ಜಿಯೋ ಜತೆ ಪೈಪೋಟಿ, 99 ರು ಯೋಜನೆ ಬದಲಾಯಿಸಿದ ಏರ್ ಟೆಲ್

ಬೆಂಗಳೂರು, ಜೂನ್ 18: ರಿಲಯನ್ಸ್ ಜಿಯೋ ಜತೆ ಪೈಪೋಟಿಗೆ ಬಿದ್ದಿರುವ ಭಾರ್ತಿ ಏರ್ ಟೆಲ್ ಸಂಸ್ಥೆ ತನ್ನ ಜನಪ್ರಿಯ ಪ್ರೀಪೇಯ್ಡ್ 99 ರು ಯೋಜನೆ ಬದಲಾಯಿಸಿದೆ.

28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಯೋಜನೆಯಲ್ಲಿ ಇನ್ಮುಂದೆ ಗ್ರಾಹಕರಿಗೆ 2 ಜಿಬಿ ಡೇಟಾ ಸಿಗಲಿದೆ. ಈ ಹಿಂದೆ ಗ್ರಾಹಕರಿಗೆ 1 ಜಿಬಿ ಹೈ ಸ್ಪೀಡ್ ಡೇಟಾ ಲಭ್ಯವಿತ್ತು.ಹೆಚ್ಚುವರಿ ಡೇಟಾ ಜೊತೆಗೆ ಅನಿಯಮಿತ ಕಾಲಿಂಗ್ ಜೊತೆ ಉಚಿತ ರೋಮಿಂಗ್ ಸೌಲಭ್ಯ ಪಡೆಯಬಹುದಾಗಿದೆ. 99 ರೂಪಾಯಿ ರಿಚಾರ್ಜ್ ಮಾಡಿದ ಗ್ರಾಹಕರಿಗೆ ಪ್ರತಿ ದಿನ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ.

Airtel upgrades Rs 99 prepaid recharge plan takes on Jio

ಸದ್ಯ ಈ ಹೊಸ ಸೌಲಭ್ಯ ಆಯ್ದ ಗ್ರಾಹಕರಿಗೆ ಸಿಗುತ್ತಿದ್ದು, ಶೀಘ್ರವೇ ಎಲ್ಲರಿಗೂ ಲಭ್ಯವಾಗಲಿದೆ. ಏರ್ ಟೆಲ್ ನ ಹೊಸ ಸೌಲಭ್ಯಕ್ಕೆ ಹೋಲಿಸಿದರೆ, ರಿಲಯನ್ಸ್ ಜಿಯೋ 99 ರೂಪಾಯಿ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿ ದಿನ 100 ಎಸ್ಎಂಎಸ್ ಸಿಗುವುದಿಲ್ಲ. ಜಿಯೋ ಕೂಡಾ 28 ದಿನಗಳ ವ್ಯಾಲಿಡಿಟಿ ನೀಡುತ್ತಿದ್ದರೂ ಕೇವಲ 300 ಎಸ್ಎಂಎಸ್ ಕಳಿಸಬಹುದಾಗಿದೆ. ಜಿಯೋ ಕೂಡಾ ಈ ಯೋಜನೆಯನ್ನು ಕೆಲ ದಿನಗಳ ಹಿಂದಷ್ಟೇ ಬದಲಾವಣೆ ಮಾಡಿತ್ತು. ಇನ್ನು ಎಲ್ಲ ಗ್ರಾಹಕರಿಗೆ ಎಲ್ಲ ಪ್ಲಾನ್ ನಲ್ಲಿ 1.5 ಜಿಬಿ ಡೇಟಾ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+