ರುಪಾಯಿಯಲ್ಲಿ ಹಣ ಪಾವತಿ ಸ್ವೀಕರಿಸಲು ತೈಲ ಕಂಪನಿಗಳಿಗೆ ಮೋದಿ ಮನವಿ
ನವದೆಹಲಿ, ಅಕ್ಟೋಬರ್ 15: ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ನಿರಂತರ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಈಗಿರುವ ಪಾವತಿ ನಿಯಮಗಳು ಹಾಗೂ ಬಗೆಯನ್ನು ಬದಲಾವಣೆ ಮಾಡಿಕೊಳ್ಳುವಂತೆ ಸೌದಿ ಅರೇಬಿಯಾ ಹಾಗೂ ಯುಎಇಯಲ್ಲಿನ ಪ್ರಮುಖ ತೈಲ ಕಂಪನಿಗಳ ಸಿಇಒಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕೇಳಿದ್ದಾರೆ.
ಹೆಚ್ಚು ತೈಲ ಬಳಕೆ ಮಾಡುವ ರಾಷ್ಟ್ರಗಳು ಹೆಚ್ಚುತ್ತಿರುವ ಕಚ್ಚಾ ತೈಲದ ಬೆಲೆಯಿಂದ ಸಂಕಷ್ಟ ಎದುರಿಸುತ್ತಿವೆ. ಅದರಲ್ಲೂ ಭಾರತವು ಶೇಕಡಾ ಎಂಬತ್ತಕ್ಕೂ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕೂಡ ಕುಸಿದಿರುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.
ಸದ್ಯದ ಗಂಭೀರ ಪರಿಸ್ಥಿತಿಯನ್ನು ನಿವಾರಿಸಿಕೊಳ್ಳಲು ತೈಲ ಉತ್ಪಾದನೆ ಮಾಡುವ ದೇಶಗಳು ಸಹಕಾರ ನೀಡಬೇಕು ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆಯಲ್ಲಿ ಕೇಳಲಾಗಿದೆ. ಬಹಳ ಮುಖ್ಯವಾಗಿ, ತೈಲ ಖರೀದಿಸಿದ ನಂತರ ಸ್ಥಳೀಯ ಕರೆನ್ಸಿಯಲ್ಲಿ (ಭಾರತದ ರುಪಾಯಿಯಲ್ಲಿ) ಪಾವತಿಸಲು ತಾತ್ಕಾಲಿಕವಾಗಿ ಅವಕಾಶ ನೀಡುವಂತೆ ಕೇಳಿದ್ದಾರೆ.

ಸರಕಾರ ಎರಡೂವರೆ ರುಪಾಯಿ ಇಳಿಕೆ ಮಾಡಿತ್ತು. ಈ ದರ ಕಳೆದ ಹತ್ತು ದಿನಗಳಲ್ಲೇ ಏರಿಕೆಯಾಗಿದೆ. ಅನಿಲದ ವಾಣಿಜ್ಯ ಬಳಕೆ ಮಾಡುವುದು ಹೇಗೆ ಎಂಬ ಬಗ್ಗೆ ಸಲಹೆ ನೀಡುವಂತೆ ಕೂಡ ಮನವಿ ಮಾಡಿದ್ದಾರೆ.












Click it and Unblock the Notifications