ಏರ್ಟೆಲ್ ನಿಂದ 6 ಹೊಸ ಕಡಿಮೆ ದರದ ಪ್ರೀಪೇಯ್ಡ್ ಯೋಜನೆಗಳು

ಬೆಂಗಳೂರು, ಸೆಪ್ಟೆಂಬರ್ 28: ಟೆಲಿಕಾಂ ಕ್ಷೇತ್ರದ ಎರಡನೇ ಅತಿದೊಡ್ಡ ಸಂಸ್ಥೆ ಏರ್ಟೆಲ್ ತನ್ನ ಗ್ರಾಹಕರಿಗಾಗಿ 6 ಹೊಸ ಎಂಟ್ರಿ ಲೆವಲ್ ಪ್ಲ್ಯಾನ್ ಗಳನ್ನು ಪ್ರಕಟಿಸಿದೆ. ಈ ಮೂಲಕ ಅತ್ಯಂತ ಕಡಿಮೆ ಶುಲ್ಕದ ಯೋಜನೆಗಳ ವಿಭಾಗದಲ್ಲಿ ಜಿಯೋ, ವೋಡಾಫೋನ್ ಜತೆ ನೇರ ಪೈಪೋಟಿಗಿಳಿದಿದೆ.

ಏರ್ಟೆಲ್ ವಿಶೇಷ ಯೋಜನೆ 25 ರೂಪಾಯಿಯಿಂದ ಶುರುವಾಗಲಿದ್ದು, 245 ರೂಪಾಯಿಯವರೆಗೆ ಇದೆ. ಈ ಎಲ್ಲ ಯೋಜನೆಯಲ್ಲಿ ಟಾಕ್ ಟೈಮ್ ಜೊತೆ ಡೇಟಾ ಗ್ರಾಹಕರಿಗೆ ಸಿಗಲಿದೆ. ಇದಲ್ಲದೆ, 35 ರೂಪಾಯಿ, 65 ರೂಪಾಯಿ, 95 ರೂಪಾಯಿ ರೀಚಾರ್ಜ್ ಮಾಡಬಹುದಾಗಿದ್ದು, ಈ ಯೋಜನೆಗಳ ವ್ಯಾಲಿಡಿಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ.

ಇದಲ್ಲದೆ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ 199, 399, 448 ಹಾಗೂ 509 ರೀಚಾರ್ಜ್ ಪ್ಯಾಕ್ ಗಳನ್ನು ಏರ್ ಟೆಲ್ ಹೊಂದಿದೆ. ಬಹುತೇಕ ಎಲ್ಲವೂ 28 ದಿನಗಳ ವ್ಯಾಲಿಡಿಟಿ ಹೊಂದಿವೆ. ಉಚಿತ ಅನಿಯಮಿತ ಕರೆ, ದಿನಕ್ಕೆ 100 ಎಸ್ಎಂಎಸ್ , ದಿನಕ್ಕೆ 1.48 ಜಿಬಿ ಡೇಟಾ ಸಿಗಲಿದೆ. 399 ರು, 448 ರು ಹಾಗೂ 509 ರು ಯೋಜನೆಯಲ್ಲಿ 70, 82 ಹಾಗೂ 90 ದಿನಗಳ ವ್ಯಾಲಿಡಿಟಿ ಸಿಗಲಿದೆ.

25 ಹಾಗೂ 35 ರುಪಾಯಿ ಯೋಜನೆ

25 ಹಾಗೂ 35 ರುಪಾಯಿ ಯೋಜನೆ

ಏರ್ಟೆಲ್ ನ 25 ರೂಪಾಯಿ ಪ್ಲಾನ್ 18.69 ರೂಪಾಯಿಗಳ ಟಾಕ್ ಟೈಂ ನೀಡುತ್ತಿದೆ. ಇದರ ಜೊತೆ 10 ಎಂಬಿ ಡೇಟಾ ನೀಡುತ್ತಿದೆ. ಈ ಯೋಜನೆಯ ವ್ಯಾಲಿಡಿಟಿ 28 ದಿನ ತನಕ ಇರಲಿದೆ.

35 ರೂಪಾಯಿ ಪ್ಲಾನ್: ಇದರ ವ್ಯಾಲಿಡಿಟಿ ಕೂಡಾ 28 ದಿನಗಳ ತನಕ ಇದ್ದು, 26.66 ರೂಪಾಯಿಗಳ ಟಾಕ್ ಟೈಂ ಸಿಗಲಿದೆ. 60 ಪೈಸೆ ಪ್ರತಿ ನಿಮಿಷದ ದರದಲ್ಲಿ ಗ್ರಾಹಕರು ಕರೆ ಮಾಡಬಹುದಾಗಿದೆ. ಇದಲ್ಲದೆ, ಬಳಕೆದಾರರಿಗೆ ಈ ಯೋಜನೆಯಲ್ಲಿ 100 ಎಂಬಿ ಡೇಟಾ ಪಡೆಯಲಿದ್ದಾರೆ.

66 ಹಾಗೂ 95 ರು ಯೋಜನೆ

66 ಹಾಗೂ 95 ರು ಯೋಜನೆ

66 ರೂಪಾಯಿ ಪ್ಲಾನ್ : ಈ ಯೋಜನೆಯಲ್ಲಿ ಗ್ರಾಹಕರಿಗೆ 200 ಎಂಬಿ ಡೇಟಾ ಲಭ್ಯವಾಗಲಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ ನಲ್ಲಿ ಕೂಡಾ 60 ಪೈಸೆ ಪ್ರತಿ ನಿಮಿಷದಂತೆ ಕರೆ ಮಾಡಬಹುದಾಗಿದೆ. ಫುಲ್ ಟಾಕ್ ಟೈಂ ಸಿಗುವುದು ವಿಶೇಷ.

95 ರೂಪಾಯಿ ಪ್ಲಾನ್ : ಇದು ಕೂಡಾ 28 ದಿನಗಳ ಸಿಂಧುತ್ವ ಹೊಂದಿದೆ. 500 ಎಂಬಿ ಡೇಟಾ ಜೊತೆಗೆ 30 ಪೈಸೆ ಪ್ರತಿ ನಿಮಿಷದಂತೆ ಕರೆ ಸೌಲಭ್ಯ ಸಿಗಲಿದೆ.

145 ಹಾಗೂ 245 ರೂಪಾಯಿ ಪ್ಲಾನ್ ಯೋಜನೆ

145 ಹಾಗೂ 245 ರೂಪಾಯಿ ಪ್ಲಾನ್ ಯೋಜನೆ

ಇದರ ಜೊತೆ 145 ಹಾಗೂ 245 ರೂಪಾಯಿ ಪ್ಲಾನ್ ಕಂಪನಿ ಬಿಡುಗಡೆ ಮಾಡಿದೆ. 145 ರೂಪಾಯಿ ಪ್ಲಾನ್ ನಲ್ಲಿ 1 ಜಿಬಿ ಡೇಟಾ ಜೊತೆ 30 ಪೈಸೆ ಪ್ರತಿ ನಿಮಿಷದಂತೆ ಕರೆ ಸಿಗಲಿದೆ.

245 ರೂಪಾಯಿ ಪ್ಲಾನ್ ನಲ್ಲಿ 2 ಜಿಬಿ ಡೇಟಾ ಹಾಗೂ 30 ಪೈಸೆ ಪ್ರತಿ ನಿಮಿಷದಂತೆ ಕರೆ ಸೌಲಭ್ಯ ಸಿಗಲಿದೆ. ಇದರ ವ್ಯಾಲಿಡಿಟಿ 84 ದಿನಗಳಾಗಿವೆ.

ಏರ್ ಟೆಲ್ ನ 47ರುಪಾಯಿ ಯೋಜನೆ

ಏರ್ ಟೆಲ್ ನ 47ರುಪಾಯಿ ಯೋಜನೆ

ಏರ್ ಟೆಲ್ ನ 47ರುಪಾಯಿ ಯೋಜನೆಯು 28 ದಿನಗಳ ಕಾಲ ವ್ಯಾಲಿಡಿಟಿ ಹೊಂದಿದೆ. 150 ನಿಮಿಷಗಳ ಸ್ಥಳೀಯ, ಎಸ್ಟಿಡಿ ಹಾಗೂ ರಾಷ್ಟ್ರೀಯ ರೋಮಿಂಗ್ ಕಾಲ್ಸ್ ಲಭ್ಯವಿದೆ. 50 ಎಸ್ ಎಂ ಎಸ್(ಸ್ಥಳೀಯ ಪ್ಲಸ್ ಎಸ್ಟಿಡಿ) ಹಾಗೂ 500 ಎಂಬಿ 2ಜಿ/3ಜಿ /4ಜಿ ಡೇಟಾ ಸಿಗಲಿದೆ

ವೋಡಾಫೋನ್ ನ 47ರುಪಾಯಿ ಯೋಜನೆಯಲ್ಲಿ 125 ನಿಮಿಷಗಳ ಸ್ಥಳೀಯ ಪ್ಲಸ್ ಎಸ್ಟಿಡಿ ಕಾಲ್ಸ್ ಉಚಿತವಾಗಿ ಸಿಗಲಿದೆ. 500 ಎಂಬಿ 2ಜಿ/3ಜಿ /4ಜಿ ಡೇಟಾ ಲಭ್ಯವಿದೆ. ಇದು ಕೂಡಾ 28 ದಿನಗಳ ವ್ಯಾಲಿಡಿಟಿ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+