Bank Holidays in April: ಏಪ್ರಿಲ್‌ನಲ್ಲಿ 14 ದಿನಗಳ ಕಾಲ ಬ್ಯಾಂಕ್‌ ರಜೆ, ಪಟ್ಟಿ ಇಲ್ಲಿದೆ

ನವದೆಹಲಿ, ಮಾರ್ಚ್. 29: ಮುಂದಿನ ತಿಂಗಳು ಏಪ್ರಿಲ್‌ನಲ್ಲಿ 14 ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಇರಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಏಪ್ರಿಲ್ ತಿಂಗಳ ಸಾರ್ವಜನಿಕ ರಜಾದಿನಗಳ ಪಟ್ಟಿಯನ್ನು ಹಂಚಿಕೊಂಡಿದೆ. ಈ ಪಟ್ಟಿಯ ಪ್ರಕಾರ ಮುಂಬರುವ ತಿಂಗಳಲ್ಲಿ 14 ದಿನಗಳವರೆಗೆ ಬ್ಯಾಂಕುಗಳುಳಿಗೆ ರಜೆಯಿದೆ.

ಈ 14 ದಿನಗಳ ಬ್ಯಾಂಕ್ ರಜೆ ಪಟ್ಟಿಯಲ್ಲಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸೇರಿವೆ. ಬ್ಯಾಂಕ್‌ಗೆ ಭೇಟಿ ನೀಡುವ ಮೊದಲು, ಗ್ರಾಹಕರು ಬ್ಯಾಂಕ್ ರಜೆ ಪಟ್ಟಿಯನ್ನು ಒಮ್ಮೆ ಕಣ್ಣಾಡಿಸಬೇಕು. ಈ ಪಟ್ಟಿಯಲ್ಲಿನ ರಜೆಗಳು ಆಯಾ ರಾಜ್ಯಗಳಿಗೆ ಅನುಗುಣವಾಗಿದ್ದು, ಕೆಲವು ರಜೆಗಳು ಒಂದು ರಾಜ್ಯಕ್ಕೆ ಮಾತ್ರ, ಅಥವಾ ಕೆಲವೇ ಕೆಲವು ರಾಜ್ಯಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಈ ರಜಾ ದಿನಗಳನ್ನು ಗ್ರಾಹಕರು ತಮ್ಮ ಅನುಕೂಲಕ್ಕಾಗಿ ಪರಿಶೀಲಿಸಬಹುದು.

Bank Holidays in April 2024 Check holiday list

ಇನ್ನು, ಇತ್ತೀಚೆಗೆ ಆರ್‌ಬಿಐ ಮಾರ್ಚ್ 31 ರ ಭಾನುವಾರ ಕೂಡ ಬ್ಯಾಂಕ್‌ಗಳಿಗೆ ರಜೆಯಿಲ್ಲ. ಕೆಲಸ ಮಾಡಬೇಕು ಎಂದು ಘೋಷಿಸಿದೆ. ಹಣಕಾಸು ವರ್ಷದ ಮುಕ್ತಾಯವಾಗಿರುವುದಿಂದ ವಾರ್ಷಿಕ ಲೆಕ್ಕಪತ್ರಗಳ ಕೆಲಸ ಹೆಚ್ಚಾಗಿದೆ. ಇದೆ ಕಾರಣಕ್ಕೆ ಮಾರ್ಚ್ 30 ರ ಶನಿವಾರ ಮತ್ತು ಮಾರ್ಚ್ 31ರ ಭಾನುವಾರ ಆರ್‌ಬಿಐ ಕಚೇರಿಗಳು ಓಪನ್ ಇರಲಿವೆ.

ಏಪ್ರಿಲ್ 2024 ರ ಬ್ಯಾಂಕ್ ರಜಾದಿನಗಳ ಪಟ್ಟಿ

ಏಪ್ರಿಲ್ 1, 2024: ಏಪ್ರಿಲ್ 1 ರಂದು ಬ್ಯಾಂಕುಗಳು ಮುಚ್ಚಿರಲಿದೆ. ಆದರೆ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಮಿಜೋರಾಂ, ಚಂಡೀಗಢ, ಸಿಕ್ಕಿಂ ಮತ್ತು ಮೇಘಾಲಯದಂತಹ ಕೆಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿವೆ.

ಏಪ್ರಿಲ್ 5, 2024: ಬಾಬು ಜಗಜೀವನ್ ಮತ್ತು ಜುಮಾ-ಉಲ್-ವಿದಾ ಅವರ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲು, ತೆಲಂಗಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕ್‌ಗಳು ಬಂದ್ ಇರಲಿವೆ.

Bank Holidays in April 2024 Check holiday list

ಏಪ್ರಿಲ್ 9, 2024: ಗುಡಿ ಪಾಡ್ವಾ, ಯುಗಾದಿ ಹಬ್ಬ, ತೆಲುಗು ಹೊಸ ವರ್ಷದ ದಿನ ಆಚರಣೆಗಳ ಕಾರಣ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಹೈದರಾಬಾದ್- ಆಂಧ್ರಪ್ರದೇಶ, ಹೈದರಾಬಾದ್ - ತೆಲಂಗಾಣ, ಮಣಿಪುರ, ಗೋವಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 9 ರಂದು ಬ್ಯಾಂಕ್ ರಜೆ ಘೋಷಿಸಲಾಗಿದೆ.

ಏಪ್ರಿಲ್ 10, 2024: ರಂಜಾನ್-ಈದ್ (ಈದ್-ಉಲ್-ಫಿತರ್) ಕಾರಣದಿಂದ ಏಪ್ರಿಲ್ 10 ರಂದು ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ.

ಏಪ್ರಿಲ್ 11 , 2024: ಚಂಡೀಗಢ, ಸಿಕ್ಕಿಂ, ಕೇರಳ ಮತ್ತು ಹಿಮಾಚಲ ಪ್ರದೇಶದಲ್ಲಿ ಏಪ್ರಿಲ್ 11 ರಂದು ರಂಜಾನ್-ಈದ್ (ಈದ್-ಉಲ್-ಫಿತರ್) ಆಚರಿಸಲಾಗುತ್ತದೆ. ಹೀಗಾಗಿ ಏಪ್ರಿಲ್ 11 ರಂದು ಈ ರಾಜ್ಯಗಳಲ್ಲಿ ಬ್ಯಾಂಕ್ ರಜೆ.

ಏಪ್ರಿಲ್ 13, 2024: ಬೊಹಾಗ್ ಬಿಹು, ಚೀರೋಬಾ, ಬೈಸಾಖಿ, ಬಿಜು ಉತ್ಸವ ಈ ಬಾರಿ ಎರಡನೇ ಶನಿವಾರದಂದು ಬಂದಿದೆ. ಹೀಗಾಗಿ ಅಸ್ಸಾಂ, ಮಣಿಪುರ, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ.

ಏಪ್ರಿಲ್ 16, 2024: ರಾಮ ನವಮಿಯ ಶುಭ ಸಂದರ್ಭದಲ್ಲಿ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಒರಿಸ್ಸಾ, ಚಂಡೀಗಢ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶದ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+