ಅಮೆಜಾನ್ ಪೇ ಇಂಡಿಯಾ ಆದಾಯ ಶೇಕಡಾ 64ರಷ್ಟು ಏರಿಕೆ

ನವದೆಹಲಿ, ಡಿಸೆಂಬರ್ 11: ಅಮೆಜಾನ್ ಇಂಡಿಯಾದ ಡಿಜಿಟಲ್ ಅಂಗಸಂಸ್ಥೆಯಾದ ಅಮೆಜಾನ್ ಪೇ ಇಂಡಿಯಾ ಲಿಮಿಟೆಡ್ 2019-20 ಹಣಕಾಸು ವರ್ಷದಲ್ಲಿ (FY 20) ಆದಾಯವು ಶೇಕಡಾ 64ರಷ್ಟು ಏರಿಕೆಗೊಂಡಿದ್ದು 1,370 ಕೋಟಿ ರೂಪಾಯಿಗೆ ತಲುಪಿದೆ.

ಅಮೆಜಾನ್ ಪೇ ಇಂಡಿಯಾದ ನಿವ್ವಳ ನಷ್ಟವು 1,868 ಕೋಟಿಗೆ ಏರಿದ್ದು, ಹೊಸ ಗ್ರಾಹಕರ ಸಂಪಾದನೆ ಜೊತೆಗೆ ಕಂಪನಿಯು ಬೆಳವಣಿಗೆಯತ್ತ ಗಮನ ಕೊಟ್ಟಿದೆ.

ವ್ಯಾಪಾರ ಮಾಹಿತಿ ವೇದಿಕೆ ಟೋಫ್ಲರ್‌ನಿಂದ ಪಡೆದ ದಾಖಲೆಗಳ ಪ್ರಕಾರ 2018-19ರ ಹಣಕಾಸು ವರ್ಷದಲ್ಲಿ (FY 19) ಅಮೆಜಾನ್ ಪೇ ಒಟ್ಟು 834.5 ಕೋಟಿ ಆದಾಯವನ್ನು ವರದಿ ಮಾಡಿದೆ. ಆದರೆ ಅದರ ನಷ್ಟವು ಅದೇ ಆರ್ಥಿಕ ವರ್ಷದಲ್ಲಿ 1,160 ಕೋಟಿಗಳಷ್ಟಿದೆ ಎಂದು ಹೇಳಿದೆ.

Amazon Pay Revenues Rise By 64 Percent To 1370 Crore

ಹಣಕಾಸು ವರ್ಷ 2019ರ 1,995 ಕೋಟಿಗೆ ಹೋಲಿಸಿದರೆ 2020ರ ಹಣಕಾಸು ವರ್ಷದಲ್ಲಿ 3,238 ಕೋಟಿಗಳಾಗಿವೆ ಎಂದು ಹೇಳಿದೆ. ನೌಕರರ ಖರ್ಚಿನ ದೃಷ್ಟಿಯಿಂದ, ಅಮೆಜಾನ್ ಪೇ ಇಂಡಿಯಾ ಈ ಅಂತರವನ್ನು ತಗ್ಗಿಸಿದೆ. ಏಕೆಂದರೆ ಅದರ ಹಿಂದಿನ ನೌಕರರ ಸಂಭಾವನೆ ಹಿಂದಿನ ಹಣಕಾಸು ವರ್ಷದಲ್ಲಿ 143.9 ಕೋಟಿಗೆ ಹೋಲಿಸಿದರೆ ಎಫ್‌ವೈ 20 ರಲ್ಲಿ 119.4 ಕೋಟಿಗಳಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+