ಅಮೇಜಾನ್ ಜೊತೆ ಕೈ ಜೋಡಿಸಿದ ಇನ್ಫಿ ಮೂರ್ತಿ‌

ಬೆಂಗಳೂರು, ಜೂ.28: ಇನ್ಫೋಸಿಸ್‌‌‌ನ ಸಹ ಸಂಸ್ಥಾಪಕ ನಾರಾಯಣ ಮೂರ್ತಿ‌ಯವರು ತನ್ನ ಖಾಸಗಿ ಹೂಡಿಕೆ ಸಂಸ್ಥೆ ಮೂಲಕ ಜಗತ್ತಿನ ಆನ್‌‌ಲೈನ್‌ ಕ್ಷೇತ್ರದ ದಿಗ್ಗಜ ಅಮೆಜಾನ್‌ ಕಂಪೆನಿಯ‌ ಜೊತೆ ಭಾರತದಲ್ಲಿ ಇ- ಕಾಮರ್ಸ್‌ ಕ್ಷೇತ್ರದಲ್ಲಿ ವಹಿವಾಟು ನಡೆಸಲು ಮುಂದಾಗಿದ್ದಾರೆ.

ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಆನ್‌ಲೈನ್‌ ಕ್ಷೇತ್ರದತ್ತ ಆಕರ್ಷಿಸಲು ನಾರಾಯಣಮೂರ್ತಿ‌ಯವವರ ಖಾಸಗಿ ಹೂಡಿಕೆ ಸಂಸ್ಥೆ ಕ್ಯಾಟ್‌ಮರನ್‌(Catamaran) ಮತ್ತು ಅಮೇಜಾನ್‌.ಕಾಂ ಪರಸ್ಪರ ಕೈಜೋಡಿಸಿದೆ.[ಇನ್ಫೋಸಿಸ್ ನೂತನ ಸಿಇಒ ಆಗಿ ವಿಶಾಲ್ ಸಿಕ್ಕಾ ನೇಮಕ]

ಈ ಒಪ್ಪಂದಂತೆ ಎರಡು ಕಂಪೆನಿಗಳು ಸೇರಿ ತರುಸ್‌ ಬಿಸಿನೆಸ್ ಆಂಡ್‌‌ ಟ್ರೇಡ್‌ ಸರ್ವೀಸಸ್‌(Taurus Business And Trade Services) ಹೆಸರಿನಲ್ಲಿ ಹೊಸ ಕಂಪೆನಿಯನ್ನು ಸ್ಥಾಪಿಸಿದೆ. ವಿದೇಶಿ ಬಂಡವಾಳ ಹೂಡಿಕೆಗೆ ಸಂಬಂಧ ಭಾರತ ಸರ್ಕಾರದ ನಿಯಮದಂತೆ ಈ ಕಂಪೆನಿಯಲ್ಲಿ ಶೇ.51ರಷ್ಟು ಪಾಲನ್ನು ಕ್ಯಾಟ್‌ಮರನ್‌ ಹೊಂದಿದ್ದು ಉಳಿದ ಪಾಲು ಅಮೇಜಾನ್‌ನಲ್ಲಿದೆ.

Narayana Murthy infy

ನಾರಾಯಣ ಮೂರ್ತಿ ಅವರು‌ ಇನ್ಫೋಸಿಸ್ ತೊರೆದ ಬಳಿಕ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ. ಆದರೆ ಈ ಕಂಪೆನಿಯ ಅಡಳಿತ ಮಂಡಳಿಯಲ್ಲಿ ಯಾವುದೇ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ ಎಂದು ನಾರಾಯಣ ಮೂರ್ತಿ‌ ಹೇಳಿದ್ದಾರೆ.

ಹೊಸ ಕಂಪೆನಿ ಭಾರತದ ವಿವಿಧ ನಗರಗಳಲ್ಲಿ ಕಚೇರಿ ತೆರಯಲಿದ್ದು ಸಣ್ಣ ಮತ್ತು ಮಧ್ಯಮ ಪ್ರಮಾಣದಲ್ಲಿ ಉದ್ಯಮವನ್ನು ನಡೆಸುತ್ತಿರುವವರಿಗೆ ತರಬೇತಿ ನೀಡಿ ಅವರಿಗೆ ವೆಬ್‌ಸೈಟ್‌ ಸೇರಿದಂತೆ ಇತ್ಯಾದಿ ಆನ್‌‌ಲೈನ್‌ ಟೂಲ್ಸ್‌ಗಳ ಬಗ್ಗೆ ಮಾಹಿತಿ ನೀಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+