ಅಶ್ನೀರ್ ಗ್ರೋವರ್ ಹೊಸ ಕಂಪನಿ ZeroPe: ವೈದ್ಯಕೀಯ ಬಿಲ್ ಪಾವತಿಸಲು ಹೇಗೆ ಸಹಾಯವಾಗುತ್ತದೆ?
ಉದ್ಯಮ ರಂಗದಲ್ಲಿ ಗುರುತು ಹೊಂದಿರುವ ಭಾರತ್‌ಪೇ ಸಹ ಸಂಸ್ಥಾಪಕ ಹಾಗೂ ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್ ಅವರು ಹೊಸ ಕಂಪನಿಯನ್ನು ಸ್ಥಾಪಿಸಿದ್ದಾರೆ. ಫಿನ್‌ಟೆಕ್ ವಿಭಾಗದಲ್ಲಿ ಅಶ್ನೀರ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಕಂಪನಿಯ ಮೂಲಕ ಅಗತ್ಯವಿರುವವರಿಗೆ ಅಪ್ಲಿಕೇಶನ್ ಮೂಲಕ ತ್ವರಿತ ವೈದ್ಯಕೀಯ ಸಾಲಗಳನ್ನು ಒದಗಿಸುವ ಕನಸು ಹೊಂದಿದ್ದಾರೆ.
ಅಶ್ನೀರ್, ಅಸೀಮ್ ಧಾರ್ವಿ ಅವರ ಸಹಯೋಗದೊಂದಿಗೆ ವೈದ್ಯಕೀಯ ಬಿಲ್ ಪಾವತಿಗಳಿಗಾಗಿ ZeroPay ಎಂಬ ಹೊಸ ಫಿನ್‌ಟೆಕ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಮನಿಕಂಟ್ರೋಲ್ ವರದಿಯ ಪ್ರಕಾರ, ಈ ಅಪ್ಲಿಕೇಶನ್ ಅನ್ನು ವೈದ್ಯಕೀಯ ಸಾಲಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

ಜಿರೋಪೇದಿಂದ ಏನು ಲಾಭ?
ಭಾರತ್‌ಪೇ ಜೊತೆಗಿನ ವಿವಾದಗಳಿಂದಾಗಿ, ಅಶ್ನೀರ್ ಗ್ರೋವರ್ ಕಂಪನಿಯಿಂದ ಕಾಲು ಹೊರ ಹಾಕಿದರು. ಸ್ವಲ್ಪ ಸಮಯದ ನಂತರ, ಅವರು ಥರ್ಡ್ ಯುನಿಕಾರ್ನ್ ಎಂಬ ಹೊಸ ಕಂಪನಿಯನ್ನು ಸ್ಥಾಪಿಸಿದರು. ಥರ್ಡ್ ಯುನಿಕಾರ್ನ್ ಕಂಪನಿಯು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೊಸ ಅಪ್ಲಿಕೇಶನ್ ಅನ್ನು ಹೊಂದಿದೆ. ಹೊಸ ಅಪ್ಲಿಕೇಶನ್‌ಗೆ ಜಿರೋ ಪೇ ಎಂದು ಹೆಸರಿಸಲಾಗಿದೆ.
ಜಿರೋ ಪೇ ಅಪ್ಲಿಕೇಶನ್ ಅನ್ನು ಥರ್ಡ್ ಯೂನಿಕಾರ್ನ್ ಅಭಿವೃದ್ಧಿಪಡಿಸಿದೆ ಮತ್ತು ಅಪ್ಲಿಕೇಶನ್ ಪ್ರಸ್ತುತ ಟೆಸ್ಟ್ ಮೋಡ್‌ನಲ್ಲಿದೆ ಎಂದು ಗೂಗಲ್ ಪ್ಲೇ ಸ್ಟೋರ್‌ನ ಪಟ್ಟಿಯಲ್ಲಿ ತಿಳಿಸಲಾಗಿದೆ. ಜಿರೋ ಪೇ ದೆಹಲಿ ಮೂಲದ ನಾನ್ ಬ್ಯಾಂಕಿಗ್ ಹಣಕಾಸು ಕಂಪನಿ (NBFC) ಮುಕುಟ್ ಫಿನ್ವೆಸ್ಟ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಇದರ ಮೂಲಕ, 5 ಲಕ್ಷ ರೂ.ವರೆಗೆ ತ್ವರಿತ ವೈದ್ಯಕೀಯ ಸಾಲವನ್ನು ಪಡೆಯಬಹುದು. ಕಂಪನಿಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಜೀರೋಪೇನ ಪಾಲುದಾರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಜನರು ಮಾತ್ರ ಈ ಸಾಲ ಸೌಲಭ್ಯದ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
ಭಾರತ್ ಪೇನಿಂದ ಹೊರ ಬರುತ್ತಿದ್ದಂತೆ ಅಶ್ನೀರ್ ಕ್ರಿಕ್‌ಪೇ ಎಂಬ ಫ್ಯಾಂಟಸಿ ಗೇಮ್ ಪ್ಲಾಟ್‌ಫಾರ್ಮ್ ಅನ್ನು ಇದೇ ಥರ್ಡ್ ಯುನಿಕಾರ್ನ್ ಕಂಪನಿಯ ಅಡಿಯಲ್ಲಿ ತಯಾರಿಸಿದ್ದರು. ಭಾರತ್ ಪೇದಲ್ಲಿ ವಿವಾದಗಳ ನಂತರ ಅಶ್ನೀರ್ ಫಿನ್‌ಟೆಕ್ ಸೆಗ್ಮೆಂಟ್‌ನಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.
ಎಷ್ಟು ದೊಡ್ಡದಿದೆ ಮಾರುಕಟ್ಟೆ
ಚಿಕಿತ್ಸೆಗಾಗಿ ಸಾಲ ನೀಡುವ ವ್ಯವಹಾರ ಹೊಸದಲ್ಲ. ಗ್ರೋವರ್‌ಗಿಂತ ಮುಂಚೆಯೇ, ಈ ಮಾರುಕಟ್ಟೆಯಲ್ಲಿ ಅನೇಕ ಕಂಪನಿಗಳು ಇವೆ. ಅವುಗಳಲ್ಲಿ ಸೇವ್ ಇನ್, ಕ್ಯೂಬ್ ಹೆಲ್ತ್, ಆರೋಗ್ಯ ಫೈನಾನ್ಸ್, ನಿಯೋ ಡಾಕ್ಸ್, ಫೈಬರ್, ಕೆಂಕೊ, ಮೈ ಕೇರ್ ಹೆಲ್ತ್ ಇತ್ಯಾದಿಗಳು ಪ್ರಮುಖವಾಗಿವೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಭಾಗ. ಇದಕ್ಕಾಗಿಯೇ ಅನೇಕ ಫಿನ್‌ಟೆಕ್ ಕಂಪನಿಗಳು ತ್ವರಿತ ವೈದ್ಯಕೀಯ ಸಾಲಗಳನ್ನು ಒದಗಿಸುವತ್ತ ಗಮನಹರಿಸುತ್ತಿವೆ. ವರದಿಯ ಪ್ರಕಾರ, ಭಾರತದ ಡಿಜಿಟಲ್ ಹೆಲ್ತ್‌ಕೇರ್ ಮಾರುಕಟ್ಟೆಯು 2030 ರ ವೇಳೆಗೆ 37 ಶತಕೋಟಿ ಡಾಲರ್ ಆದಾಯವನ್ನು ಗಳಿಸುವ ನಿರೀಕ್ಷೆಯಿದೆ.
ಅಶ್ನೀರ್ ಗ್ರೋವರ್ ಅವರ ಪತ್ನಿ ಮಾಧುರಿ ಜೈನ್ ಗ್ರೋವರ್ ಮತ್ತು ಚಂಡೀಗಢ ಮೂಲದ ಉದ್ಯಮಿ ಅಸೀಮ್ ಘವ್ರಿ ಅವರೊಂದಿಗೆ ಜನವರಿ 2023 ರಲ್ಲಿ ಥರ್ಡ್ ಯುನಿಕಾರ್ನ್ ಪ್ರಾರಂಭಿಸಿದರು. ಕಂಪನಿಯು ಫ್ಯಾಂಟಸಿ ಗೇಮಿಂಗ್ ಅಪ್ಲಿಕೇಶನ್ ಕ್ರಿಕ್ ಪೇ ನೊಂದಿಗೆ ಆರಂಭವಾಯಿತು. ಇದು ಡ್ರೀಮ್11, ಮೊಬೈಲ್ ಪ್ರೀಮಿಯರ್ ಲೀಗ್ (MPL) ಮತ್ತು ಗೇಮ್ಸ್24x7 ನ My11Circle ನಂತಹ ಆಪ್‌ಗಳಿಗೆ ಪೈಪೋಟಿ ನೀಡಿತ್ತು.












Click it and Unblock the Notifications