ಆಡಿಯಿಂದ ಮೂರು ಎಲೆಕ್ಟ್ರಿಕ್ ಎಸ್‍ಯುವಿಗಳ ಬಿಡುಗಡೆ

ಬೆಂಗಳೂರು, ಜುಲೈ 22: ಜರ್ಮನಿಯ ಐಷಾರಾಮಿ ಕಾರು ಉತ್ಪಾದಕ ಆಡಿ(Audi) ಇಂದು ತನ್ನ ಎಲೆಕ್ಟ್ರಿಕ್ ಮೊಬಿಲಿಟಿ ಪ್ರಯಾಣದಲ್ಲಿ ದೈತ್ಯ ಹೆಜ್ಜೆಯನ್ನು ಇರಿಸಿದ್ದು 3 ಎಲೆಕ್ಟ್ರಿಕ್ ಎಸ್‍ಯುವಿಗಳು ಆಡಿ ಇ-ಟ್ರೊನ್ 50, ಆಡಿ ಇ-ಟ್ರೊನ್ ಸ್ಪೋರ್ಟ್‍ಬ್ಯಾಕ್ 55 ಬಿಡುಗಡೆ ಮಾಡಿದೆ. ಮುಂಬದಿ ಹಾಗೂ ಹಿಂಬದಿಯಲ್ಲಿ ಎರಡು ಅಸಾಧಾರಣ ಡೈನಾಮಿಕ್ ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ಆಡಿ ಇ-ಟ್ರೊನ್ ಮತ್ತು ಆಡಿ ಇ-ಟ್ರೊನ್ ಸ್ಪೋರ್ಟ್‍ಬ್ಯಾಕ್ ಅಪೂರ್ವ ಚಾಲನೆಯ ಅನುಭವ ನೀಡುತ್ತದೆ.

ಆಡಿ ಇಂಡಿಯಾದ ಮುಖ್ಯಸ್ಥ ಬಲ್‍ಬಿರ್ ಸಿಂಗ್ ಧಿಲ್ಲೋನ್, ''ಭಾರತದಲ್ಲಿ ನಾವು ಇ-ಟ್ರೊನ್ ಬ್ರಾಂಡ್ ಬಿಡುಗಡೆ ಮಾಡುತ್ತಿರುವುದರಿಂದ ಇಂದು ನಮಗೆ ಅತ್ಯಂತ ದೊಡ್ಡ ದಿನವಾಗಿದೆ. ಇ-ಟ್ರೊನ್ ಬ್ರಾಂಡ್ ಅಡಿಯಲ್ಲಿ ನಾವು ಒಂದಲ್ಲ ಮೂರು ಎಸ್‍ಯುವಿಗಳನ್ನು ನಮ್ಮ ವಿದ್ಯುದೀಕರಣ ಪ್ರಯಾಣದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಆಡಿ ಇ-ಟ್ರೊನ್ 50, ಆಡಿ ಇ-ಟ್ರೊನ್ 55 ಮತ್ತು ಆಡಿ ಇ-ಟ್ರೊನ್ ಸ್ಪೋರ್ಟ್‍ಬ್ಯಾಕ್ 55 ಐಷಾರಾಮ, ಶೂನ್ಯ ಹೊರಸೂಸುವಿಕೆ, ಕಾರ್ಯಕ್ಷಮತೆ ಮತ್ತು ಪ್ರತಿನಿತ್ಯದ ಬಳಕೆಯ ಪರಿಪೂರ್ಣ ಸಂಯೋಜನೆಯಾಗಿವೆ. ಮೂರು ಕೊಡುಗೆಗಳೊಂದಿಗೆ ನಾವು ಪ್ರತಿ ಬಗೆಯ ಇವಿ ಗ್ರಾಹಕರಿಗೆ ಸಣ್ಣ ಆದರೆ ಬೆಳೆಯುತ್ತಿರುವ ಐಷಾರಾಮಿ ಎಸ್‍ಯುವಿ ಕ್ಷೇತ್ರಕ್ಕೆ ತರುತ್ತಿದ್ದೇವೆ'' ಎಂದರು.

Audi plugs in to electric mobility - Launches 3 electric SUVs

''ಎಲೆಕ್ಟ್ರಿಕ್ ಮೊಬಿಲಿಟಿಗೆ ಸುಲಭ ಪರಿವರ್ತನೆಯನ್ನು ಸರಳಗೊಳಿಸಲು ನಾವು ಆಫ್ಟರ್-ಸೇಲ್ಸ್, ಚಾರ್ಜಿಂಗ್ ಮತ್ತು ಮಾಲೀಕತ್ವದ ಹಲವಾರು ಅನುಕೂಲಗಳು ಮತ್ತು ಪ್ಯಾಕೇಜ್‍ಗಳನ್ನು ನೀಡುತ್ತಿದ್ದೇವೆ. ಇದನ್ನು ಮುಂದಕ್ಕೆ ಕೊಂಡೊಯ್ಯಲು ನಾವು ಈ ವರ್ಗದ ಅತ್ಯುತ್ತಮ 3 ವರ್ಷ ಬೈಬ್ಯಾಕ್ ಕೂಡಾ ನೀಡುತ್ತಿದ್ದೇವೆ. ಇದು ಆಡಿ ಇಂಡಿಯಾದ ಎಲೆಕ್ಟ್ರಿಕ್ ಪ್ರಯಾಣದ ಪ್ರಾರಂಭವಷ್ಟೇ ಮತ್ತು ನೀವು ಮುಂದಿನ ಇವಿ ಕೊಡುಗೆಯನ್ನು ಬಹಳ ಬೇಗನೆ ಆಲಿಸುತ್ತೀರಿ'' ಎಂದು ಹೇಳಿದರು.

Audi plugs in to electric mobility - Launches 3 electric SUVs

ಧಿಲ್ಲೋನ್, ''ಜಾಗತಿಕವಾಗಿ ಆಡಿ ಇ-ಟ್ರೊನ್ ಮತ್ತು ಆಡಿ ಇ-ಟ್ರೊನ್ ಸ್ಪೋರ್ಟ್‍ಬ್ಯಾಕ್ ಅತ್ಯಂತ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಾಗಿ ಮುಂದುವರಿದಿವೆ. ಸುಸ್ಥಿರ ಮೊಬಿಲಿಟಿ ಕುರಿತಂತೆ ಸ್ಪಷ್ಟ ನೀಲನಕ್ಷೆ ಇದ್ದು ಆಡಿ ಇಂಡಿಯಾ ಇವಿ ಇಕೊಸಿಸ್ಟಂ ಅಭಿವೃದ್ಧಿಗೆ ಬದ್ಧವಾಗಿದೆ. ನಾವು ಚಾರ್ಜಿಂಗ್ ಮೂಲಸೌಕರ್ಯ ಸ್ಥಾಪಿಸುವುದರಿಂದ ಸಂಪೂರ್ಣ ಬ್ಯಾಟರಿ ರಿಸೈಕ್ಲಿಂಗ್‍ವರೆಗೆ ಒಪ್ಪಂದಗಳಿವೆ. ಭವಿಷ್ಯವು ಎಲೆಕ್ಟ್ರಿಕ್ ಆಗಿದೆ ಮತ್ತು ಆಡಿ ಇಂಡಿಯಾ ಅದಕ್ಕೆ ಸಿದ್ಧವಾಗಿದೆ'' ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+