ಟಾಟಾ ನಂತರ ಮಹೀಂದ್ರಾ ವಾಹನಗಳ ಬೆಲೆಯಲ್ಲಿ ಭಾರಿ ಏರಿಕೆ
ಬೆಂಗಳೂರು, ಜುಲೈ 31: ಆಗಸ್ಟ್ ತಿಂಗಳಿನಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಸಂಸ್ಥೆಯ ವಾಹನ ಖರೀದಿಸಲು ಯೋಜನೆ ಹಾಕಿಕೊಂಡಿದ್ದರೆ, ನಿಮಗಾಗಿ ಕಹಿ ಸುದ್ದಿ ಇಲ್ಲಿದೆ. ಟಾಟಾ ಮೋಟರ್ಸ್ ನಂತರ ಮಹೀಂದ್ರಾ ತನ್ನ ಯುಟಿಲಿಟಿ ವಾಹನಗಳ ಬೆಲೆಗಳನ್ನು ಕನಿಷ್ಟ 30,000 ರು ನಷ್ಟು ಏರಿಕೆ ಮಾಡುತ್ತಿದೆ.
ಸರಕು ಬೆಲೆಗಳ ಹೆಚ್ಚಳದ ಕಾರಣದಿಂದ ವಾಹನದ ಬೆಲೆ ಏರಿಕೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ವಾಹನದ ಬೆಲೆಯನ್ನುಆಗಸ್ಟ್ ತಿಂಗಳಿನಿಂದ ಶೇಕಡಾ 2 ರಷ್ಟು ಹೆಚ್ಚಿಸಲಾಗುತ್ತದೆ ಎಂದು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಚೇರ್ಮನ್ ರಾಜನ್ ಹೇಳಿದ್ದಾರೆ.

ಮಹೀಂದ್ರಾ ಸಂಸ್ಥೆಯ ಎಕ್ಸ್ ಯುವಿ 500,ಸ್ಕಾರ್ಪಿಯೋ, ಟಿಯುವಿ 100, ಕೆಯುವಿ 100 ವಾಹನವನ್ನು ಮಾರಾಟ ಮಾಡುತ್ತದೆ.
ಜುಲೈ ತಿಂಗಳಿನಲ್ಲಿ ಟಾಟಾ ಮೋಟರ್ಸ್ ಕೂಡಾ ತನ್ನ ವಾಹನಗಳ ಮೇಲಿನ ಬೆಲೆಯನ್ನು ಶೇ 2.2ರಷ್ಟು ಏರಿಕೆ ಮಾಡಿದ್ದು, ಆಗಸ್ಟ್ ತಿಂಗಳಿನಿಂದ ಜಾರಿಗೆ ಬರಲಿದೆ.
ಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ವಾಹನಗಳ ಮಾರಾಟದಲ್ಲಿ ಶೇಕಡಾ 26ರಷ್ಟು ಹೆಚ್ಚಳ ಕಂಡು ಬಂದಿದೆ. ಕಳೆದ ತಿಂಗಳು 45,155 ವಾಹನ ಮಾರಾಟವಾಗಿದೆ ಎಂದು ಕಂಪನಿ ಹೇಳಿದೆ. ಕಳೆದ ಜೂನ್ ತಿಂಗಳಿನಲ್ಲಿ 35,759 ವಾಹನ ಮಾರಾಟವಾಗಿದೆ.(ಪಿಟಿಐ)












Click it and Unblock the Notifications