ಮಾರ್ಚ್ 01ರಿಂದ ಬ್ಯಾಂಕಿಂಗ್ ವಹಿವಾಟಿನಲ್ಲಿ ಏನೇನು ಬದಲಾವಣೆ?

ಬೆಂಗಳೂರು, ಫೆಬ್ರವರಿ 28: ಮಾರ್ಚ್ ತಿಂಗಳಲ್ಲಿ ಬ್ಯಾಂಕಿಂಗ್ ವಹಿವಾಟಿನಲ್ಲಿ ಒಂದಷ್ಟು ವ್ಯವಹಾರಗಳು ಬದಲಾವಣೆಗೊಳಪಡಲಿವೆ. ಗ್ರಾಹಕರಿಗೆ ಇದರಿಂದ ಸ್ವಲ್ಪ ಗೊಂದಲ ಮೂಡಿಸಬಹುದು. ಒಟ್ಟಾರೆ, ಮಾರ್ಚ್ ತಿಂಗಳಿನಲ್ಲಿ ಐದು ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಬಹುದು.

ಮಾರ್ಚ್ ತಿಂಗಳಿನಲ್ಲಿ ಸಾಲು ಸಾಲು ರಜೆ ಕೂಡಾ ಇದ್ದು, ಬ್ಯಾಂಕಿಂಗ್ ವ್ಯವಹಾರದಲ್ಲಿ ವ್ಯತ್ಯಯ ಕಂಡು ಬರಲಿದೆ.

ಮಾರ್ಚ್ 8 ರಂದು ಭಾನುವಾರ ರಜೆ ಇದೆ. ಮಾರ್ಚ್ 10 ರಂದು ಹೋಳಿಹುಣ್ಣಿಮೆ ಪ್ರಯುಕ್ತ ರಜೆ ಇರುತ್ತದೆ. ಮಾರ್ಚ್ 11 ರಿಂದ 13 ರವರೆಗೆ 3 ದಿನಗಳ ಮುಷ್ಕರ ನಡೆದರೆ, ಮಾರ್ಚ್ 14ರಂದು ಎರಡನೇ ಶನಿವಾರ, ಮಾರ್ಚ್ 15 ಭಾನುವಾರ ರಜೆ ಸಿಗಲಿದೆ. ಸರಣಿಯಾಗಿ 6 ದಿನಗಳ ಕಾಲ ಬ್ಯಾಂಕ್ ಗಳ ಬಾಗಿಲು ಬಂದ್ ಮಾಡಿದರೆ, ಗ್ರಾಹಕರಿಗೆ ಸಮಸ್ಯೆ ಎದುರಾಗಲಿದೆ. ಹೀಗಾಗಿ, ಬಹುತೇಕ ಮಾರ್ಚ್ 2ನೇ ವಾರ ಬ್ಯಾಂಕುಗಳು ಕಾರ್ಯನಿರ್ವಹಿಸುವ ಸಾಧ್ಯತೆ ಕಡಿಮೆ.

ಎಸ್ಬಿಐ ಲಾಕರ್ ಡೆಪಾಸಿಟ್ ದರ ಕೂಡಾ ಮಾರ್ಚ್ ತಿಂಗಳಿನಲ್ಲಿ ಏರಿಕೆ ಕಾಣಲಿದೆ. ಮಾರ್ಚ್ 31ರಿಂದ ಎಸ್ಬಿಐ ಲಾಕರ್ ಶುಲ್ಕ ಹೆಚ್ಚಳ ಕಾಣಲಿದೆ. 2000 ರು ಅತಿ ಕಡಿಮೆ ದರವಾಗಿದ್ದರೆ, 12,00 ಅತಿ ಹೆಚ್ಚಿನ ದರವಾಗಿದೆ. ಒಟ್ಟಾರೆ, 500 ರು ನಿಂದ 2000 ರು ತನಕ ದರ ಹೆಚ್ಚಳ ಪ್ರಕಟಿಸಲಾಗಿದೆ.

ಮಾರ್ಚ್ 01ರಿಂದ SBI ಗ್ರಾಹಕರಿಗೆ ಕೆವೈಸಿ ಕಡ್ಡಾಯ

ಮಾರ್ಚ್ 01ರಿಂದ SBI ಗ್ರಾಹಕರಿಗೆ ಕೆವೈಸಿ ಕಡ್ಡಾಯ

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ಮಾರ್ಚ್ 01ರಿಂದ ತನ್ನ ಗ್ರಾಹಕರಿಗೆ ಕೆವೈಸಿ ಕಡ್ಡಾಯಗೊಳಿಸಿದೆ. ಈ ಬಗ್ಗೆ ಈಗಾಗಲೇ ಗ್ರಾಹಕರಿಗೆ ಇಮೇಲ್, ಎಸ್ಎಂಎಸ್ ಮೂಲಕ ಸೂಚನೆ ನೀಡಲಾಗಿದೆ. ಗ್ರಾಹಕರು ಕೆವೈಸಿ ಸಲ್ಲಿಸಲು ಫೆಬ್ರವರಿ 28 ಕೊನೆ ದಿನವಾಗಿದೆ. ಕೆವೈಸಿ ಸಲ್ಲಿಸದ ಬ್ಯಾಂಕ್ ಖಾತೆಗಳು ಮಾರ್ಚ್ 1ರಿಂದ ಸ್ಥಗಿತಗೊಳಿಸಲಾಗುತ್ತದೆ. ಯಾವುದೇ ರೀತಿ ವ್ಯವಹಾರ ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ಮಾರ್ಚ್ 1 ಎಸ್ಬಿಐ ಎಟಿಎಂ ಕಾರ್ಡ್

ಮಾರ್ಚ್ 1 ಎಸ್ಬಿಐ ಎಟಿಎಂ ಕಾರ್ಡ್

ಮಾರ್ಚ್ 1 ಎಸ್ಬಿಐ ಎಟಿಎಂ ಕಾರ್ಡ್ ನಲ್ಲಿಯೂ ಬದಲಾವಣೆಯಾಗಲಿದೆ. ಗ್ರಾಹಕರಿಗೆ ದೇಶಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ನೀಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚನೆ ನೀಡಿದೆ. ಈ ಹಿಂದೆ ಎಲ್ಲರಿಗೂ ವಿದೇಶಿ ಮಾನ್ಯ ಕಾರ್ಡ್ ನೀಡಲಾಗುತ್ತಿತ್ತು. ಈಗಾಗಲೇ ಚಿಪ್ ಆಧಾರಿತ ಕಾರ್ಡ್ ಬಳಕೆ ಕುರಿತಂತೆ ಎಸ್ಬಿಐ ಅಧಿಸೂಚನೆ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಎಟಿಎಂನಲ್ಲಿ 2000 ರು ನೋಟು ಇಲ್ಲ

ಎಟಿಎಂನಲ್ಲಿ 2000 ರು ನೋಟು ಇಲ್ಲ

2000 ರು ನೋಟು ಇಲ್ಲ: ಇಂಡಿಯನ್ ಬ್ಯಾಂಕ್ ಎಟಿಎಂಗಳಲ್ಲಿ 2000ರು ಮುಖಬೆಲೆಯ ನೋಟುಗಳು ಇನ್ಮುಂದೆ ಲಭ್ಯವಿರುವುದಿಲ್ಲ. ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿರುವ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಎಟಿಎಂಗಳಲ್ಲಿ 2,000 ರೂಪಾಯಿ ನೋಟುಗಳು ಸಿಗುವುದಿಲ್ಲ. ಒಂದು ವೇಳೆ 2 ಸಾವಿರ ರೂಪಾಯಿ ನೋಟುಗಳು ಬೇಕೆಂದರೆ ಅಂಥ ಗ್ರಾಹಕರು ಬ್ಯಾಂಕ್ ಶಾಖೆಗೆ ಹೋಗಿ ಪಡೆಯಬಹುದು.

ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಬದಲಾವಣೆ?

ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಬದಲಾವಣೆ?

ಮಾರ್ಚ್ 1ರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯ ಪ್ರಮಾಣದಲ್ಲಿ ಬದಲಾವಣೆಯಾಗಲಿದ್ದು, ಹೊಸ ನಿಯಮ ಜಾರಿಗೆ ಬರಲಿದೆ. ಈ ಪ್ರಕಾರ ಲಾಟರಿ, ಜಿಎಸ್‌ಟಿಯನ್ನು ಶೇಕಡಾ 28ಕ್ಕೆ ಹೆಚ್ಚಳ ಮಾಡಲಾಗಿದೆ.

ಒಟಿಪಿ ಆಧಾರಿತ ಎಟಿಎಂ ವಿಥ್ ಡ್ರಾ

ಒಟಿಪಿ ಆಧಾರಿತ ಎಟಿಎಂ ವಿಥ್ ಡ್ರಾ

ಒಟಿಪಿ ಆಧಾರಿತ ಎಟಿಎಂ ವಿಥ್ ಡ್ರಾ(10,000 ರು ಗೂ ಅಧಿಕ) ಸೌಲಭ್ಯ ವಿಸ್ತರಣೆ. ರಾತ್ರಿ 8ರಿಂದ 8ರ ತನಕ ಇದ್ದ ಸೌಲಭ್ಯ ಅವಧಿ ವಿಸ್ತರಣೆ ಎಸ್ಬಿಐ ಎಟಿಎಂಗಳಿಗೆ ಮಾತ್ರ ಸೀಮಿತವಾಗಿದೆ. ಮೊಬೈಲ್ ಫೋನಿಗೆ ಬರುವ ಒಟಿಪಿಯನ್ನು ಎಟಿಎಂ ಸ್ಕ್ರೀನ್ ನಲ್ಲಿ ನಮೂದಿಸಿ ನಗದು ಪಡೆದುಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+