Gold and Silver Price: ಚಿನ್ನದ ಬಳಿಕ ಬೆಳ್ಳಿ ಬೆಲೆ ಕೂಡ ಇಳಿಕೆ
ಭಾರತ ಚಿನ್ನ, ಬೆಳ್ಳಿ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಮುಂದುವರೆದಿದೆ. ಕಳೆದ ಕೆಲವು ತಿಂಗಳಿನಿಂದ ಸತತವಾಗಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ನಿಧಾನವಾಗಿ ಕುಸಿತ ಕಾಣುತ್ತಿದೆ.
ವಾರದ ಮೊದಲ ದಿನವೇ ಚಿನ್ನ, ಬೆಳ್ಳಿ ಬೆಲೆಯಲ್ಲಿ ಕುಸಿತವಾಗಿರುವುದು ಆಭರಣ ಪ್ರಿಯರಿಗೆ ಖುಷಿಯ ವಿಚಾರವಾಗಿದೆ. ಭಾನುವಾರ ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹ 6,650 ಇದ್ದರೆ ಸೋಮವಾರ ಗ್ರಾಂ ಚಿನ್ನದ ಬೆಲೆ 40 ರೂಪಾಯಿ ಇಳಿಕೆಯಾಗಿ ₹6,610 ರಲ್ಲಿ ಕೊನೆಗೊಂಡಿದೆ.

100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹4400 ಕಡಿಮೆಯಾಗಿದೆ. ಭಾನುವಾರ ₹ 7,25,500 ಇದ್ದ ಚಿನ್ನದ ಬೆಲೆ ಸೋಮವಾರ 7,21,100 ರೂಪಾಯಿಗೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.
ಬೆಳ್ಳಿ ಬೆಲೆ ಕೂಡ ಕುಸಿತ
ಶನಿವಾರ ಒಂದೇ ದಿನ ₹2000 ಕುಸಿತ ಕಂಡಿದ್ದ ಬೆಳ್ಳಿ ಬೆಲೆ, ಸೋಮವಾರ ಅಲ್ಪ ಕುಸಿತ ಕಂಡಿದೆ. ಭಾನುವಾರ ₹ 93,500 ಇದ್ದ ಒಂದು ಕೆಜಿ ಬೆಳ್ಳಿ ಬೆಲೆ ₹700 ಕುಸಿತ ಕಂಡಿದ್ದು, ₹ 92,800 ರಲ್ಲಿ ಕೊನೆಗೊಂಡಿದೆ. ಸೋಮವಾರ ಚೆನ್ನೈನಲ್ಲಿ ಬೆಳ್ಳಿ ಬೆಲೆ ₹ 97,300 ಇದ್ದರೆ, ಮುಂಬೈನಲ್ಲಿ ₹ 92,800 ಆಗಿತ್ತು. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹ 92,900 ಆಗಿದೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿತ?
ಚಿನ್ನ & ಬೆಳ್ಳಿ ದರ ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ. ಆದರೆ ದೊಡ್ಡ ಪ್ರಮಾಣದಲ್ಲಿ ದರ ಕುಸಿಯುವುದು ಅನುಮಾನವಾಗಿದೆ. ಚಿನ್ನ ಬೆಳ್ಳಿ ಬೆಲೆಗಳ ಏರಿಳಿತ ಹಲವು ಅಂಶಗಳನ್ನು ಅವಲಂಬಿಸಿದೆ. ಷೇರು ಮಾರುಕಟ್ಟೆ ಚಿನ್ನ ಬೆಳ್ಳಿ ಬೆಲೆ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.












Click it and Unblock the Notifications