ಅಮೆಜಾನ್ ನಿಂದ ಒನಿಡಾ ಫೈರ್ ಟಿವಿ ಮಾರುಕಟ್ಟೆಗೆ ಎಂಟ್ರಿ

ಬೆಂಗಳೂರು, ಡಿಸೆಂಬರ್ 12: ಸ್ಮಾರ್ಟ್ ಎಲ್‍ಇಡಿ ಟಿವಿ ಶ್ರೇಣಿಯನ್ನು ಪರಿಚಯಿಸಿದ್ದು, ಇದು ಇ-ಕಾಮರ್ಸ್ ಪ್ಲಾಟ್‍ಫಾರಂಗಳಲ್ಲಿ ಆನ್‍ಲೈನ್ ಮೂಲಕ ಲಭ್ಯವಾಗಲಿದೆ. ಯುಎಸ್ ಹಾಗೂ ಕೆನಡಾದಲಿ ಲಭ್ಯವಿದ್ದ ಫೈರ್ ಟಿವಿ ಶ್ರೇಣಿ ಈಗ ಭಾರತದಲ್ಲೂ ಲಭ್ಯವಾಗಲಿದೆ.

ಇತ್ತೀಚೆಗೆ ಹೊಸ ಎಲ್‍ಇಡಿ ಉತ್ಪನ್ನ ಶ್ರೇಣಿಯು, ಮೂರು ಅವತರಣಿಕೆಗಳನ್ನು ಪರಿಚಯಿಸಲಾಗಿತ್ತು. 32 ಇಂಚು ಎಚ್‍ಡಿ ಸುಸಜ್ಜಿತ ಸ್ಮಾಟ್, 40 ಎಫ್‍ಎಚ್‍ಡಿ ಸ್ಮಾರ್ಟ್ ಅವತರಣಿಕೆಗಳು ಬಿಡುಗಡೆಯಾಗಿದ್ದು, ವಿಶೇಷ ಮಾಡೆಲ್ 50 4ಕೆ ಯುಎಚ್‍ಡಿ ಸ್ಮಾರ್ಟ್, ಫ್ಲಿಫ್‍ಕಾರ್ಟ್‍ನ ಬಿಗ್ ಬಿಲಿಯನ್ ಡೇಸ್ ನಲ್ಲೂ ಮಾರಾಟವಾಗಿವೆ.

ಯುಕೆ, ಜರ್ಮನಿ ಮತ್ತು ಆಸ್ಟ್ರೀಯಾ ದೇಶಗಳಲ್ಲಿ ಡಿಕ್ಸನ್ಸ್ ಕಾರ್ ಫೋನ್, ಮೀಡಿಯಾ ಮಾರ್ಕ್ ಸ್ಯಾಟರ್ನ್ಸ್ ಹಾಗೂ ಗ್ರುಂಡಿಗ್ ಜತೆಗೂಡಿ ಫೈರ್ ಟಿವಿ ಪರಿಚಿಯಿಸಿದೆ. ಹಾಟ್ ಸ್ಟಾರ್, ನೆಟ್ ಫ್ಲಿಕ್ಸ್, ಪ್ರೈಮ್ ವಿಡಿಯೋ ಸೇರಿದಂತೆ ಜನಪ್ರಿಯ ಬಿಲ್ಟ್ ಇನ್ ಆಪ್ ಗಳನ್ನು ಈ ಟಿವಿ ಹೊಂದಿದೆ.

 ನಿರ್ದೇಶಕ ವಿಜಯ್ ಮನಸ್ಕಾನಿ

ನಿರ್ದೇಶಕ ವಿಜಯ್ ಮನಸ್ಕಾನಿ

"ಬಾಹ್ಯ ಜಗತ್ತಿನ ಜತೆ ಸದಾ ಎಲ್ಲಿದ್ದರೂ, ಯಾವಾಗಲಾದರೂ, ಸಂಪರ್ಕದಲ್ಲಿ ಇರಲು ಬಯಸುವ ಗ್ರಾಹಕರಿಗಾಗಿ ಈ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ. ಐಜಿಓ ಭಿನ್ನ ಹಾಗೂ ಪ್ರವೃತ್ತಿಯ ಲಕ್ಷಣಗಳ ಅನುರೂಪವಾಗಿದೆ. ನೀವು ಬಯಸುವ ಮತ್ತು ಮಾಲೀಕರಾಗಬಯಸುವ ನಿರೀಕೆಯ ಉತ್ಪನ್ನಗಳನ್ನು ನಾವು ವಿನ್ಯಾಸಗೊಳಿಸಯತ್ತೇವೆ. ಬದಲಾವಣೆಯ ಅಗತ್ಯತೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಕಾರಣದಿಂದ ನಮ್ಮ ಉತ್ಪನ್ನಗಳನ್ನು ಕಲ್ಪನಾತೀತವನ್ನಾಗಿಸುತ್ತವೆ" ಎಂದು ಎಂಐಆರ್‍ಸಿ ಎಲೆಕ್ಟ್ರಾನಿಕ್ಸ್ ನ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಮನಸ್ಕಾನಿ ಹೇಳಿದರು.

 ಎಚ್‍ಡಿ ಗುಣಮಟ್ಟಕ್ಕಿಂತ ನಾಲ್ಕು ಪಟ್ಟು ಅಧಿಕ ಗುಣಮಟ್ಟ

ಎಚ್‍ಡಿ ಗುಣಮಟ್ಟಕ್ಕಿಂತ ನಾಲ್ಕು ಪಟ್ಟು ಅಧಿಕ ಗುಣಮಟ್ಟ

50 4ಕೆ ಯುಎಚ್‍ಡಿ ಸ್ಮಾರ್ಟ್, ಪ್ರಮಾಣೀಕೃತ ನೆಟ್‍ಫ್ಲಿಕ್ಸ್ ಟಿವಿಯಾಗಿದ್ದು, ಇದು ಅಮೆಝಾನ್ ಪ್ರೈಮ್ ವಿಡಿಯೊ, ಯೂಟ್ಯೂಬ್ ಮತ್ತು ಇತರ ವಿಡಿಯೊಗಳನ್ನು ಸುಲಲಿತವಾಗಿ ಪ್ರಸಾರ ಮಾಡುತ್ತವೆ. ಈ ಮಾದರಿಯಲ್ಲಿ ಇದರ ಪ್ರದರ್ಶಕ ವ್ಯವಸ್ಥೆಯು 1.07 ಶತಕೋಟಿ ಬಣ್ಣಗಳನ್ನು ಪ್ರದರ್ಶಿಸುತ್ತದೆ. 4ಕೆ ಯುಎಚ್‍ಡಿ ಅವತರಣಿಕೆಯು, 3840/ 2160 ಪಿಕ್ಸೆಲ್‍ನಲ್ಲಿ ಬರುತ್ತದೆ ಹಾಗೂ ಎಚ್‍ಡಿ ಗುಣಮಟ್ಟಕ್ಕಿಂತ ನಾಲ್ಕು ಪಟ್ಟು ಅಧಿಕ ಗುಣಮಟ್ಟವನ್ನು ಇದು ನೀಡುತ್ತದೆ.

 ಆ್ಯಂಡ್ರಾಯ್ಡ್ ಆಧಾರಿತ ಓಎಸ್ ಅನುಭವ

ಆ್ಯಂಡ್ರಾಯ್ಡ್ ಆಧಾರಿತ ಓಎಸ್ ಅನುಭವ

ಇದರಿಂದಾಗಿ ಟಿವಿಯಲ್ಲಿ ಚಲಿಸುವ ಚಿತ್ರಗಳು ನಿಜ ಜೀವನಕ್ಕೆ ಬರಲಿವೆ. 40 ಎಫ್‍ಎಚ್‍ಡಿ ಸ್ಮಾರ್ಟ್ ಮಾದರಿಯು, ವಿಶೇಷ ಪ್ಯಾಕೇಜ್‍ನಲ್ಲಿ 500 ಡಬ್ಲ್ಯು ಪಿಎಂಪಿಓ ಬೀಟ್ ಬಾಕ್ಸ್ ಅಂತರ್ಗತ ಸ್ಪೀಕರ್ ಗಳನ್ನು ಹೊಂದಿದೆ. 40 ಎಫ್‍ಎಚ್‍ಡಿ ಸ್ಮಾರ್ಟ್ ಹಾಗೂ 32 ಎಫ್‍ಎಚ್‍ಡಿ ಸ್ಮಾರ್ಟ್‍ಗಳು ಮಲ್ಟಿ ಕೋರ್ ಪ್ರೊಸೆಸರ್ ಗಳನ್ನು ಹೊಂದಿದ್ದು, ಇದು ವೆಬ್ ಬ್ರೌಸಿಂಗ್, ಮೀರಾಕಾಸ್ಟ್ ಆಯ್ಕೆ, 16.7 ದಶಲಕ್ಷ ಬಣ್ಣಗಳ ಅವಕಾಶವನ್ನು ಹೊಂದಿದೆ. ಇದರಿಂದಾಗಿ ಆ್ಯಂಡ್ರಾಯ್ಡ್ ಆಧಾರಿತ ಓಎಸ್ ಅನುಭವಕ್ಕೆ ಸಮಾನವಾದ ದೃಶ್ಯ ಅನುಭವವನ್ನು ಆಸ್ವಾದಿಸಬಹುದಾಗಿದೆ. ಇದು ಅಂತರ್ಗತವಾದ ಕ್ರೋಮ್ ಕಾಸ್ಟ್ ಮತ್ತು ಗೂಗಲ್ ಅಸಿಸ್ಟೆಂಟ್ ವ್ಯವಸ್ಥೆಯನ್ನು ಹೊಂದಿರುತ್ತದೆ.

ಅಮೆಜಾನ್ ಜೊತೆ ಒನಿಡಾ ಫೈರ್ ಟಿವಿ ವಿಶೇಷ

ಅಮೆಜಾನ್ ಜೊತೆ ಒನಿಡಾ ಫೈರ್ ಟಿವಿ ವಿಶೇಷ

ಅಮೆಜಾನ್ ಫೈರ್ ಟಿವಿ 37 ಮಿಲಿಯನ್ಸ್ ನಷ್ಟು ಬಳಕೆದಾರರನ್ನು ಹೊಂದಿದೆ. ಒನಿಡಾ ಟಿವಿ 32 ಇಂಚು (12,999 ರು) ಹಾಗೂ 43 ಇಂಚು (21,999 ರು ) ಸೈಜಿನಲ್ಲಿ ಲಭ್ಯ ಎಂದು ಎಂಐಆರ್ ಸಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಒನಿಡಾ) ವ್ಯವಹಾರ ಮುಖ್ಯಸ್ಥ ಸುನಿಲ್ ಶಂಕರ್ ಹೇಳಿದ್ದಾರೆ.

ಮೈಕ್ರೋಮ್ಯಾಕ್ಸ್, ಇಂಟೆಕ್ಸ್, ಶಿಓಮಿ, ಡೆಟೆಲ್, ವು ಅಲ್ಲದೆ ಸ್ಯಾಮ್ ಸಂಗ್, ಸೋನಿ ಹಾಗೂ ಎಲ್ಜಿ ಸಂಸ್ಥೆ ಜೊತೆ ಒನಿಡಾ ಪೈಪೋಟಿ ನಡೆಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+