ನ್ಯೂಡಲ್ಸ್ ಮಾರುಕಟ್ಟೆಗೆ ಕಾಲಿಟ್ಟ ಬಾಬಾ ರಾಮ್ ದೇವ್
ನವದೆಹಲಿ, ಸೆಪ್ಟೆಂಬರ್. 06: ಮ್ಯಾಗಿ ನ್ಯೂಡಲ್ಸ್ ನಲ್ಲಿ ಹಾನಿಕಾರ ಅಂಶ ಇದೆ, ಇಲ್ಲಾ ಎಂಬ ಚರ್ಚೆಗಳ ನಡುವೆಯೇ ಯೋಗಗುರು ಬಾಬಾ ರಾಮ್ ದೇವ್ ಮೊದಲೇ ಹೇಳಿದಂತೆ ಸ್ವದೇಶಿ ನ್ಯೂಡಲ್ಸ್ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
ಗೋಧಿಯಿಂದ ತಯಾರಿಸಿದ ಪತಂಜಲಿ "ಆಟಾ ನೂಡಲ್ಸ್'ಅನ್ನು ಬಾಬಾ ರಾಮ್‌ದೇವ್ ಶನಿವಾರ ಹರಿದ್ವಾರದಲ್ಲಿ ಬಿಡುಗಡೆ ಮಾಡಿದ್ದಾರೆ. ಕೆಲ ದಿನಗಳಲ್ಲೇ ನ್ಯೂಡಲ್ಸ್ ಎಲ್ಲರ ಕೈ ಸೇರಲಿದೆ. [ನಿಮ್ಮ ಮನೆಯಲ್ಲಿ ಮತ್ತೆ ಎರಡು ನಿಮಿಷಕ್ಕೆ ಅಡುಗೆ ಸಿದ್ಧ!]

ನ್ಯೂಡಲ್ಸ್ ತಯಾರಿಕೆಗೆ ಮೈದಾ ಹಿಟ್ಟನ್ನು ಬಳಸಿಲ್ಲ. ಸಂಪೂರ್ಣ ಸ್ವದೇಶಿ ವಸ್ತುಗಳನ್ನೇ ಬಳಸಿ ತಯಾರು ಮಾಡಲಾಗಿದ್ದು ಆರೋಗ್ಯ ವರ್ಧಕವಾಗಿದೆ. ಮಕ್ಕಳ ಮೇಲೆಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಆಹಾರ ಭದ್ರತಾ ಮಂಡಳಿಯಿಂದಲೂ ರಾಮ್ ದೇವ್ ಪರವಾನಗಿ ಪಡೆದುಕೊಂಡಿದ್ದಾರೆ. ಈಗಾಗಲೇ ಪತಂಜಲಿಯ ಅನೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದ್ದು ಜನರ ಮೆಚ್ಚುಗೆ ಗಳಿಸಿವೆ.[ರುಚಿಕರ ಮ್ಯಾಗಿ ತಿಂದ ಎಷ್ಟು ಜನರು ಖಾಯಿಲೆ ಬಿದ್ದಿದ್ದಾರೆ?]
ಸಾಮಾಜಿಕ ಜಾಲತಾಣಗಳನ್ನು ಪತಂಜಲಿ ನ್ಯೂಡಲ್ಸ್ ಬಗ್ಗೆ ಚರ್ಚೆ ಆರಂಭವಾಗಿದ್ದು ಜನರು ತಮ್ಮದೇ ಆದ ಅಭಿಪ್ರಾಯವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.












Click it and Unblock the Notifications