920 ರೂಪಾಯಿ ಇದ್ದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಅಂದಾಜು 69,610 ರೂಪಾಯಿ ಇದೆ.
*ಮುಂಬೈ ಚಿನ್ನದ ದರ: ಮುಂಬೈನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 75,770 ರೂಪಾಯಿ ಇದ್ದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 69,460 ರೂ.
*ಕೋಲ್ಕತ್ತಾದಲ್ಲಿ ಚಿನ್ನದ ದರ: ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 69,460 ರೂಪಾಯಿ ಇದ್ದು, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 75,770 ರೂ.
*ಚೆನ್ನೈ: ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 69,460 ರೂ. ಇದ್ದು, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 75,770 ರೂ.
*ಅಹಮದಾಬಾದ್ ಚಿನ್ನದ ದರ: ಅಹಮದಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 69,510 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 75,820 ರೂ.
*ಲಕ್ನೋ ಚಿನ್ನದ ದರ: ಲಕ್ನೋದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 69,610 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 75,920 ರೂ.
*ಜೈಪುರ: ಜೈಪುರದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 69,610 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 75,920 ರೂ.
*ಪಾಟ್ನಾ ಚಿನ್ನದ ದರ: ಪಾಟ್ನಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 69,510 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 75,820 ರೂ.
*ಹೈದರಾಬಾದ್: ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 69,460 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 75,820 ರೂ.
*ಗುರುಗ್ರಾಮ್ ಚಿನ್ನದ ದರ: ಗುರುಗ್ರಾಮ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 69,610 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 75,920 ರೂ.
*ಬೆಂಗಳೂರು: ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 69,350 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 75,650 ರೂ.
*ನೋಯ್ಡಾ: ನೋಯ್ಡಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 69,610 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 75,920 ರೂಪಾಯಿ ಇದೆ.












Click it and Unblock the Notifications