ಹಬ್ಬದ ಸೀಸನ್ ರಿಯಾಯಿತಿ: ಫ್ಲಿಪ್ ಕಾರ್ಟ್ ವಿರುದ್ಧ ಅಮೆಜಾನ್!

ಬೆಂಗಳೂರು, ಸೆಪ್ಟೆಂಬರ್ 28: ಪ್ರತಿ ವರ್ಷದಂತೆ ಈ ವರ್ಷ ಕೂಡಾ ಆನ್ ಲೈನ್ ಶಾಪಿಂಗ್ ದಿಗ್ಗಜ ಸಂಸ್ಥೆಗಳಾದ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಗಳು ತಮ್ಮ ಗ್ರಾಹಕರಿಗಾಗಿ ರಿಯಾಯಿತಿ ದರದಲ್ಲಿ ಮಾರಾಟ ಘೋಷಿಸಿವೆ. ಈ ಬಾರಿಯ ವಿಶೇಷವೆಂದರೆ ಎರಡೂ ದೊಡ್ಡ ಸಂಸ್ಥೆಗಳ 'ಡಿಸ್ಕೌಂಟ್ ಸೇಲ್' ಒಂದೇ ದಿನದಂದು ಆರಂಭಗೊಳ್ಳುತ್ತಿದೆ.

ಫ್ಲಿಪ್ ಕಾರ್ಟ್ ನ 'ದಿ ಬಿಗ್ ಬಿಲಿಯನ್ ಸೇಲ್' ಅಕ್ಟೋಬರ್ 10ರಿಂದ ಅಕ್ಟೋಬರ್ 15ರವರೆಗೆ ನಡೆಯಲಿದೆ. ಅಮೆಜಾನ್ ನ 'ಗ್ರೇಟ್ ಇಂಡಿಯನ್ ಸೇಲ್' ಕೂಡ ಅಕ್ಟೋಬರ್ 10ರಿಂದ ಶುರುವಾಗಲಿದ್ದು, ಅಕ್ಟೋಬರ್ 14ರವರೆಗೆ ನಡೆಯಲಿದೆ. ಹೀಗಾಗಿ, ಆನ್ ಲೈನ್ ಶಾಪಿಂಗ್ ನಲ್ಲಿ ಹೊಸ ಕಿಚ್ಚು ಶುರುವಾಗಲಿದೆ.

ಎರಡನೇ ಮತ್ತು ಮೂರನೇ ಶ್ರೇಣಿಯ ನಗರಗಳ ಗ್ರಾಹಕರನ್ನು ತನ್ನ ಗುರಿಯಾಗಿಸಿಕೊಂಡಿರುವ ಅಮೆಜಾನ್, ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯಲು ಭರ್ಜರಿ ಆಫರ್ ಗಳನ್ನು ನೀಡುತ್ತಿದೆ. ಹೊಸ ಗ್ರಾಹಕರ ಜೊತೆ ಹೊಸ ಉತ್ಪನ್ನಗಳು ಈ ಬಾರಿ ಸೇಲ್ ನಲ್ಲಿ ಗಮನ ಸೆಳೆಯಲಿವೆ. ಈ ಸೇಲ್ ನಿಂದಾಗಿ 2 ಮತ್ತು 3ನೇ ಶ್ರೇಣಿ ನಗರಗಳ ಶೇಕಡಾ 70ರಷ್ಟು ಹೊಸ ಗ್ರಾಹಕರನ್ನು ಅಮೆಜಾನ್ ಸೆಳೆಯುವ ಗುರಿ ಹೊಂದಿದೆ.

Amazon vs Flipkart: E-commerce giants gear for festive season battle

ಈ ಬಿಗ್ ಬಿಲಿಯನ್ ಡೇ ಸೇಲ್ ನಿಂದಾಗಿ ಸುಮಾರು 7,250 ಕೋಟಿ ರು ನಿವ್ವಳ ಮಾರಾಟ ನಿರೀಕ್ಷೆಯನ್ನು ಫ್ಲಿಪ್ ಕಾರ್ಟ್ ಹೊಂದಿದೆ. ಶೇ 50ರಷ್ಟು ಸ್ಮಾರ್ಟ್ ಫೋನ್ ಸೇಲ್ ಆಗುವ ಸಾಧ್ಯತೆಯಿದೆ.

ಇನ್ನೊಂದೆಡೆ ಒನ್ ಪ್ಲಸ್, ಸ್ಯಾಮ್ಸ್ ಸಂಗ್ ಸೇರಿದಂತೆ ಪ್ರಸಿದ್ಧ ಕಂಪನಿಗಳು ಅಮೆಜಾನ್ ಸೇಲ್ ನಲ್ಲಿ ಪಾಲ್ಗೊಳ್ಳಲು ಉತ್ಸುಕವಾಗಿವೆ. ಒಟ್ಟಾರೆ, 20 ಮಿಲಿಯನ್ ಗೂ ಅಧಿಕ ಜನರು ಈ ಅವಧಿಯಲ್ಲಿ 3 ಬಿಯ ಡಾಲರ್ ಮಾರಾಟ ಮೌಲ್ಯ ಉತ್ಪಾದಿಸುವ ಲಕ್ಷಣಗಳು ಗೋಚರಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+