Gold Price on Akshaya Tritiya: ಅಕ್ಷಯ ತೃತೀಯದಂದು ಚಿನ್ನದ ಬೆಲೆ ಹೇಗಿರುತ್ತೆ.. ಇಂದೇ ತಿಳಿದು ಹಣ ಜೋಡಿಸಿಕೊಳ್ಳಿ..
ಅಕ್ಷಯ ತೃತೀಯ ಹಿಂದೂಗಳು ಬಹಳ ಉತ್ಸಾಹದಿಂದ ಆಚರಿಸುವ ಹಬ್ಬಗಳಲ್ಲಿ ಒಂದಾಗಿದೆ. "ಅಕ್ಷಯ" ಎಂದರೆ ಶಾಶ್ವತ. ಈ ಶುಭ ದಿನದಂದು ಚಿನ್ನ, ಬೆಳ್ಳಿ ಮುಂತಾದ ಲೋಹಗಳನ್ನು ಖರೀದಿಸುವುದು ಮತ್ತು ಇತರ ದುಬಾರಿ ವಸ್ತುಗಳನ್ನು ಖರೀದಿಸುವುದು ವಾಡಿಕೆ.
ಈ ದಿನ ಖರೀದಿಸಿದ ಸಾಮಾಗ್ರಿ ಶಾಶ್ವತ ಸಂಪತ್ತನ್ನು ತಂದುಕೊಡುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಹೀಗಾಗಿ ಅಕ್ಷಯ ತೃತೀಯ ದಿನದಂದು ಕೆಲವರು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಿದರೆ ಇನ್ನೂ ಕೆಲವರು ಮನೆ, ಭೂಮಿ, ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಖರೀದಿಸುತ್ತಾರೆ. ಆದರೆ ಈ ಬಾರಿ ಅಕ್ಷಯ ತೃತೀಯದಂದು ಚಿನ್ನದ ಬೆಲೆ ಹೇಗಿರಲಿದೆ ಎಂದು ತಿಳಿಯುವ ಮುನ್ನ ಇಂದು ಬೆಂಗಳೂರು ಸೇರಿದಂತೆ ದೇಶದಲ್ಲಿ ಚಿನ್ನದ ಬೆಲೆ ಹೇಗಿದೆ ಎಂದು ತಿಳಿಯೋಣ.

ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 65,550 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 71,510 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 65,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,340 ರೂಪಾಯಿಯಲ್ಲಿ ಇದೆ. ಹಾಗಾದರೆ ಚಿನ್ನ ಖರೀದಿಗೆ ಶುಭ ಸಮಯ ಯಾವುದು?
ಅಕ್ಷಯ ತೃತೀಯ ಶುಭ ಮುಹೂರ್ತ:-
ಈ ವರ್ಷ ಅಕ್ಷಯ ತೃತೀಯವನ್ನು ಮೇ 10 ರಂದು ಆಚರಿಸಲಾಗುತ್ತದೆ. ಬೆಳಿಗ್ಗೆ 4:17 ಕ್ಕೆ ಶುಭ ಮುಹೂರ್ತ ಪ್ರಾರಂಭವಾಗುತ್ತದೆ ಮತ್ತು ಮೇ 11 ರಂದು 2:50 ಕ್ಕೆ ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ ನೀವು ಚಿನ್ನ, ಬೆಳ್ಳಿ, ಮನೆ, ಭೂಮಿ, ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸಬಹುದು.
ಪುರಾಣದ ಕಥೆಗಳ ಪ್ರಕಾರ ಅಕ್ಷಯ ತೃತೀಯವನ್ನು ವಿಷ್ಣುವಿನ ಅವತಾರಗಳಲ್ಲಿ ಒಂದಾದ ಪರಶುರಾಮನ ಜನ್ಮದಿನವಾಗಿಯೂ ಆಚರಿಸಲಾಗುತ್ತದೆ. ಈ ದಿನ ಭಕ್ತರು ಮುಂಜಾನೆಯೇ ಎದ್ದು ಸ್ನಾನ ಮಾಡಿ ಹಳದಿ ಬಟ್ಟೆಯನ್ನು ಧರಿಸುತ್ತಾರೆ. ಹಿಂದೂ ಧರ್ಮದಲ್ಲಿ ಹಳದಿ ಬಣ್ಣವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಅಷ್ಟಕ್ಕೂ ಅಕ್ಷಯ ತೃತೀಯದಂದು ದಾನ ಮಾಡುವುದು ಯಾಕೆ?

ಅಕ್ಷಯ ತೃತೀಯಂದು ದಾನ:-
ಅಕ್ಷಯ ತೃತಿಯ ದಿನದಂದು, ಹಣ ಮತ್ತು ಸಂಪತ್ತಿನ ಅಧಿಪತಿ ಕುಬೇರನು ಶಿವ ಮತ್ತು ಬ್ರಹ್ಮನ ಆಶೀರ್ವಾದದಿಂದ ಅಲಕಾಪುರಿ ಎಂಬ ಹೊಸ ರಾಜ್ಯವನ್ನು ಸಂಪಾದಿಸಿದನೆಂದು ಹೇಳಲಾಗುತ್ತದೆ. ಆದ್ದರಿಂದ ಈ ದಿನ ಕುಬೇರನನ್ನು ಪೂಜಿಸುವುದು ಮತ್ತು ಚಿನ್ನಾಭರಣಗಳು ಹಾಗೂ ಭೂಮಿ ಮುಂತಾದ ಆಸ್ತಿಯನ್ನು ಖರೀದಿಸುವುದು ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಭಕ್ತರು ನಂಬುತ್ತಾರೆ.
ಅಕ್ಷಯ ತೃತಿಯ ದಿನದಂದು ಬಡವರಿಗೆ ದಾನ ಮಾಡುವುದು ಮತ್ತು ಹೊಸ ವ್ಯವಹಾರವನ್ನು ಪ್ರಾರಂಭಿಸುವುದು, ಮನೆ ಅಥವಾ ಭೂಮಿಯನ್ನು ಖರೀದಿಸುವುದು ಮುಂತಾದ ಶುಭ ಕಾರ್ಯಗಳನ್ನು ಪ್ರಾರಂಭಿಸುವುದು ಮಂಗಳಕರವೆಂದು ನಂಬಲಾಗುತ್ತದೆ. ಹಾಗಾದರೆ ಅಕ್ಷಯ ತೃತೀಯದಂದು ಚಿನ್ನದ ಬೆಲೆ ಹೇಗಿರುತ್ತೆ ಎಂದು ತಿಳಿಯೋಣ.

ಅಕ್ಷಯ ತೃತೀಯದಂದು ಚಿನ್ನದ ಬೆಲೆ ಹೇಗಿರುತ್ತೆ?
ಮೇ 10 ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ದಿನ ಚಿನ್ನ ಬೆಳ್ಳಿ ಸಾಮಾಗ್ರಿಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಹೀಗಾಗಿ ಗ್ರಾಹಕರನ್ನು ಸೆಳೆಯಲು ಬಂಗಾರದ ಅಂಗಡಿಗಳು ಆಫರ್ ನೀಡುವ ಸಾಧ್ಯತೆ ಇದೆ. ಅದರಲ್ಲೂ ವಿಶೇಷವಾಗಿ ಚಿನ್ನವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಸಾಧ್ಯತೆ ಇದೆ.
ಆದರೆ ಚಿನ್ನದ ಬೆಲೆದ ಬೆಲೆಯಲ್ಲಿ ಮೇ 1ರಿಂದಲೇ ಏರಿಳಿತ ಕಂಡು ಬರುತ್ತಿದೆ. ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದ್ದು ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 65,550 ರುಪಾಯಿ ಆಗಿದೆ. ಬೆಳ್ಳಿ ಇನ್ನಷ್ಟು ಅಗ್ಗವಾಗಿದ್ದು 100 ಗ್ರಾಮ್ಗೆ 8,340 ರೂಪಾಯಿಯಲ್ಲಿ ಇದೆ. ಹೀಗಾಗಿ ಅಕ್ಷಯ ತೃತೀಯಕ್ಕೆ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗುವ ನಿರೀಕ್ಷೆ ಇದೆ.












Click it and Unblock the Notifications