April 2nd Gold Price: ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ
ಬೆಂಗಳೂರು, ಏಪ್ರಿಲ್ 02: ಬಂಗಾರದ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಿನ್ನೆ ಕೊಂಚ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಗಗನಕ್ಕೇರಿದೆ. ಬೆಳ್ಳಿ ಬೆಲೆಯೂ ಹೆಚ್ಚಾಗಿದೆ. ಚಿನ್ನ-ಬೆಳ್ಳಿಯು ಗಗನ ಕುಸುಮವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಶುಭ ಸಮಾರಂಭಗಳು ಹೆಚ್ಚಿರುವ ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹಿಂದಿಗಿಂತ ದುಬಾರಿಯೇ ಇದೆ. ಚಿನ್ನದ ಬೆಲೆ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 250 ರೂಪಾಯಿನಷ್ಟು ಹೆಚ್ಚಾಗಿದೆ.

ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 63,600 ರೂಪಾಯಿ ಇದ್ದು, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 69,380 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 7,860 ರೂಪಾಯಿ ಇದೆ. ಹಾಗಾದರೆ ಇಂದು (ಏಪ್ರಿಲ್ 2) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
ಒಂದು ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಚಿನ್ನದ ದರ - 6,360 ರೂಪಾಯಿ
* 24 ಕ್ಯಾರೆಟ್ ಚಿನ್ನದ ದರ - 6,938 ರೂಪಾಯಿ
10 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ- 63,600 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 69,380 ರೂಪಾಯಿ
8 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ - 50,880 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 55,504 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
* ಬೆಂಗಳೂರು-63,600 ರೂಪಾಯಿ
* ಚೆನ್ನೈ- 64,550 ರೂಪಾಯಿ
*ಮುಂಬೈ- 63,600 ರೂಪಾಯಿ
* ಕೇರಳ - 63,600 ರೂಪಾಯಿ
* ಕೋಲ್ಕತ್ತಾ-63,600 ರೂಪಾಯಿ
* ಜೈಪುರ್- 63,750 ರೂಪಾಯಿ
* ಭುವನೇಶ್ವರ್- 63,600 ರೂಪಾಯಿ
*ಅಹ್ಮದಾಬಾದ್-63,650 ರೂಪಾಯಿ
*ಲಕ್ನೋ-63,750 ರೂಪಾಯಿ
* ನವದೆಹಲಿ- 63,750 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
* ಬೆಂಗಳೂರು-7,750 ರೂಪಾಯಿ
* ಚೆನ್ನೈ- 8,160 ರೂಪಾಯಿ
* ಮುಂಬೈ- 7,860 ರೂಪಾಯಿ
* ಕೋಲ್ಕತ್ತಾ- 7,860 ರೂಪಾಯಿ
* ನವದೆಹಲಿ- 7,860 ರೂಪಾಯಿ












Click it and Unblock the Notifications