ಏರ್ ಟೆಲ್ ಪ್ರೀ ಪೇಯ್ಡ್ ಇಂಟರ್ನೆಟ್ ಪ್ಯಾಕ್ ಬೆಲೆ ಏರಿಕೆ

ನವದೆಹಲಿ, ಜೂ.07: ಆನ್ ಲೈನ್ ಮೂಲಕ ಇಂಟರ್ನೆಟ್ ಪ್ಯಾಕೇಜ್ ರೀಚಾರ್ಜ್ ಮಾಡಿಕೊಳ್ಳುವ ಭಾರ್ತಿ ಏರ್ ಟೆಲ್ ಗ್ರಾಹಕರಿಗೆ ಆಘಾತಕಾರಿ ಸುದ್ದಿ ಇಲ್ಲಿದೆ. ಏರ್ ಟೆಲ್ ತನ್ನ ಪ್ರೀಪೇಯ್ಡ್ ಡಾಟಾ ಪ್ಯಾಕ್ ಬೆಲೆಯನ್ನು ದೇಶದೆಲ್ಲೆಡೆ ಜಾರಿಗೆ ಬರುವಂತೆ ಏರಿಕೆ ಮಾಡಿದೆ.

ಆನ್ ಲೈನ್ ಮೂಲಕ ಇಂಟರ್ನೆಟ್ ಡಾಟಾ ಪ್ಯಾಕೇಜ್ ಹಾಕಿಸಿಕೊಳ್ಳುವ ಗ್ರಾಹಕರಿಗೆ ನೀಡುತ್ತಿದ್ದ ರಿಯಾಯತಿಯನ್ನು ಏರ್ ಟೆಲ್ ಹಿಂಪಡೆದುಕೊಂಡಿದೆ. ಹೀಗಾಗಿ ರೀಟೈಲ್ ಮಳಿಗೆಗಳಲ್ಲಿ ಸಿಗುವ ಇಂಟರ್ನೆಟ್ ಪ್ಯಾಕೇಜ್ ಗೂ ಆನ್ ಲೈನ್ ಪ್ಯಾಕೇಜ್ ಗೂ ಅಂಥ ವ್ಯತ್ಯಾಸ ಕಂಡು ಬರುವುದಿಲ್ಲ ಎಂದು ಏರ್ ಟೆಲ್ ವಕ್ತಾರರು ಹೇಳಿದ್ದಾರೆ.

Airtel’s pre-paid online data packs become costlier

ಸರಿ ಸುಮಾರು 10 ಪ್ಲ್ಯಾನ್ ಗಳ ಬೆಲೆ ಏರಿಕೆಯಾಗಿದೆ. 2 ಜಿಬಿ 2ಜಿ ಡಾಟಾ 199 ರು ನಂತೆ 30 ದಿನಕ್ಕೆ ಲಭ್ಯವಿತ್ತು, ಇದು ಆನ್ ಲೈನ್ ನಲ್ಲೇ ರೀಚಾರ್ಚ್ ಮಾಡಬಹುದಿತ್ತು. ಈಗ ಇದು 1.25 ಜಿಬಿ ಡಾಟಾ 28 ದಿನಕ್ಕೆ ಎಂದು ಬದಲಾಯಿಸಲಾಗಿದೆ.

ಇದೇ ರೀತಿ 3 ಜಿ ಡಾಟಾ 1 ಜಿಬಿ ಸಾಮರ್ಥ್ಯಕ್ಕೆ 28 ದಿನಗಳ ವ್ಯಾಲಿಡಿಟಿ ಇತ್ತು ಇದಕ್ಕೆ 255 ರು ನೀಡಬೇಕಾಗುತ್ತದೆ. ಈ ಮುಂಚೆ 249 ರು ಗೆ 30ದಿನಗಳ ಅವಧಿ ಸಿಗುತ್ತಿತ್ತು.

ಕಳೆದ ವಾರ ಎನ್ ಸಿಆರ್ ಟೆಲಿಕಾಂ ಪ್ರದೇಶದಲ್ಲಿ ಐಡಿಯಾ ಸೆಲ್ಯುಲಾರ್ ಪ್ರೀಪೇಯ್ಡ್ ದರ ಶೇ 100ರಷ್ಟು ಏರಿಕೆಯಾಗಿತ್ತು. ಸೇವಾ ತೆರಿಗೆ ಏರಿಕೆಯಾಗಿರುವುದರಿಂದ ಜೂ.1ರಿಂದ ಪೋಸ್ಟ್ ಪೇಯ್ಡ್ ಗ್ರಾಹಕರ ತಿಂಗಳ ಬಿಲ್ ಮೊತ್ತ ಕೂಡಾ ಏರಿಕೆ ಕಂಡಿದೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+