ಫ್ಯೂಚುರಾ ಗ್ರೂಪ್ ಜೊತೆ ಬಾಬಾ ರಾಮ್ ದೇವ್ ಡೀಲ್
ನವದೆಹಲಿ, ಅ. 09: ಉದ್ಯಮಿ ಕಿಶೋರ್ ಬಿಯಾನಿ ಅವರ ಒಡೆತನದ ಫ್ಯೂಚುರಾ ಗ್ರೂಪ್ ಜೊತೆ ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ ಭರ್ಜರಿ ಡೀಲ್ ಮಾಡಿಕೊಂಡಿದೆ.
ಈ ಒಪ್ಪಂದದ ಮೂಲಕ ಬಿಗ್ ಬಜಾರ್, ಈಸಿ ಡೇ ಮುಂತಾದ ರೀಟೈಲ್ ಮಳಿಗೆಗಳಲ್ಲಿ ಪತಂಜಲಿ ಆಯುರ್ವೇದ ಸಂಸ್ಥೆ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಾಗಲಿದೆ. [ಪತಂಜಲಿ ಆಟಾ ನೂಡಲ್ಸ್ ಪೈಪೋಟಿ ಎದುರಿಸುತ್ತಾ ಮ್ಯಾಗಿ?]
ಫುಡ್ ಪಾರ್ಕ್ : ಎರಡು ಸಂಸ್ಥೆಗಳು ಬೆಂಗಳೂರು ಹಾಗೂ ಹರಿದ್ವಾರದಲ್ಲಿ ಫುಡ್ ಪಾರ್ಕ್ ಸ್ಥಾಪನೆ ಮಾಡಲಾಗುವುದು, 240ನಗರಗಳಲ್ಲಿರುವ ಫ್ಯೂಚುರ ಸಂಸ್ಥೆಯ ರಿಟೈಲ್ ಮಳಿಗೆಗಳಲ್ಲಿ ಉತ್ಪನ್ನಗಳು ಲಭ್ಯವಿರಲಿದೆ.

ಸ್ವದೇಶಿ ಉತ್ಪನ್ನಗಳನ್ನು ಮಾರಾಟ ಮಾಡುವ ಸೂಕ್ತ ವ್ಯಕ್ತಿ ಹಾಗೂ ಸಂಸ್ಥೆಗಾಗಿ ಹುಡುಕಾಟ ನಡೆಸಿದ್ದೆವು, ಬಿಯಾನಿ ಅವರ ಸಂಸ್ಥೆ ಇದಕ್ಕೆ ಸೂಕ್ತವಾಗಿದೆ. ಉತ್ಪಾದನೆ, ಮಾರುಕಟ್ಟೆ ವಿಸ್ತರಣೆ ಸೇರಿದಂತೆ ಹಲವು ವಿಭಾಗಗಳಲ್ಲಿ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಯೋಗ ಗುರು ಕಮ್ ಉದ್ಯಮಿ ಬಾಬಾ ರಾಮದೇವ್ ಪ್ರತಿಕ್ರಿಯಿಸಿದ್ದಾರೆ.[ಮ್ಯಾಗಿ ನಿಷೇಧ ತೆರವು]
ನೆಸ್ಲೆ ಮ್ಯಾಗಿ ವಿರುದ್ಧವಾಗಿ ಆಟ್ಟಾ ನೂಡಲ್ಸ್ ಎಂಬ ಸ್ವದೇಶಿ ಉತ್ಪನ್ನವನ್ನು ಮಾರುಕಟ್ಟೆ ಬಿಡುವುದಾಗಿ ಘೋಷಿಸಿದ್ದ ರಾಮ್ ದೇವ್ ಅವರು ಪತಾಂಜಲಿ ನೂಡಲ್ಸ್ ಅನ್ನು ಅಕ್ಟೋಬರ್ 15ರಂದು ಅಧಿಕೃತವಾಗಿ ಭಾರದೆಲ್ಲೆಡೆ ಮಾರುಕಟ್ಟೆಗೆ ಪರಿಚಯಿಸಲಿದ್ದಾರೆ. [ಮ್ಯಾಗಿ ಮೇಲಿನ ನಿಷೇಧ ತೆರವು ಸದ್ಯಕ್ಕಿಲ್ಲ: ಖಾದರ್]
ಮ್ಯಾಗಿ ಬೆಲೆ 25ರು ಇದ್ದರೆ, ನಾವು 15 ರು ಗೆ ನೂಡಲ್ಸ್ ಕೊಡುತ್ತೇವೆ. ಯಾವುದೇ ರೀತಿಯ ರಾಸಾಯನಿಕ ಪದಾರ್ಥ ಇರುವುದಿಲ್ಲ ಎಂದಿದ್ದಾರೆ.











Click it and Unblock the Notifications