ಸುಮಾರು 842 ಕೋಟಿ ರು ಮೌಲ್ಯದ ಷೇರು ಮಾರಿದ ಬ್ಯಾಂಕ್ ಎಂಡಿ

ಮುಂಬೈ, ಜುಲೈ 26: ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ಪುರಿ ಅವರು ತಮ್ಮ ಪಾಲಿನ ಶೇ 95 ರಷ್ಟು ಷೇರುಗಳನ್ನು ಭಾರಿ ಬೆಲೆಗೆ ಮಾರಿದ್ದಾರೆ.

ಕಳೆದ ಒಂದು ವಾರದಿಂದ ನಡೆದ ಈ ಪ್ರಕ್ರಿಯೆಯಲ್ಲಿ ಸುಮಾರು 74.2 ಲಕ್ಷಗಳನ್ನು ಸುಮಾರು 842.87 ಕೋಟಿ ರು ಗಳಿಗೆ ಮಾರಾಟ ಮಾಡಲಾಗಿದೆ. ಕೊರೊನಾವೈರಸ್ ನಿಂದಾಗಿ ಬ್ಯಾಂಕಿಂಗ್ ಕ್ಷೇತ್ರಕ್ಕೂ ಆರ್ಥಿಕ ಹೊಡೆತ ಬಿದ್ದಿತ್ತು. ಆದರೆ, ಚೀನಾದ ಬ್ಯಾಂಕ್ ಹೂಡಿಕೆ ಪರಿಣಾಮ ಎಚ್ ಡಿ ಎಫ್ ಸಿ ಕೊಂಚ ಚೇತರಿಕೆ ಕಂಡಿತ್ತು.

ಆದಿತ್ಯ ಪುರಿ ಅವರು ಇನ್ನೇನು ತಮ್ಮ ಸ್ಥಾನದಿಂದ ಕೆಳಗಿಳಿದು ನಿವೃತ್ತಿ ಪ್ರಕಟಿಸುತ್ತಾರೆ ಎನ್ನುವಾಗಲೇ ಈ ರೀತಿ ಬೆಳವಣಿಗೆ ಕಂಡು ಬಂದಿದೆ. 1994ರಿಂದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಅವರ ಉತ್ತರಾಧಿಕಾರಿ ನೇಮಕಾತಿ ಕುರಿತಂತೆ 6 ಮಂದಿ ಆಯ್ಕೆ ಸಮಿತಿಯನ್ನು ರೂಪಿಸಲಾಗಿದೆ.

Aditya Puri sells shares worth Rs 843 crore in HDFC Bank

ಈ ಷೇರು ಮಾರಾಟಕ್ಕೂ ಮುನ್ನ ಪುರಿ ಬಳಿ 0.14 % ಸಂಸ್ಥೆಯ ಪಾಲು ಅಥವಾ 77.96 ಲಕ್ಷ ಷೇರುಗಳಿತ್ತು. ಈ ಮಾರಾಟದ ಬಳಿಕ 0.01 % ಪಾಲು ಅಥವಾ 3.76 ಲಕ್ಷ ಷೇರುಗಳನ್ನು ಮಾತ್ರ ಹೊಂದಿದ್ದಾರೆ ಎಂದು ಷೇರುಪೇಟೆಗೆ ಜುಲೈ ತಿಂಗಳಿನಲ್ಲಿ ನೀಡಿದ ವರದಿಯಲ್ಲಿ ತಿಳಿಸಲಾಗಿದೆ.

ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕಿಂಗ್ ಸಂಸ್ಥೆ ಬೆಳೆಸಿದ ಪುರಿ ಅವರು ಅಕ್ಟೋಬರ್ ತಿಂಗಳಿನಲ್ಲಿ ಸಂಸ್ಥೆ ತೊರೆಯಲಿದ್ದಾರೆ. ಎಚ್ ಡಿ ಎಫ್ ಸಿ ಮಾರುಕಟ್ಟೆ ಮೌಲ್ಯ ಸುಮಾರು 6.14 ಲಕ್ಷ ಕೋಟಿ ರು ನಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+